ಹೊರಬಿತ್ತು ಸುಮಲತಾ ಅಂಬರೀಶ್ ಅವರ ಆರೋಗ್ಯದ ಅಪ್ಡೇಟ್‌.. ಏನಾಗಿದೆ ಗೊತ್ತಾ?

11 ದಿನಗಳ ಹಿಂದೆ ಜೂನ್ 6 ರಂದು ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಧೃಡವಾಗಿದ್ದು ಇದೀಗ ಅವರ ಆರೋಗ್ಯದ ಅಪ್ಡೇಟ್ ನೀಡಿದ್ದಾರೆ.‌. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಾರದೆ ಹೆಚ್ಚಾಗುತಲೇ ಇದೆ.. ಸೋಂಕಿತರ ಸಂಖ್ಯೆ ಲಕ್ಷಗಳನ್ನು ದಾಟುತ್ತಿದ್ದರೆ.. ಅತ್ತ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಲಿದೆ.‌ ಆದರೆ ಗುಣಮುಖರಾಗುತ್ತಿರುವವರ ಸಂಖ್ಯೆ ಸ್ವಲ್ಪ ಸಮಾಧಾನ ತಂದರೂ ಕೂಡ ಕೊರೊನಾದಿಂದ ಜೀವ ಹೋದ ಆ ಕುಟುಂಬಗಳು ಅದೇನು ಪಾಪ ಮಾಡಿದ್ದರು ಎಂದು ಕಾಡದೇ ಇರದು.. ಇನ್ನು ಈ ಸೋಂಕಿಗೆ ಸ್ಟಾರ್ ಗಳು ಸೆಲಿಬ್ರೆಟಿಗಳು ರಾಜಕಾರಣಿಗಳು ಎಲ್ಲರೂ ಸಹ ತುತ್ತಾಗುತ್ತಿದ್ದಾರೆ..

ಇನ್ನು ನಮ್ಮ ರಾಜ್ಯದಲ್ಲಿ ಕಳೆದ ವಾರ ಸುಮಲತಾ ಅಂಬರೀಶ್ ಅವರಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದ್ದು, ಖುದ್ದು ಅವರೇ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಹೋಂ ಕ್ವಾರಂಟೈನ್ ನಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿರುವುದಾಗಿಯೂ ಆದಷ್ಟು ಬೇಗ ಗುಣಮುಖರಾಗುವುದಾಗಿಯೂ ತಿಳಿಸಿದ್ದರು.. ಆದರೆ ಅವರಿಗೆ ಸೋಂಕು ತಗುಲಿ 11 ದಿನಗಳು ಕಳೆದು ಹೋಗಿವೆ.. ಈ ಸಮಯದಲ್ಲಿ ಅವರು ಗುಣಮುಖರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.. ಆದರೆ ಅಸಲಿ ವಿಚಾರ ಬೇರೆಯೇ ಇದೆ.. ಹೌದು ಸುಮಲತಾ ಅಂಬರೀಶ್ ಅವರು ಇನ್ನೂ ಸಹ ಗುಣಮುಖರಾಗಿಲ್ಲ.. ಈ ಬಗ್ಗೆ ಖುದ್ದು ಸುಮಲತಾ ಅವರೇ ಮಾಹಿತಿ ನೀಡಿದ್ದಾರೆ.. ಇಲ್ಲಿದೆ ನೋಡಿ..

“ನಾನು ಕೊರೊನಾದಿಂದ ಗುಣಮುಖ ಆಗಿದ್ದೇನೆ ಎನ್ನುವ ಒಂದು ಸುದ್ದಿ ಹರಿದಾಡುತ್ತಿದೆ. ಆದರೆ, ನಾನು ಸಂಪೂರ್ಣವಾಗಿ ಗುಣಮುಖವಾಗಿರುವುದು, ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷೆಯ ಬಳಿಕವೇ ತಿಳಿಯುವುದು. ಸದ್ಯಕ್ಕೆ ಔಷಧಿ ಹಾಗೂ ಸುಶ್ರುಷೆ ಮುಂದುವರೆದಿದೆ.

ನಾನು ಗುಣಮುಖ ಆಗಲೆಂದು ನೀವೆಲ್ಲರೂ ಮಾಡಿದ ಆಶೀರ್ವಾದ, ಹಾರೈಕೆಗಳಿಗೆ ಋಣಿ. ಇನ್ನು ಕೆಲವೇ ದಿನಗಳಲ್ಲಿ ಗುಣಮುಖ ಆಗುವ ಭರವಸೆ ಇದೆ.

ಕರೋನಾ ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಾಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಕರೋನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಮುಖ್ಯವಾಗಿ, ಸೊಂಕಿತರು ಕ್ವಾರಂಟೈನ್ ಅವಧಿಯನ್ನು ಮತ್ತು ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಹಾಗೂ ಅದು ನಮ್ಮ ಜವಾಬ್ದಾರಿ.. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ತಪ್ಪದೆ ಮುಖಕ್ಕೆ ಮಾಸ್ಕ್ ಧರಿಸುವುದನ್ನ ಮರಿಯಬೇಡಿ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..