ತಾಯಿಯನ್ನು ಕಳೆದುಕೊಂಡ ದಿಯಾ ನಟ ಪೃಥ್ವಿ ಅಂಬರ್.. ಆದರೆ ನಿಜ ಕಾರಣ ಕೇಳಿದರೆ ಮನಕಲಕುತ್ತದೆ..

ನಟ ಪೃಥ್ವಿ ಅಂಬರ್‌ ಸಾಕಷ್ಟು ವರ್ಷಗಳಿಂದಲೂ ನೃತ್ಯ ನಾಟಕ ಸಿನಿಮಾ ಅಂತ ತೊಡಗಿಕೊಂಡಿದ್ದರೂ ಸಹ ಆತನ ಪರಿಚಯ ಜನರಿಗೆ ಆಗಿದ್ದು ಜೊತೆಜೊತೆಯಲಿ ಧಾರಾವಾಹಿ ಮೂಲಕ.. ಎರಡು ವರ್ಷದ ಹಿಂದೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಪೃಥ್ವಿ ಅಂಬರ್‌ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡರು.. ನಂತರದಲ್ಲಿ ದಿಯಾ ಸಿನಿಮಾ ಬಿಡುಗಡೆಯಾಗಿ ತಮ್ಮ ವೃತ್ತಿ ಬದುಕಿನ ಬಹುದೊಡ್ಡ ಯಶಸ್ಸು ಕಂಡರು.. ಇಷ್ಟು ವರ್ಷದ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲವನ್ನು ಪಡೆದ ಪೃಥ್ವಿ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶವನ್ನು ಪಡೆದರು.. ಆದರೆ ಮಗನ ಏಳಿಗೆಯ ದಿನಗಳನ್ನು ನೋಡುವ ಸಮಯದಲ್ಲಿ ತಾಯಿಯೇ ಇಲ್ಲವಾಗಿ ಹೋದರು..

ಹೌದು ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ತಾಯಿ ಸುಜಾತಾ ಅಂಬಾರ್ ಅವರು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಸುಜಾತಾ ಅವರು ವೀರಪ್ಪ ಅಂಬಾರ್ ಧರ್ಮಪತ್ನಿ. ಇಂದು ಸುಜಾತಾ ಅಂತ್ಯಕ್ರಿಯೆಯು ಅವರ ಊರಿನಲ್ಲಿ ನಡೆಯಲಿದೆ. ದುರ್ಗಾಪರಮೇಶ್ವರಿ ಸಂಘದ ಕಾರ್ಯದರ್ಶಿಯಾಗಿದ್ದ ಸುಜಾತಾ ಅವರು ಹಲವು ಸಾಮಾಜಿಕ ಕೆಲಸಗಳಲ್ಲಿ ಭಾಗಿಯಾಗಿದ್ದರು. ಸುಜಾತಾ ಅವರ ನಿಧನಕ್ಕೆ ಚಿತ್ರತಂಡ ಸೇರಿ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ಶುಗರ್‌ಲೆಸ್ ಸಿನಿಮಾ ಯಶಸ್ಸು ಸಂಭ್ರಮಿಸುವ ಸಮಯ ಇದು. ಪೃಥ್ವಿ ಅಂಬಾರ್, ಪ್ರಿಯಾಂಕಾ ತಿಮ್ಮೇಶ್ ನಟನೆಯ ‘ಶುಗರ್‌ಲೆಸ್‌’ ಚಿತ್ರ ಕಳೆದ ಜುಲೈ 8ರಂದು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಲಿತ್ತು. ವಿಜಯ್ ಸೇತುಪತಿ ಸೇರಿ ಅನೇಕರು ಈ ಚಿತ್ರದ ಕಂಟೆಂಟ್‌ ಮೆಚ್ಚಿದ್ದರು, ಕಿಚ್ಚ ಸುದೀಪ್ ಕೂಡ ಈ ಸಿನಿಮಾಕ್ಕೆ ಶುಭ ಹಾರೈಸಿದ್ದರು. ಈ ಯಶಸ್ಸನ್ನು ಪೃಥ್ವಿ ಸಂಭ್ರಮಿಸುತ್ತಿರುವಾಗಲೇ ಅವರ ತಾಯಿ ನಿಧನರಾಗಿದ್ದಾರೆ.

ಯಶಸ್ಸಿನೆಡೆಗೆ ಹೆಜ್ಜೆ ಇಡುತ್ತಿರುವ ಸಮಯ. ಡಾ ಶಿವರಾಜ್‌ಕುಮಾರ್ ಅಭಿನಯದ ‘ಬೈರಾಗಿ’ ಚಿತ್ರದಲ್ಲಿ ಪೃಥ್ವಿ ಅದ್ಭುತವಾಗಿ ನಟಿಸಿ, ಮೆಚ್ಚುಗೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ 13, 14 ವರ್ಷಗಳ ಹೋರಾಟದ ಬಳಿಕ ಅವರಿಗೆ ‘ದಿಯಾ’ ಸಿನಿಮಾ ದೊಡ್ಡ ಖ್ಯಾತಿ ತಂದುಕೊಟ್ಟಿತ್ತು. ಚಿತ್ರರಂಗದಲ್ಲಿ ಯಶಸ್ಸಿನೆಡೆಗೆ ಪೃಥ್ವಿ ಅಂಬಾರ್ ಅವರು ಒಂದೊಂದಾಗಿ ಹೆಜ್ಜೆ ಇಡುತ್ತಿರುವ ಸಮಯ ಇದಾಗಿದೆ. ರಾಧಾ ಕಲ್ಯಾಣ, ಜೊತೆ ಜೊತೆಯಲಿ ಧಾರಾವಾಹಿ ಜೊತೆಗೆ ಅನೇಕ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಪೃಥ್ವಿ ಅಂಬಾರ್ ಭಾಗವಹಿಸಿದ್ದರು. ತುಳು, ಕನ್ನಡ ಚಿತ್ರರಂಗದ ಜೊತೆಗೆ ಅವರು ತಮಿಳು, ಹಿಂದಿ ಭಾಷೆಯಲ್ಲಿಯೂ ಅವರು ನಟಿಸುತ್ತಿದ್ದಾರೆ.

ಆದರೆ ಕಾಕತಾಳಿಯವೋ ಏನೋ ದಿಯಾ ಸಿನಿಮಾದಲ್ಲಿ ಆದಿ ತನ್ನ ತಾಯಿಯನ್ನು ಕಳೆದುಕೊಂಡು ರೋಧಿಸುವಂತೆ ನಿಜ ಜೀವನದಲ್ಲಿಯೂ ಆಗಿ ಹೋಯಿತು..‌ ಸಿನಿಮಾದಂತೆಯೇ ನಿಜ ಜೀವನದಲ್ಲಿಯೂ ಆಗಿದ್ದು ಕಂಡು ನಿಜಕ್ಕೂ ಮನಕಲಕುತ್ತದೆ.. ಸುಜಾತ ಅವರಿಗೆ ತೀರಾ ವಯಸ್ಸೇನೂ ಆಗಿರಲಿಲ್ಲ.. ಆದರೆ ಚಿಕ್ಕ ವಯಸ್ಸಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.. ಹೌದು ಸಿನಿಮಾದಂತೆಯೇಚಿಕ್ಕ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ಕಣ್ಣೀರಿಡುವಂತಾಗಿದ್ದು ಕಂಡು ಸ್ನೇಹಿತರೂ ಸಹ ಭಾವುಕರಾಗಿದ್ದಾರೆ.. ಇನ್ನು ಈ ಸಮಯದಲ್ಲಿ ಶಿವಣ್ಣ ಧನಂಜಯ್‌ ಸೇರಿದಂತೆ ಸಿನಿಮಾರಂಗದ ಸಾಕಷ್ಟು ಸ್ನೇಹಿತರು ಪೃಥ್ವಿ ಅಂಬರ್‌ ಅವರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514