ತನ್ನ ಮೊದಲ ಮದುವೆ ಬಗ್ಗೆ ನೋವು ಹಂಚಿಕೊಂಡ ಕಿರುತೆರೆ ನಟಿ ಸುಜಾತ..

ಪ್ರತಿಯೊಬ್ಬರ ಜೀವನದಲ್ಲಿ ಕಹಿ ಘಟನೆ ಅನ್ನೋದು ಒಂದಲ್ಲಾ ಒಂದು ವಿಚಾರಕ್ಕೆ ನಡೆದೇ ಇರುತ್ತದೆ.. ಅದೇ ರೀತಿ ಕನ್ನಡ ಕಿರುತೆರೆಯ ಖ್ಯಾತ ನಟಿ ಸುಜಾತ ಅವರ ಜೀವನದಲ್ಲಿಯೂ ಸಹ ಮದುವೆ ವಿಚಾರದಲ್ಲಿ ಅಂತಹುದೇ ಒಂದು ಕಹಿ ಘಟನೆ ನಡೆದು ಹೋಗಿತ್ತು.. ಆ ನೋವನ್ನು ಇದೀಗ ಹಂಚಿಕೊಂಡಿದ್ದಾರೆ.. ಹೌದು ಕಿರುತೆರೆ ನಟಿ ಸುಜಾತಾ ಬಹಳಷ್ಟು ವರ್ಷಗಳ ಕಾಲದಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವರು.. ಶೋಗಳು ಧಾರಾವಾಹಿಗಳು ಹೀಗೆ ಸಾಕಷ್ಟು ಕಡೆ ಬ್ಯುಸಿ ಆಗಿರುವರು.. ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಅದ್ಭುತ ನಟಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ನಟನೆ ಮಾತ್ರವಲ್ಲದೇ ನಿರೂಪಣೆಯ ಮೂಲಕ ಸಹ ಜನರ ಮನಗೆದ್ದವರು ಈ ಸುಜಾತಾ. ಸದ್ಯ ಈ ನಟಿ ಕಲರ್ಸ್ ವಾಹಿನಿಯ ರಾಜಾ ರಾಣಿ ಸೀಸನ್​ 2 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಗಂಡನ ಜೊತೆ ಈ ರಿಯಲ್ ಜೋಡಿಗಳ ಗೇಮ್​ ಶೋನಲ್ಲಿ ಭಾಗವಹಿಸಿರುವ ಸುಜಾತಾ ತಮ್ಮ ಜೀವನದ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹೌದು ಸುಜಾತ ಅವರು ಸದ್ಯ ತಮ್ಮ ಎರಡನೆ ಪತಿ ಅಕ್ಷಯ್ ಅವರ ಜೊತೆ ರಾಜಾ ರಾಣಿ ಶೋನಲ್ಲಿ ಭಾಗವಹಿಸಿದ್ದಾರೆ.. ತಮ್ಮ ಮೊದಲ ಮದುವೆಯ ಬಗ್ಗೆ ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ರಿಯಾಲಿಟಿ ಶೋ ರಿಯಲ್ ಜೋಡಿಗಳ ನಡುವಿನ ಸಂಬಂಧವನ್ನು ಇನ್ನೂ ಗಟ್ಟಿಗೊಳಿಸುವ ಹಲವಾರು ಟಾಸ್ಕ್​ಗಳನ್ನು ನೀಡುತ್ತದೆ. ಈ ಬಾರಿ ಸುಜಾತಾ ತಮ್ಮ ಜೀವನದಲ್ಲಿ ನಡೆದ ಕಹಿ ವಿಚಾರವನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಂಡಿದ್ದಾರೆ.

ಹೌದು ಸುಜಾತಾ ಅವರಿಗೆ ಅಕ್ಷಯ್ ಜೊತೆ ಮದುವೆ ಎರಡನೆಯದು. ಈ ಮೊದಲು ಅವರಿಗೆ ಮತ್ತೊಂದು ಮದುವೆಯಾಗಿತ್ತು. ಆದರೆ ಬಹಳ ಕಷ್ಟ ಹಾಗೂ ನೋವನ್ನು ಆ ಮದುವೆಯಲ್ಲಿ ನಟಿ ಅನುಭವಿಸಿದ್ದರಂತೆ. ಹಾಗಾಗಿ ಅವರು ಮತ್ತೆ ಮದುವೆಯಾಗುವುದೇ ಬೇಡ ಎಂದು ನಿರ್ಧರಿಸಿದ್ದರಂತೆ. ಆದರೆ ವಿಧಿಯಾಟ ಬೇರೆ ಇತ್ತು, ಸುಜಾತಾ ಅಕ್ಷಯ್ ಅವರನ್ನು ಭೇಟಿಯಾಗಿ, ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಈ ಇಬ್ಬರು ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಸುಜಾತಾ ಎಲ್ಲರಿಗೂ ಎರಡನೇ ಅವಕಾಶ ಸಿಗುವುದಿಲ್ಲ. ನನಗೆ ಸಿಕ್ಕಿದೆ. ನಾನು ನಿಮಗೆ ಥ್ಯಾಂಕ್ಸ್ ಹೇಳಬೇಕು, ಹಳೆಯ ಕೆಟ್ಟ ಘಟನೆಗಳನ್ನು ಮರೆಸಿ ನನಗೆ ಸುಂದರವಾದ ಜೀವನ ಕೊಟ್ಟಿದ್ದೀರಿ ಎಂದು ಪತಿ ಅಕ್ಷಯ್​ಗೆ ಧನ್ಯವಾದ ತಿಳಿಸಿದ್ದಾರೆ.

ಅಲ್ಲದೇ, ನನ್ನ ಜೀವನದಲ್ಲಿ ಅಕ್ಷಯ್ ಬಿಟ್ಟು ಬೇರೆ ಯಾರಿಗೂ ಅವಕಾಶವಿಲ್ಲ, ಅವರಿಲ್ಲದೇ ನನ್ನ ಬದುಕನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಐ ಲವ್ ಯೂ ಎಂದಿದ್ದಾರೆ ಸುಜಾತಾ. ಈ ಸಮಯದಲ್ಲಿ ಅಕ್ಷಯ್ ಮತ್ತು ಸುಜಾತಾ ಹೇಗೆ ಭೇಟಿಯಾದರು ಎಂಬುದನ್ನ ಸಹ ನೆನಪಿಸಿಕೊಂಡಿದ್ದಾರೆ. ಸುಜಾತಾ ಹೇಳಿದಂತೆ, ಅವರಿಬ್ಬರದ್ದು ಬ್ಯೂಟಿಫುಲ್ ಜರ್ನಿ, ಸುಜಾತಾ, ಅಕ್ಷಯ್ ಜೊತೆ ರೆಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಆಗ ಅವರಿಬ್ಬರ ಪರಿಚಯವಾಗಿ, ನಂತರ ಉತ್ತಮ ಸ್ನೇಹಿತರಾದರಂತೆ. ನಂತರ ಅದು ಪ್ರೀತಿಗೆ ತಿರುಗಿತ್ತು. ಇಬ್ಬರ ಮನೆಯಲ್ಲೂ ಇಷ್ಟಪಟ್ಟು ಒಪ್ಪಿಗೆ ನೀಡಿದ್ದರಂತೆ. ನಂತರ ಇಬ್ಬರು ಮದುವೆಯಾಗಿದ್ದೇವೆ, ನನಗೆ ಅಕ್ಷಯ್ ಬೆಸ್ಟ್​ಫ್ರೆಂಡ್​ ಎಂದಿದ್ದಾರೆ.

ನಾವಿಬ್ಬರು ಒಟ್ಟಿಗೆ ಬದುಕಲು ಹುಟ್ಟಿದ್ದೇವೆ ಎಂದ ಪತಿ.. ಇನ್ನು ಸುಜಾತಾ ಅವರ ಈ ಮಾತಿಗೆ ಪ್ರತಿಕ್ರಿಯಿಸಿದ ಪತಿ ಅಕ್ಷಯ್ ನನಗೆ ನೀನು ಥ್ಯಾಂಕ್ಸ್ ಹೇಳುವ ಅವಶ್ಯಕತೆ ಇಲ್ಲ. ನಾವಿಬ್ಬರು ಒಟ್ಟಿಗೆ ಬದುಕಲು ಹುಟ್ಟಿದ್ದೇವೆ. ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ, ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಜೋಡಿ ಎಂದಿದ್ದಾರೆ. ಅಷ್ಟೇ ಅಲ್ಲದೇ, ನಾನು ನನ್ನ ಜೀವನದಲ್ಲಿ ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದೇನೆ. ಸುಜಾತಾ ನನ್ನ ಅತಿ ಉತ್ತಮ ಸಂಗಾತಿ. ನನ್ನ ಜೀವನದ ಭಾಗವಾಗಿದ್ದಕ್ಕೆ ಥ್ಯಾಂಕ್ಯೂ ಎನ್ನುವ ಮೂಲಕ ಪತ್ನಿಗೆ ಅಕ್ಷಯ್ ಧನ್ಯವಾದ ತಿಳಿಸಿದ್ದಾರೆ.

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514