ರಾಜಾ ರಾಣಿ ವೇದಿಕೆಯಲ್ಲಿಯೇ ಸುಜಾತಗೆ ದುಬಾರಿ ಉಡುಗೊರೆ ಕೊಟ್ಟು ಕಣ್ಣೀರಿಟ್ಟ ಅಕ್ಷಯ್..

ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ರಾಜಾ ರಾಣಿ ಶೋ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇದೀಗ ಅಂತಹುದೇ ಒಂದು ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ.. ಹೌದು ರಾಜಾ ರಾಣಿ ಶೋನಲ್ಲಿ ಭಾಗವಹಿಸಿರುವ ಸುಜಾತಾ ಹಾಗೂ ಅಕ್ಷಯ್ ಜೋಡಿ ಮತ್ತಷ್ಟು ಸ್ಪೆಷಲ್ ಎನ್ನಬಹುದು.. ಅದರಲ್ಲೂ ಸುಜಾತಾ ಅವರು ಈ ಹಿಂದೆ ಒಂದು ಮದುವೆಯಾಗಿ ನೋವು ಅನುಭವಿಸಿ ನಂತರ ಅಕ್ಷಯ್ ಅವರ ಜೊತೆ ಹೊಸ ಜೀವನ ಆರಂಭಿಸಿದ್ದು ಮಗನಿಗೆ ಅಕ್ಷಯ್ ಅವರಿಂದ ತಂದೆ ಪ್ರೀತಿ ದೊರೆತ ವಿಚಾರ ಹಂಚಿಕೊಂಡು ಭಾವುಕರಾಗಿದ್ದರು.. ಇದೀಗ ಸುಜಾತ ಅವರಿಗೆ ಅಕ್ಷಯ್ ಅವರು ರಾಜಾ ರಾಣಿ ಶೋನಲ್ಲಿ ಮತ್ತೊಂದು ಉಡುಗೊರೆ ಕೊಟ್ಟು ಸಂತೋಷ ಪಡಿಸಿದ್ದಾರೆ‌‌.. ಹೌದು ಅಕ್ಷಯ್ ಜೊತೆಗೆ ನಟಿ ಸುಜಾತಾ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಪಲ್ ರಿಯಾಲಿಟಿ ಶೋ ರಾಜಾ ರಾಣಿ ಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಜಾ ರಾಣಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಿಗೆಲ್ಲಾ ಒಲವಿನ ಉಡುಗೊರೆ ಚಟುವಟಿಕೆ ನೀಡಲಾಗಿತ್ತು. ಇದರಲ್ಲಿ ಪತ್ನಿ ಸುಜಾತಾಗೆ ಅಕ್ಷಯ್ ಡೈಮಂಡ್ ರಿಂಗ್‌ಅನ್ನ ಉಡುಗೊರೆಯಾಗಿ ನೀಡಿದರು. ಗಿಫ್ಟ್ ನೀಡುವ ಮುನ್ನ ಪತಿ ಅಕ್ಷಯ್ ಭಾವುಕರಾಗಿ ಕಣ್ಣೀರು ಹಾಕಿದರು.

ಒಲವಿನ ಉಡುಗೊರೆ ಚಟುವಟಿಕೆ ನಿಮಿತ್ತ ಸುಜಾತಾ ಹಾಗೂ ಪತಿ ಅಕ್ಷಯ್ ವೇದಿಕೆ ಮೇಲೆ ಬಂದರು. ಪತ್ನಿ ಸುಜಾತಾ ಕೈಯನ್ನ ಹಿಡಿದುಕೊಂಡ ಅಕ್ಷಯ್, ನಾವು ಮದುವೆಯಾಗಿ ಒಂಬತ್ತು ವರ್ಷ ಆಯ್ತು. ನಾವು ಮದುವೆಯಾದಾಗ ನನಗೆ ಭಯ ಇತ್ತು. ಮದುವೆಯಲ್ಲಿ ನಿನಗೆ ಆಗಲೇ ಬ್ಯಾಡ್ ಎಕ್ಸ್‌ಪೀರಿಯೆನ್ಸ್ ಆಗಿತ್ತು. ನನ್ನನ್ನ ನಂಬಿ ನೀನು ಇನ್ನೊಂದು ಸ್ಟೆಪ್ ಮುಂದೆ ಇಟ್ಟು ಮದುವೆಯಾದೆ. ಈ ಒಂಬತ್ತು ವರ್ಷಗಳಲ್ಲಿ ನೀನು ನನಗೆ ಕಮ್ಫರ್ಟ್ ಝೋನ್ ಕೊಟ್ಟಿದ್ಯಾ. ಅದಕ್ಕೆ ನಾನು ನಿನಗೆ ಥ್ಯಾಂಕ್ಸ್ ಹೇಳಬೇಕು ಎಂದು ಹೇಳುತ್ತಾ ಕಣ್ಣೀರಿಟ್ಟರು.

ನಾನು ಅಂದುಕೊಂಡಿರಲಿಲ್ಲ. ನೀನು ನನಗೆ ಈ ತರಹ ಕಮ್ಫರ್ಟ್ ಲೆವೆಲ್ ಕೊಡ್ತೀಯಾ ಅಂತ. ಥ್ಯಾಂಕ್ಯು. ನನ್ನ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸು, ಅಂತ ಹೇಳಿ ಮಂಡಿಯೂರಿ ವಜ್ರದ ಉಂಗುರವನ್ನು ಪತ್ನಿ ಸುಜಾತಾಗೆ ಅಕ್ಷಯ್ ತೊಡಿಸಿದರು. ಬಳಿಕ, ನನಗೆ ಆಗ ಅವಕಾಶ ಸಿಕ್ಕಿರಲಿಲ್ಲ. ಇಷ್ಟು ದೊಡ್ಡ ವೇದಿಕೆ ಮೇಲೆ ನನಗೆ ಈಗ ದೊಡ್ಡ ಅವಕಾಶ ಸಿಕ್ಕಿದೆ. ನಿನಗೆ ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ ಎಂದರು ಅಕ್ಷಯ್.

ಅಕ್ಷಯ್ ಅವರು ಪ್ರೀತಿಯಿಂದ ನೀಡಿದ ಉಡುಗೊರೆ ಪಡೆದ ಸುಜಾತ ಅವರು ಮಾತನಾಡಿ.. ಥ್ಯಾಂಕ್ಯು, ಐ ಲವ್ ಯೂ. ನನಗೆ ಮಾತೇ ಬರುತ್ತಿಲ್ಲ. ಏನಾದರೂ ಕೊಡಿಸು ಅಂತ ನಾನು ಯಾವತ್ತೂ ಇವರಿಗೆ ಕೇಳೇ ಇಲ್ಲ. ಪ್ರತಿ ಬಾರಿ ನನಗೆ ಏನೇನೋ ಉಡುಗೊರೆಗಳು, ಸರ್‌ಪ್ರೈಸ್‌ಗಳು ಕೊಡ್ತಾರೆ. ಮದುವೆಯಾದ್ಮೇಲೆ ನಾನು ಕೆಲಸ ಮಾಡುತ್ತಿದ್ದ ಟೀಮ್‌ನ ಒಮ್ಮೆ ಸರ್‌ಪ್ರೈಸ್ ಆಗಿ ಕರೆಸಿದ್ದರು. ಇನ್ನೊಮ್ಮೆ ಫುಕೆಟ್‌ಗೆ ಕರೆದುಕೊಂಡು ಹೋಗಿದ್ದರು. ಈಗ ವಜ್ರದ ಉಂಗುರ ತಂದುಕೊಟ್ಟಿದ್ದಾರೆ.. ಥ್ಯಾಂಕ್ಯು ಎಂದು ಪತಿ ಅಕ್ಷಯ್‌ಗೆ ಸುಜಾತಾ ಹೇಳಿದರು. ನಾನು ನಿಮಗೆ ನಿಮ್ಮ ಲೈಫ್‌ನಲ್ಲಿ ಅಷ್ಟು ಕಮ್ಫರ್ಟ್ ಝೋನ್ ಕೊಟ್ಟಿದ್ದೀನಿ ಅಂತ ಹೇಳಿದ್ರಲ್ಲ.. ನನಗೆ ತುಂಬಾ ಸಂತೋಷ ಆಯ್ತು. ನಾನು ನಿಮ್ಮ ನಿರೀಕ್ಷೆಯಂತೆ ಇನ್ನೂ ಜೀವಿಸಬೇಕು ಎಂದು ಪತಿಗೆ ಸುಜಾತಾ ತಿಳಿಸಿದರು.

ಇನ್ನು ಇದೇ ಸಮಯದಲ್ಲಿ ತಾರಾ ಅವರು ಮಾತನಾಡಿ.. ಸುಜಾತಾಗೆ ಅಕ್ಷಯ್ ದೊಡ್ಡ ಗಿಫ್ಟ್. ಆದರೆ, ಸುಜಾತಾನೇ ಗಿಫ್ಟ್ ಅಂತ ಕರೆದ್ರಲ್ಲ ಅದು ಗ್ರೇಟ್. ನಿಮ್ಮನ್ನ ನೋಡಿದಾಗಲೆಲ್ಲಾ ನನಗೆ ಗೌರವದ ಭಾವನೆ ಮೂಡಿಬರುತ್ತದೆ. ನೀವಿಬ್ಬರು ಚೆನ್ನಾಗಿರಿ ಎಂದರು ರಾಜಾ ರಾಣಿ ಕಾರ್ಯಕ್ರಮದಲ್ಲಿ ಮನಸ್ಪೂರ್ತಿಯಾಗಿ ಹಾರೈಸಿದರು..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622