ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆಯ ಮತ್ತೊಂದು ಜೋಡಿ..

ಕನ್ನಡ ಕಿರುತೆರೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಸಾಲು ಸಾಲು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅದರಲ್ಲೂ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಮಂದಿ ಅದೇ ಒಳ್ಳೆಯ ಸಮಯ ಎಂದುಕೊಂಡು ಮದುವೆ ನೆರವೇರಿಸಿಕೊಂಡರು.. ಒಂದಷ್ಟು ಕಲಾವಿದರು ಅರೇಂಜ್ ಮ್ಯಾರೇಜ್ ಆದರೆ ಬಹಳಷ್ಟು ಮಂದಿ ಕಲಾವಿದರದ್ದೇ ಪ್ರೀತಿಸಿ ಅವರ ಜೊತೆಯೇ ನೂತನ ಜೀವನ ಆರಂಭಿಸಿದರು.. ಅರುಣ್ ಮಯೂರಿ.. ಚಂದನ್ ಕವಿತಾ.. ನಿವೇದಿತಾ ಚಂದನ್ ಹೀಗೆ ಸಾಕಷ್ಟು ಕಲಾವಿದರು ಮದುವೆ ಮಾಡಿಕೊಂಡು ಮತ್ತೆ ತಮ್ಮ ವೃತ್ತಿ ಬದುಕಿಗೆ ಮರಳಿದ್ದಾರೆ..

ಇನ್ನು ಇದೀಗ ಕನ್ನಡ ಕಿರುತೆರೆಯ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಜೀ ಕನ್ನಡ ವಾಹಿನಿಯ ಕಲಾವಿದರ ದಂಡೇ ಮದುವೆಯಲ್ಲಿ ಕಾಣಿಸಿಕೊಂಡು ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.. ಹೌದು ಆ ಜೋಡಿ ಮತ್ಯಾರೂ ಅಲ್ಲ ಕನ್ನಡದ ಖ್ಯಾತ ಧಾರಾವಾಹಿ ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡಿದ್ದ ನಟಿ ಗೇಬ್ರಿಯಾಲ ಹಾಗೂ ನಟ ಸುಹಾಸ್ ಜೋಡಿ.. ಹೌದು ಗೇಬ್ರಿಯಾಲ ಹಾಗೂ ಸುಹಾಸ್ ಇಬ್ಬರೂ ಸಹ ಕಮಲಿ ಧಾರಾವಾಹಿಯಲ್ಲಿ ಅಭಿನಯಿಸುತ್ತುದ್ದು ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು.. ಇವರಿಬ್ಬರ ಸ್ನೇಹ ಪ್ರೀತಿಯಾಗಿ ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದರು.. ಕಳೆದ ಒಂದಷ್ಟು ದಿನಗಳ ಹಿಂದೆ ಈ ಜೋಡಿ ತಮ್ಮಿಬ್ಬರ ನಡುವಿನ ಪ್ರೀತಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಸಧ್ಯದಲ್ಲಿಯೇ ಮದುವೆಯಾಗುತ್ತಿರುವುದಾಗಿ ತಿಳಿಸಿದ್ದರು.. ಅದರಂತೆ ಇಬ್ಬರ ನಿಶ್ಚಿತಾರ್ಥವೂ ನೆರವೇರಿತ್ತು‌.. ಇದೀಗ ಈ ಜೋಡಿ ಸಪ್ತಪದಿ ತುಳಿಯುವ ಮೂಲಕ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ..

ಹೌದು ಗೇಬ್ರಿಯಾಲ ಹಾಗೂ ಸುಹಾಸ್ ಇಬ್ಬರೂ ಸಹ ಕಮಲಿ ಧಾರಾವಾಹಿಯಲ್ಲಿ ಅನ್ಹಿನಯಿಸುತ್ತಿದ್ದು ಗೇಬ್ರಿಯಾಲ ಅನಿಕಾ ಪಾತ್ರ ಮಾಡಿದರೆ ಅತ್ತ ಸುಹಾಸ್ ಕಮಲಿಯ ಸ್ನೇಹಿತ ಶಂಭು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.. ಹೊರಾಂಗಣ ಚಿತ್ರೀಕರಣ ಇದ್ದ ಸಮಯದಲ್ಲಿ ಈ ಇಬ್ಬರೂ ಬಹಳ ಹತ್ತಿರವಾಗಿದ್ದು ಇಬ್ಬರ ನಡುವೆ ಪ್ರೀತಿ ಮೂಡಿತಂತೆ.. ಅಷ್ಟೇ ಅಲ್ಲದೇ ಇಬ್ಬರೂ ಅದಾಗಲೇ ಕಳೆದ ಮೂರು ವರ್ಷಗಳಿಂದಲೂ ರಿಲೇಶನ್ ಶಿಪ್ ನಲ್ಲಿದ್ದರು ಎಂದು ತಿಳಿದು ಬಂದಿದೆ.. ಆದರೆ ವಿಚಾರವನ್ನು ಹೊರಗೆಲ್ಲೂ ಹೇಳಿಕೊಂಡಿರಲಿಲ್ಲ.. ಗೇಬ್ರಿಯಾಲ ಹಾಗೂ ಸುಹಾಸ್ ಇಬ್ಬರೂ ಸಹ ಅದಾಗಲೇ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದು ಇದೀಗ ಕುಟುಂಬಸ್ಥರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಿದ್ದರೆ.. ಇನ್ನು ಈ ಜೋಡಿಯ ಅರತಕ್ಷತೆ ನಿನ್ನೆ ಬೆಂಗಳೂರಿನಲ್ಲಿ ನೆರವೇರಿದ್ದು ಧಾರಾವಾಹಿಯ ತಂಡ.. ಜೀ ಕನ್ನಡದ ಬೇರೆ ಧಾರಾವಾಹಿಗಳ ಸ್ನೇಹಿತರು ಎಲ್ಲರೂ ಆಗಮಿಸಿ ಶುಭ ಕೋರಿದ್ದಾರೆ..

ಇನ್ನು ಅದೇ ಧಾರಾವಾಹಿಯಲ್ಲಿ ನಿಂಗಿ ಪಾತ್ರ ಮಾಡುತ್ತಿದ್ದ ಅಂಕಿತಾ ಅವರೂ ಕೂಡ ಕೆಲ ತಿಂಗಳ ಹಿಂದಷ್ಟೇ ಮದುವೆಯಾಗಿದ್ದು ಇದೀಗ ಗೇಬ್ರಿಯಾಲ ಮದುವೆಯ ಸುದ್ದಿ ಹಂಚಿಕೊಂಡಿದ್ದಾರೆ.. ಕಳೆದ ಸಾಕಷ್ಟು ವರ್ಷಗಳಿಂದ ಒರಸರಾವಾಗುತ್ತಿದ್ದ ಕಮಲಿ ಇದೀಗ ಮುಕ್ತಾಯಗೊಂಡಿದ್ದು ಅತ್ತ ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಇತ್ತ ಬೇರೆ ಕಲಾವಿದರು ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ.. ಮತ್ತಷ್ಟು ಕಲಾವಿದರು ಮದುವೆ ಕುಟುಂಬ ಅಂತ ವ್ಯಯಕ್ತಿಕ ಜೀವನದ ಕಡೆ ಗಮನ ನೀಡಿದ್ದಾರೆ.. ಒಟ್ಟಿನಲ್ಲಿ ನಿಜ ಜೀವನದಲ್ಲಿಯೂ ಒಂದಾದ ಮತ್ತೊಂದು ಕಿರುತೆರೆ ಜೋಡಿಗೆ ಧಾರಾವಾಹಿಯ ಪ್ರೇಕ್ಷಕರು ಕಿರುತೆರೆ ಪ್ರಿಯರು ಶುಭ ಹಾರೈಸಿದ್ದಾರೆ..

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321