ಶಾಕಿಂಗ್ ನ್ಯೂಸ್..‌ ಸಚಿವ ಡಾ.ಸುಧಾಕರ್ ಹೆಂಡತಿ ಹಾಗೂ ಮಗಳಿಗೂ ಕೊರೊನಾ ಪಾಸಿಟಿವ್.. ಗಂಡು ಮಕ್ಕಳ ರಿಪೋರ್ಟ್ ಏನಾಗಿದೆ ಗೊತ್ತಾ?

ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅವರ ಮನೆಯಲ್ಲಿ ಇದೀಗ ಸಾಲು ಸಾಲು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿದ್ದು.. ಆತಂಕವನ್ನುಂಟು ಮಾಡಿದೆ.. ಹೌದು ಕೆಲ ದಿನಗಳ ಹಿಂದಷ್ಟೇ ಸುಧಾಕರ್ ಅವರ ಮನೆಯ ಅಡುಗೆ ಕೆಲಸದವರಿಗೆ ಕೊರೊನಾ ಸೋಂಕುಬಿರುಬುದು ಧೃಡ ಪಟ್ಟಿತ್ತು.. ಅದರ ಬೆನ್ನಲ್ಲೇ ಇದೀಗ ಸುಧಾಕರ್ ಅವರ ತಂದೆ ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು‌‌..

ನಿನ್ನೆ ಸುಧಾಕರ್ ಅವರ ತಂದೆಯ ಕೋವಿಡ್ ಪರೀಕ್ಷೆ ನಡೆಸಲಾಗಿ ಅವರ ವರದಿಯಲ್ಲಿ ಕೊರೊನಾ ಇರುವುದು ಧೃಡ ಪಟ್ಟಿದೆ ಎಂದು ತಿಳಿಸಿದ್ದರು.. “ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿ ಯಲ್ಲಿ ಸೋಂಕು ದೃಢಪಟ್ಟಿದೆ. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ.” ಎಂದು ಪೋಸ್ಟ್ ಮಾಡಿದ್ದರು.. ಆದರೀಗ ಪತ್ನಿ ಹಾಗೂ ಮಗಳಿಗೂ ಕೊರೊನಾ ಇರುವುದು ಖಚಿತವಾಗಿದೆ..

ಹೌದು ಸುಧಾಕರ್ ಅವರ ತಂದೆಯ ಬೆನ್ನಲ್ಲೇ ಮನೆ ಮಂದಿಗೆಲ್ಲಾ ಕೊರೊನಾ ಪರೀಕ್ಷೆ ನಡೆಸಲಾಗಿತ್ತು.. ಎಲ್ಲರನ್ನಿ ಹೋಂ ಕ್ವಾರಂಟೈನ್ ಮಾಡಲಾಗಿತ್ತು.. ಇದೀಗ ವರದಿ ಬಂದಿದ್ದು, ಸುಧಾಕರ್ ಅವರ ಪತ್ನಿ ಹಾಗೂ ಮಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.. ಜೊತೆಗೆ ಮನೆಯ ಸಹಾಯಕ ಕೆಲಸಗಾರರೊಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.. ಇದರ ಬಗ್ಗೆ ಪೋಸ್ಟ್ ಮಾಡಿರುವ ಸುಧಾಕತ್ ಅವರು “ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ.” ಜೊತೆಗೆ “ನಮ್ಮ ಮನೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಅವರೂ ಕೂಡ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರೂ ಬೇಗ ಗುಣಮುಖರಾಗಲಿ ಎಂದು ನಮ್ಮ ಪ್ರಾರ್ಥನೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಇನ್ನುಳಿದಂತೆ ಸುಧಾಕರ್ ಅವರಿಗೂ ಹಾಗೂ ಅವರ ಇಬ್ಬರು ಗಂಡು ಮಕ್ಕಳಿಗೂ ಕೊರೊನಾ ಪರೀಕ್ಷೆ ನಡೆಸಲಾಗಿ ವರದಿ ನೆಗಟಿವ್ ಬಂದಿದೆ..