ಬ್ರೇಕಿಂಗ್ ನ್ಯೂಸ್.. ಅಪ್ಪನಿಗೆ ಸೋಂಕು ಇರುವುದು ಧೃಡ.. ಆತಂಕ ಹೆಚ್ಚಾಗಿದೆ ಎಂದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್..

ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ‌ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ನಿಂದಾಗಿ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.. ಇದೀಗ ಇಂದು ವೈದ್ಯಕೀಯ ಶಿಕ್ಷಣ ಸಚಿವರ ಮನೆಯಲ್ಲೇ ಸೋಂಕು ಇರುವುದು ಧೃಡ ಪಟ್ಟಿದೆ..

ಹೌದು ವೈದ್ಯಕೀಯ ಶಿಕ್ಷಣ ಸಚಿವರನ್ನ ಈ ಹಿಂದೆಯೂ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.‌ ಆದರೆ ಆ ಬಳಿಕ ವರದಿ ನೆಗಟೀವ್ ಬಂದಿತ್ತು.. ಆದರೀಗ ಡಾ.ಸುಧಾಕರ್ ಅವರ ತಂದೆಗೆ ಸೋಂಕು ಇರುವುದು ಧೃಡ ಪಟ್ಟಿದೆ.‌ ಇನ್ನು ಡಾ.ಸುಧಾಕರ್ ಅವರನ್ನೂ ಸೇರಿದಂತೆ ಮನೆಯ ಎಲ್ಲಾ ಸದಸ್ಯರಿಗೂ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದಾರೆ..

ಈ ಬಗ್ಗೆ ಖುದ್ದು ಡಾ.ಸುಧಾಕರ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ವಿಚಾರವನ್ನು ಧೃಡಪಡಿಸಿದ್ದಾರೆ.. “ನನ್ನ ತಂದೆಯವರ ಕೋವಿಡ್ ಪರೀಕ್ಷಾ ವರದಿಯಲ್ಲಿ ಸೋಂಕು ಧೃಡಪಟ್ಟಿದೆ.. ಕುಟುಂಬದ ಇತರೆ ಸದಸ್ಯರ ವರದಿಗಾಗಿ ಆತಂಕದಿಂದ ಕಾಯುತ್ತಿದ್ದೇನೆ.. ನಿಮ್ಮೆಲ್ಲರ ಹಾರೈಕೆ ಇರಲಿ” ಎಂದು ಮನವಿ ಮಾಡಿದ್ದಾರೆ.. ನಿನ್ನೆಯಷ್ಟೇ ವಿಶ್ವ ತಂದೆಯಂದಿರ ದಿನದ ಪ್ರಯುಕ್ತ ಸುಧಾಕತ್ ಅವರು ತಮ್ಮ ತಂದೆಗೆ ಶುಭಾಶಯ ತಿಳಿಸಿ “‘ಅಪ್ಪ’ ಎಲ್ಲ ಮಕ್ಕಳ ಪಾಲಿನ ಮೊದಲ ಹೀರೋ.. ಅಪ್ಪ ಅನ್ನುವ ಬಂಧವೇ ಅಂಥದ್ದು. ಚಿಕ್ಕವರಿದ್ದಾಗ ನಮಗೆ ಶಿಕ್ಷಣ, ರಕ್ಷಣೆ ನೀಡುವ ಅಪ್ಪ, ಮೌನವಾಗಿಯೇ ತಮ್ಮೆಲ್ಲ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಾವು ಬೆಳೆಯುತ್ತಿದ್ದಂತೆ ನಮ್ಮ ಜೊತೆ ನಡೆಯುವ ಸ್ನೇಹಿತನಾಗುವ ಅಪ್ಪ, ನಮಗಾಗಿ ತಮ್ಮ ಬದುಕನ್ನೇ ಸವೆಸುತ್ತಾರೆ” ಎಂದು ಬರೆದು ಪೋಸ್ಟ್ ಮಾಡಿದ್ದರು..

ವೈದ್ಯಕೀಯ ಶಿಕ್ಷಣ ಸಚಿವರ ಮನೆಯಲ್ಲೇ ಹೀಗಾದರೆ.. ಫ್ರಂಟ್ ಲೈನ್ ನಲ್ಲಿ‌ ಕೆಲಸ ಮಾಡುತ್ತಿರುವ ನೂರಾರು ಕೊರೊನಾ ವಾರಿಯರ್ಸ್ ಗಳು ಹಾಗೂ ಅವರ ಕುಟುಂಬಗಳು ಇನ್ನೂ ಹೆಚ್ಚು ಮುನ್ನೆಚ್ಚರಿಕೆಯನ್ನು ತೆಗೆದುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲಿ.. ಮತ್ತೊಬ್ಬರ ಪ್ರಾಣ ರಕ್ಷಣೆಗೆ ಜೀವದ ಹಂಗು ತೊರೆದು ನಿಂತಿರುವ ಎಲ್ಲಾ ಕೊರೊನಾ ವಾರಿಯರ್ಸ್ ಗಳಿಗೂ ಯಾವುದೇ ಅಪಾಯವಾಗದೇ ಆರೋಗ್ಯದಿಂದಿರಲಿ..