ಕೈಯಲ್ಲಿ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಹಿಡಿದು ಕಿಚ್ಚ ಆಡಿದ ಮಾತೇನು ಗೊತ್ತಾ?

ಕಿಚ್ಚ ಸುದೀಪ್ ಕನ್ನಡದ ನಟನೊಬ್ಬ ಹೊರ ರಾಜ್ಯಗಳಲ್ಲಿಯೂ ಹೆಚ್ಚು ಹೆಸರು ಮಾಡಿ ಅಲ್ಲಿನ ಸಿನಿಮಾ ಇಂಡಸ್ಟ್ರಿಯಲ್ಲಿ ಗವ್ರವ ಪಡೆದ ನಟ. ಇದೀಗ ಪ್ರತಿಷ್ಠಿತ ಅಂತರಾಷ್ಟ್ರೀಯ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ..

ನಿನ್ನೆ ಮುಂಬೈ ನಲ್ಲಿ ದಾದಾ ಸಾಹೇಬ್ ಪಾಲ್ಕೆ ಹಾಗೂ ಮಹಾತ್ಮ ಗಾಂಧೀಜಿ ಅವಫ಼ 150ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಆಯೋಜನೆಗೊಂಡಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಸುದೀಪ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ..

ಈ ವರ್ಷದ 2020 ರ ದಾದಾ ಸಾಹೇಬ್ ಪಾಲ್ಕೆ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ನಲ್ಲಿ ಕಿಚ್ಚ ಸುದೀಪ್ ಅವರ ದಬಾಂಗ್ 3 ಸಿನಿಮಾದಲ್ಲಿನ ಬಲ್ಲಿಸಿಂಗ್ ಪಾತ್ರದ ಅಭಿನಯಕ್ಕಾಗಿ ಈ ಪ್ರಶಸ್ತಿ ಮೋಸ್ಟ್ ಪ್ರಾಮಿಸಿಂಗ್ ಆಕ್ಟರ್ ಪ್ರಶಸ್ತಿ ನೀಡಲಾಗಿದೆ..

ಸಾಮಾನ್ಯವಾಗಿ ಯಾವುದೇ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಸುದೀಪ್ ಅವರು ಹೋಗೋದಿಲ್ಲ.. ಆದರೆ ಈ ಕಾರ್ಯಕ್ರಮಕ್ಕೆ ಹಾಜರಾದರು..‌ ಅಷ್ಟೇ ಅಲ್ಲದೆ ಪ್ರಶಸ್ತಿ ಪಡೆದು ಈ ಕುರಿತು ಮಾತನಾಡಿದ್ದಾರೆ.. “ಮೊದಲನೆಯದಾಗಿ ದಬಾಂಗ್ 3 ಚಿತ್ರತಂಡಕ್ಕೆ ಧನ್ಯವಾದಗಳು..‌ ಈ ಪ್ರಶಸ್ತಿಯನ್ನು ನನ್ನ ಫ್ಯಾಮಿಲಿಗೆ ಡೆಡಿಕೇಟ್ ಮಾಡ್ತೇನೆ.. ಇಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಿದ ತಮಗೆಲ್ಲರಿಗೂ ಧನ್ಯವಾದಗಳು..‌‌ ಸುಮಾರು ಹದಿನಾರು ವರ್ಷಗಳಿಂದ ನಾನು ಯಾವುದೇ ಪ್ರಶಸ್ತಿ ಪ್ರಧಾನ ಸಮಾರಂಭಗಳಿಗೆ ಹೋಗುಲ್ಲ.. ಆದರೆ ನೀವು ತೀರಿದ ಗೌರವದಿಂದ ಇಂದು ಪ್ರಶಸ್ತಿ ಪಡೆಯುತ್ತಿದ್ದೇನೆ ಎಂದರು..

ಅಷ್ಟೇ ಅಲ್ಲದೆ ಕಾರ್ಯಕ್ರಮದ ನಂತದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೈಯಲ್ಲಿ‌ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ “ಎಲ್ಲಾ ನನ್ನ ಸ್ನೇಹಿತರಿಗೆ, ಮೀಡಿಯಾ ಸ್ನೇಹಿತರಿಗೆ, ಸಹಕಲಾವಿದರಿಗೆ, ನನ್ನ ಸಿನಿಮಾಗಳ ಎಲ್ಲಾ ತಂತ್ರಜ್ಞರಿಗೆ, ನನ್ನ ಕುಟುಂಬದವರಿಗೆ, ನನ್ನ ತಂಡಕ್ಕೆ ಹಾಗೂ ನನ್ನ ಸ್ಟಾಫ್ ಗೆ ಎಲ್ಲರಿಗೂ ಧನ್ಯವದಗಳು.. ನಿಮ್ಮಿಂದಲೇ ನಾನು ಪರಿಪೂರ್ಣನಾಗಲು ಸಾಧ್ಯವಾಗಿದ್ದು, ನೀವುಗಳೇ ನನ್ನನ್ನು ಇನ್ಸ್ಪೈರ್ ಮಾಡಿದ್ದು, ನಾನು ಉತ್ತಮವಾಗಿ ಮನರಂಜಿಸಲು ನೀವುಗಳೇ ಕಾರಣ.. ಮಚ್ ಲವ್ ಯು ಆಲ್..” ಎಂದು ಬರೆದು ಸಂತೋಷ ಹಂಚಿಕೊಂಡಿದ್ದಾರೆ..

Tags: