ಅದು ಅವನ ಅಪ್ಪನದ್ದಾ? ನೇರವಾಗಿ ಕೊಟ್ಟ ಸುದೀಪ್.. ಯಾರಿಗೆ ಗೊತ್ತಾ?

ಸ್ಯಾಂಡಲ್ವುಡ್ ನಟ ನಿರ್ದೇಶಕ ಕಿಚ್ಚ ಸುದೀಪ್ ಅವರು ಮಾದ್ಯಮದ ಮುಂದೆ ಖಾರವಾಗಿಯೇ ಮಾತನಾಡಿ.. ಆ ಹಣ ಅವನ ಅಪ್ಪನದ್ದಾ ಎಂದಿದ್ದಾರೆ.. ಹೌದು ಇಷ್ಟಕ್ಕೂ ಸುದೀಪ್ ಅವರು ಈ ರೀತಿ ಗುಡುಗಲು ಕಾರಣವೂ ಇದೆ.. ಅಷ್ಟಕ್ಕೂ ಸುದೀಪ್ ಅವರು ಆ ರೀತಿ ಹೇಳಿದ್ದು ಯಾರಿಗೆ.. ಇಲ್ಲಿದೆ ನೋಡಿ.. ಮೊನ್ನೆಮೊನ್ನೆಯಷ್ಟೇ ದುಬೈ ನ ಬುರ್ಜ್ ಖಲೀಫಾದಲ್ಲಿ ಎರಡು ಸಾವಿರ ಅಡಿ ಎತ್ತರದಲ್ಲಿ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.. ಅದರ ಜೊತೆಗೆ ಸುದೀಪ್ ಅವರು ಸ್ಯಾಂಡಲ್ವುಡ್ ಗೆ ಕಾಲಿಟ್ಟು 25 ವರ್ಷ ಸಂಪೂರ್ಣಗೊಂಡ ಕಾರಣ ಸುದೀಪ್ ಅವರ ಸಿನಿಮಾ ಜರ್ನಿಯ ಮೂರು ನಿಮಿಷಗಳ ವೀಡಿಯೋವನ್ನು ಸಹ ಬುರ್ಜ್ ಖಲೀಫಾದ ಮೇಲೆ ಪ್ರಸಾರ ಮಾಡಲಾಯಿತು.. ವೀಡಿಯೋ ಶುರುವಾಗುತ್ತಿದ್ದಂತೆ ಎರಡು ಸಾವಿರ ಅಡಿ ಎತ್ತರದಲ್ಲಿ ಕನ್ನಡದ ಬಾವುಟ ರಾರಾಜಿಸಿದ್ದು ಮೈ ರೋಮಾಂಚನವಾಗುವಂತಿತ್ತು..

ಈ ರೀತಿ ಬುರ್ಜ್ ಖಲೀಫಾದ ಮೇಲೆ ಲೋಗೋ ಹಾಗೂ ವೀಡಿಯೋ ಪ್ರಸಾರ ಮಾಡಲು ಚಿತ್ರತಂಡ ಒಟ್ಟು ಎಪ್ಪತ್ತು ಲಕ್ಷ ಹಣವನ್ನು ಖರ್ಚು ಮಾಡಿದೆ.. ಈ ವಿಚಾರ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ಅದೇ ಹಣವನ್ನಿ ಬಡವರಿಗೆ ನೀಡಬಹುದಿತ್ತು.. ಮತ್ತೊಬ್ಬರಿಗೆ ಸಹಾಯ ಮಾಡಬಹುದಿತ್ತು.. ಅಷ್ಟು ಖರ್ಚು ಮಾಡುವ ಅಗತ್ಯ ಏನಿತ್ತು.. ಹೀಗೆ ನಾನಾ ರೀತಿಯಲ್ಲಿ ಟೀಕಿಸಿದ್ದರು. ಇದೀಗ ಅದಕ್ಕೆಲ್ಲಾ ಸ್ವತಃ ಕಿಚ್ಚ ಸುದೀಪ್ ಅವರೇ ಉತ್ತರ ನೀಡಿದ್ದಾರೆ..

ಹೌದು ತಮ್ಮ 25 ವರ್ಷದ ಸಿನಿಮಾ ಜರ್ನಿಯ ಸಂತೋಷ ಕೂಟದಲ್ಲಿ ಮಾದ್ಯಮದ ಜೊತೆ ಮಾತನಾಡಿರುವ ಸುದೀಪ್ ಅವರು ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.. “ನಮ್ಮಗಳ ಹಾಗೂ ಎಲ್ಲರ ದುಡ್ಡನ್ನು ಸಹ ತಮ್ಮ ಸ್ವಂತ ಅಪ್ಪನ ದುಡ್ಡು ಎಂದು ಕೆಲವರು ತಿಳಿದುಕೊಂಡಿದ್ದಾರೆ ಅನಿಸುತ್ತದೆ..

ನಾನೇನು ಮುಖ್ಯ ಮಂತ್ರಿಯಲ್ಲ.. ಪ್ರಧಾಮ ಮಂತ್ರಿಯಲ್ಲ.. ನಾನು ಅಂಬಾನಿಯೂ ಅಲ್ಲ.. ಆದರೆ ನಾನು ಗಳಿಸಿದ ಹಣದಲ್ಲಿ ನನ್ನ ಕೈಲಾದಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ.. ಮುಂದೆಯೂ ಮಾಡುತ್ತೇನೆ.. ನನ್ನ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಲೆ ದತ್ತು, ಮಕ್ಕಳ ಆಪರೇಷನ್ ಗೆ ಸಹಾಯ. ಕುಟುಂಬ ದತ್ತು, ಕೊರೊನಾ ಸಮಯದಲ್ಲಿ ಸಹಾಯ.. ಹೀಗೆ ಅನೇಕ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ… ಆದರೂ ಸಹ ಕೆಲವರು ನನ್ನನ್ನು ಟೀಕೆ ಮಾಡುವುದನ್ನು‌ ಮಾತ್ರ ಬಿಡುವುದಿಲ್ಲ.. ಈರೀತಿ ನನ್ನನ್ನು ಟೀಕೆ ಮಾಡೋರು ತಮ್ಮ ಕೈಲಿ ಆದರೂ ಕೂಡ ಅವರು ಯಾರಿಗೂ ಸಹಾಯ ಮಾಡೋದಿಲ್ಲ..

ನಮ್ಮ ಕೆಲಸ ನೋಡಿ ಸಚಿವರಾದ ಸುಧಾಕರ್ ಅವರೇ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.. ಆದರೆ ಕೆಲವರು ಮಾತ್ರ ತಾವು ಯೋಚನೆ ಮಾಡುವ ರೀತಿ ಅದೇಗೆ ಇರುತ್ತದೆಯೋ.. ನಮ್ಮ ದುಡ್ಡನ್ನು ತಮ್ಮಪ್ಪನ ದುಡ್ಡು ಎಂದುಕೊಂಡು ಇದಕ್ಕೆ ಖರ್ಚು ಮಾಡಬೇಕಿತ್ತು.. ಅದಕ್ಕೆ ಖರ್ಚು ಮಾಡಬೇಕಿತ್ತು ಎಂದು ಬಿಟ್ಟಿ ಸಲಹೆ ನೀಡುತ್ತಾರೆ..

ನಮ್ಮ ಸಿನಿಮಾ.. ನಾವು ನಮ್ಮ ಸಿನಿಮಾದ ಪ್ರೊಮೋಷನ್ ಮಾಡೋದು ಕೂಡ ತಪ್ಪಾ? ಸಿನಿಮಾವನ್ನು ಗೆಲ್ಲಿಸಬೇಕು ಎಂಬುದು ಎಲ್ಲಾ ನಿರ್ಮಾಪಕನ ಆಸೆಯಾಗಿರುತ್ತದೆ.. ಅದಕ್ಕೆ ಬೇಕಾದ ಕೆಲಸಗಳನ್ನು ನಾವು ಮಾಡಲೇಬೇಲು..

ನಮ್ಮ ಬಗ್ಗೆ ಕೊಂಕು ಮಾತನಾಡುವವರು ಮೊದಲು ಅವರು ಒಳ್ಳೆಯ ಕೆಲಸ ಮಾಡಲಿ.. ನಾವೂ ಸಹ ಮೆಚ್ಚಿಕೊಳ್ಳುತ್ತೇನೆ.. ಆದರೆ ಸುಮ್ಮನೇ ಮನೆಯಲ್ಲಿ ಸುಖವಾಗಿ ಕೂತು ಇಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಬಾಯಿಗೆ ಬಂದಂತೆ ಕಮೆಂಟ್ ಮಾಡೊದು ಸರಿಯಲ್ಲ.. ಎಂದಿದ್ದಾರೆ.. ಅಷ್ಟೇ ಅಲ್ಲದೇ ನಾನು ಏನು ಎನ್ನುವುದು ನನ್ನ ಕುಟುಂಬಕ್ಕೆ ನನ್ನ ಅಭಿಮಾನಿಗಳಿಗೆ.. ನನ್ನ ಸ್ನೇಹಿತರಿಗೆ ಗೊತ್ತು.. ಅಷ್ಟೇ ಸಾಕು.. ನನ್ನ ಆತ್ಮ ಸಂತೋಷಕ್ಕೆ ನಾನೇನು‌‌‌ ಮಾಡಬೇಕು ಎಂಬುದು ಗೊತ್ತಿದೆ ಎಂದಿದ್ದಾರೆ..