ನಾವು ಹೀಗೆ ಹುಟ್ಟಿದ್ದೇ ತಪ್ಪಾ ಕೋಪಗೊಂಡ ಸುದೀಪ್ ಮಗಳು ಸಾನ್ವಿ.. ಕಾರಣವೇನು ಗೊತ್ತಾ..

ಸ್ಟಾರ್ ಗಳ ಮಕ್ಕಳು ಸಾಮಾನ್ಯವಾಗಿ ಆಗಾಗ ಸುದ್ದಿಯಾಗೋದು ಹೊಸ ವಿಚರಾವೇನೂ ಅಲ್ಲ.. ಆದರೆ ಕನ್ನಡದ ಸ್ಟಾರ್ ಗಳ ಮಕ್ಕಳು ಇಂತಹ ವಿಚಾರಗಳಿಂದ ಕೊಂಚ ದೂರವೇ ಎನ್ನಬಹುದು.. ಶಿವಣ್ಣ ಆಗಿರಲಿ ಪುನೀತ್ ಅವರಾಗಲಿ ಸುದೀಪ್ ಆಗಿರಲಿ ಅಥವಾ ಬೇರೆ ಯಾವುದೇ ಕನ್ನಡದ ಸ್ಟಾರ್ ಗಳ‌ ಮಕ್ಕಳು ಅಷ್ಟಾಗಿ ಯಾರೂ ಸಹ ತಮ್ಮ ತಂದೆಯ ಹೆಸರನ್ನು ಬಳಸಿಕೊಂಡು ಸುದ್ದಿಗೆ ಬರುವವರಲ್ಲ.. ತಮ್ಮದೇ ಆದ ವಿಧ್ಯಾಭ್ಯಾಸ ಅಥವಾ ಉದ್ಯೋಗ ಅಥವಾ ಇನ್ಯಾವುದೋ ಚಟುವಟಿಕೆಗಳಲ್ಲಿ‌ ತೊಡಗಿಕೊಂಡಿದ್ದಾರೆ.. ಇನ್ನು ಸಾನ್ವಿ ಸುದೀಪ್ ಸಹ ಹೆಚ್ಚಾಗಿ ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಲೂವುದಿಲ್ಲ.. ತಾವಾಯ್ತು ತಮ್ಮ ಪಾಡಾಯ್ತು ಎನ್ನುವಂತೆ ಇರುತ್ತಾರೆ.. ತಮ್ಮ ತಂದೆಯ ಸಿನಿಮಾ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದು ಶುಭ ಕೋರುವುದು ಇಷ್ಟೇ.. ಆದರೆ ಇಂತಹ ಸಾನ್ವಿ ಅವರೀಗ ಕೆಲವೊಂದು ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ…

ಹೌದು ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.. ಕೆಲವು ಸ್ಟಾರ್ ಮಕ್ಕಳು ನೆಪೋಟಿಸಂ ವಿರುದ್ಧ ನಡೆದ ಅಭಿಯಾನದಿಂದ ಟೀಕೆಗೆ ಒಳಗಾಗಿದ್ದಾರೆ.. ಕೆಲ ಸ್ಟಾರ್ ಮಕ್ಕಳು ಈ ಟೀಕೆಗಳ ವಿರುದ್ಧ ತಿರುಗಿಬಿದ್ದಿದ್ದಾರೆ. ಇನ್ನು ಕೆಲವರು ಬೇಸರ ಸಹ ವ್ಯಕ್ತಪಡಿಸಿದ್ದಾರೆ.. ಬಾಲಿವುಡ್‌ನಲ್ಲಂತೂ ಈ ನೆಪೋಟಿಸಂ ಬಗ್ಗೆ ಹಲವು ದಿನಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಟೀಕೆಗಳಿಗೆ ಸಿಕ್ಕಿಕೊಂಡವರು ಕೇವಲ ನಟ,ನಟಿಯರಷ್ಟೇ ಅಲ್ಲ. ನಿರ್ಮಾಪಕ, ನಿರ್ದೇಶಕರನ್ನೂ ಬಿಟ್ಟಿಲ್ಲ. ಅದರಲ್ಲೂ ಸ್ಟಾರ್‌ಗಳನ್ನು ಚಿತ್ರರಂಗಕ್ಕೆ ಪರಿಚಿಯಿಸೋ ಕರಣ್ ಜೋಹರ್ ವಿರುದ್ಧವೂ ಜನರು ತಿರುಗಿಬಿದ್ದಿದ್ದರು.

ಇದೇ ನೆಪೋಟಿಸಂ ವಿಚಾರವಾಗಿ ಸುದೀಪ್ ಪುತ್ರಿ ಸಾನ್ವಿ ಮನಬಿಚ್ಚಿ ಮಾತಾಡಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಾನ್ವಿಗೆ ಕೇಳಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರ ಕೊಟ್ಟಿದ್ದಾರೆ. ಅದೇ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು ಎಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಮುದ್ದಿನ ಮಗಳು ಸ್ವಾನ್ವಿ. ಅವರಿಗೂ ಅಷ್ಟೇ ಸುದೀಪ್ ಅಂದರೆ ಅಷ್ಟೇ ಪ್ರೀತಿ. ಅಪ್ಪನ ಸಿನಿಮಾಗಳ ಬಗ್ಗೆ ನೇರಾ ನೇರ ಕಮೆಂಟ್ ಮಾಡೋ ಸಾನ್ವಿಯ ಈ ಗುಣ ಸುದೀಪ್‌ಗೂ ಇಷ್ಟ. ಸದ್ಯ ಸಾನ್ವಿಯ ವಿದ್ಯಾಭ್ಯಾಸ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಅದಕ್ಕೆ ಸುದೀಪ್ ಬಿಡುವು ಸಿಕ್ಕಾಗಲೆಲ್ಲಾ ಹೈದರಾಬಾದ್‌ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಈ ವೇಳೆ ಇನ್‌ಸ್ಟಾಗ್ರಾಂನಲ್ಲಿ ಜನರು ಕಿಚ್ಚ ಸುದೀಪ್ ಪುತ್ರಿ ಸ್ವಾನಿ ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ದ್ವೇಷ ಮಾಡಬೇಕು ಅಂತ ಉತ್ತರ ಕೊಟ್ಟಿದ್ದಾರೆ.

ಸುದೀಪ್ ಪುತ್ರಿ ಸಾನ್ವಿಗೆ ಜನರು ನೆಪೋಟಿಸಂ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ನೇರವಾಗಿ ಸರಳವಾಗಿ ಕೊಟ್ಟ ಉತ್ತರ ಹೀಗಿದೆ. ಸೆಲೆಬ್ರೆಟಿಗಳ ಮಕ್ಕಳನ್ನು ಅವರ ಹಿನ್ನೆಲೆಯ ಕಾರಣಕ್ಕೆ ದ್ವೇಷ ಮಾಡುವುದು ತುಂಬಾ ನೋವಿನ ವಿಷಯ. ಇದು ಅವರ ತಪ್ಪಲ್ಲ. ಅವರನ್ನು ದ್ವೇಷಿಸುವುದನ್ನು ನಿಲ್ಲಿಸಿ.. ಸ್ಟಾರ್ ಗಳ ಮಕ್ಕಳಾಗಿ ಹುಟ್ಟೋದೆ ತಪ್ಪಾ ಎಂದು ಸುದೀಪ್ ಪುತ್ರಿ ಸ್ವಾನ್ವಿ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಸ್ವಾನಿ ನೆಪೋಟಿಸಂ ಅಂತಹ ಕಾಂಪ್ಲಿಕೇಟೆಡ್ ಮ್ಯಾಟರ್ ಬಗ್ಗೆ ನಿರ್ಭಯವಾಗಿ ಮಾತಾಡಿದ್ದಾರೆ.

ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿದ್ಯಾಭ್ಯಾಸದ ಜೊತೆ ಫ್ರೀ ಟೈಮ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಾರೆ. ಸಾನ್ವಿ ಪೇಂಟಿಂಗ್, ಹಾಡುಗಾರಿಕೆ ಎಲ್ಲದರಲ್ಲೂ ಮುಂದಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾನ್ವಿ ಹಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದರು. ಕಿಚ್ಚ ಸುದೀಪ್ ನಟಿಸಿದ್ದ ವಿಕ್ರಾಂತ್ ರೋಣ ಸಿನಿಮಾದ ತಣ್ಣನೆ ಬೀಸೋ ಗಾಳಿ’ ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ನೆಪೋಟಿಸಂ ಟೀಕೆಗಳು ಶುರುವಾಗಿದ್ದವು. ಬಾಲಿವುಡ್‌ನಲ್ಲಿ ಇಂದಿಗೂ ಈ ನೆಪೋಟಿಸಂ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆಲಿಯಾ ಭಟ್, ರಣ್‌ಬೀರ್ ಕಪೂರ್, ಸೋನಂ ಕಪೂರ್, ವರುಣ್ ಧವನ್ ಸೇರಿದಂತೆ ಇತ್ತೀಚೆಗೆ ಸ್ಟಾರ್‌ಗಳಾಗಿ ಮೆರೆಯುತ್ತಿರೋರಿಗೆಲ್ಲಾ ಈ ನೆಪೋಟಿಸಂ ಬಿಸಿ ತಟ್ಟಿದೆ. ಇದು ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ಕೇಳಿ ಬಂದಿತ್ತು. ಅದೇ ಪ್ರಶ್ನೆ ಸುದೀಪ್ ಪುತ್ರಿ ಸಾನ್ವಿ ಪ್ರತಿಕ್ರಿಯಿಸಿದ್ದಾರೆ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622