ಕಲರ್ಸ್ ಬಿಟ್ಟು ಜೀ ಕನ್ನಡಕ್ಕೆ ಹೋಗಿದ್ದ ಸೃಜನ್ ಮತ್ತೆ ಕಲರ್ಸ್ ಕನ್ನಡಕ್ಕೆ ವಾಪಸ್.. ಕಾರಣವೇನು ಗೊತ್ತಾ?

ಸ್ಯಾಂಡಲ್ವುಡ್ ನ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ತಮ್ಮ ಮಾತುಗಳಿಂದಲೇ ಬಹಳ ಫೇಮಸ್.. ಆದರೆ ಈ ಬಿರುದು ಬರಲು ಕಾರಣ ಮಜಾ ಟಾಕೀಸ್ ಕಾರ್ಯಕ್ರಮ.. ಬಿಗ್ ಬಾಸ್ ನಿಂದ ಬಂದ ಬಳಿಕ ಮಗ ಹುಟ್ಟಿದ ದಿನ ಸೃಜನ್ ಅವರಿಗೆ ಮಜಾ ಟಾಕೀಸ್ ನ ಅವಕಾಶ ಒಲಿದು ಬಂದಿತ್ತು.. ತಮ್ಮದೇ ಆದ ಲೋಕೇಶ್ ಪ್ರೊಡಕ್ಷನ್ ಹೌಸ್ ಹೊಂದಿದ್ದ ಸೃಜನ್ ಮಜಾ ಟಾಕೀಸ್ ಅನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದರು.. ಕಲರ್ಸ್ ಕನ್ನಡದಲ್ಲಿ ಒಂದು ಸೀಸನ್ ಮುಗಿದ ನಂತರ ಕಲರ್ಸ್ ಸೂಪರ್ ನಲ್ಲಿಯೂ ಮಜಾ ಟಾಕೀಸ್ ಪ್ರಸಾರವಾಗುತ್ತಿತ್ತು.. ಆನಂತರ ಶೋವನ್ನು ಮುಗಿಸಲಾಗಿತ್ತು.. ಕೆಲ ದಿನಗಳ ಬ್ರೇಕ್ ಪಡೆದ ಸೃಜನ್ ಜೀ ಕನ್ನಡ ವಾಹಿನಿಗೆ ಬಂದರು.. ಸೃಜನ್ ಅವರ ಹೊಸದೊಂದು ಪ್ರೋಮೋ ಕೂಡ ಬಿಡುಗಡೆಯಾಗಿತ್ತು.. ಈ ಹಿಂದೆ ಜೀ ವಾಹಿನಿಯಲ್ಲಿಯೇ ಛೋಟಾ ಚಾಂಪಿಯನ್ ಕಾರ್ಯಕ್ರಮ ನಡೆಸುತ್ತಿದ್ದ ಸೃಜನ್ ಮರಳಿ‌ ಜೀ ವಾಹಿನಿಗೆ ಬಂದದ್ದಕ್ಕೆ ಅವರನ್ನು ಆರತಿ‌ ಮಾಡಿ ಕರೆದುಕೊಳ್ಳಲಾಗಿತ್ತು..

ಆದರೆ ಲಾಕ್ ಡೌನ್ ಆದ ಕಾರಣವೋ‌ ಮತ್ಯಾವ ಕಾರಣವೋ ಸೃಜನ್ ಅವರ ಕಾರ್ಯಕ್ರಮ ಜೀ ವಾಹಿನಿಗಲ್ಲಿ ಶುರುವಾಗಲಿಲ್ಲ.. ಇದಾದ ಬಳಿಕ ಇದೀಗ ಇದ್ದಕ್ಕಿದ್ದ ಹಾಗೆ ಕಲರ್ಸ್ ಕನ್ನಡ ವಾಹಿನಿಗ ಪ್ರೋಮೋಗಳಲ್ಲಿ ಸೃಜನ್ ಕಾಣಿಸಿಕೊಳ್ಳುತ್ತಿದ್ದಾರೆ.. ಹೌದು ಜೀ ವಾಹಿನಿಯಿಂದ ಮತ್ತೆ ಕಲರ್ಸ್ ಕನ್ನಡಕ್ಕೆ ಸೃಜನ್ ಮರಳಿದ್ದಾರೆ.‌ ಮತ್ತೆ ಮಜಾ ಟಾಕೀಸ್ ಶುರುವಾಗಲಿದೆ ಎಂಬುದನ್ನು ತಿಳಿಸಿದ್ದಾರೆ..

ಮರಳಿ ಬಂದ ಸೃಜನ್ ಲೋಕೇಶ್ ರನ್ನು ಕಲರ್ಸ್ ಕನ್ಮಡ ಧಾರಾವಾಹಿಗಳ ಹೀರೋಯಿನ್ ಗಳು ಆರತಿ‌ ಮಾಡುವುದಷ್ಟೇ ಅಲ್ಲದೇ ಕೊರೊನಾ ಟೆಸ್ಟ್ ಕೂಡ ಮಾಡಿ ಆನಂತರ ಕರೆದುಕೊಂಡಂತೆ ಪ್ರೋಮೋ ಶೂಟ್ ಮಾಡಲಾಗಿದೆ..

ಇನ್ನು ಜೂನ್ ಒಂದರಿಂದ ಎಲ್ಲಾ ಧಾರಾವಾಹಿಗಳ ಹೊಸ ಸಂಚಿಕೆಗಳು ಶುರು ಆಗಲಿದ್ದು ಕೆಲ ದಿನಗಳಲ್ಲಿ ವೀಕೆಂಡ್ ಗಳಲ್ಲಿ ಸೃಜನ್ ಅವರ ಮಜಾ ಟಾಕೀಸ್ ಕಾರ್ಯಕ್ರಮ ಕೂಡ ಹೊಸ ರೂಪದಲ್ಲಿ ಬರಲಿದೆ..