ಸ್ಪೆಷಲ್ ಸುದ್ದಿಯೊಂದಿಗೆ ಬಂದ ಲವ್ ಮಾಕ್ಟೈಲ್ ಕೃಷ್ಣ ಹಾಗೂ ರಾಧಿಕಾ ಕುಮಾರಸ್ವಾಮಿ..

ಲವ್ ಮಾಕ್ಟೈಲ್ ಸಿನಿಮಾ ನಂತರ ಡಾರ್ಲಿಂಗ್ ಕೃಷ್ಣ ಇದೀಗ ಲವ್ ಮಾಕ್ಟೈಲ್ ಕೃಷ್ಣ ಎಂದೇ ಫೇಮಸ್.. ಬಹಳಷ್ಟು ಬರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದರೂ ಕೂಡ ಹೆಸರು ಪಡೆಯಲು ತಮ್ಮದೇ ನಿರ್ದೇಶನದ ಲವ್ ಮಾಕ್ಟೈಲ್ ಎಂಬ ಸೂಪರ್ ಹಿಟ್ ಸಿನಿಮಾವೊಂದು ಬರಬೇಕಾಯಿತು..

ಲವ್ ಮಾಕ್ಟೈಲ್ ಯಶಸ್ಸಿನ ನಂತರ ಇದೀಗ ಸ್ಯಾಂಡಲ್ವುಡ್ ನ ಈಗಿನ ಟ್ರೆಂಡಿಂಗ್ ಹೀರೋಗಳಲ್ಲಿ ಕೃಷ್ಣ ಕೂಡ ಒಬ್ಬರು‌. ಸಿನಿಮಾ ಯಶಸ್ವಿಯಾಗುತ್ತಿದ್ದಂತೆ ಕೃಷ್ಣ ಅವರಿಗೆ ಬೇಡಿಕೆಯೂ ಹೆಚ್ಚಾಯ್ತು.. ಇದೀಗ ಕೃಷ್ಣ ಅವರು ತಮ್ಮ ಮುಂದಿನ ಸಿನಿಮಾ ಲವ್ ಮಾಕ್ಟೈಲ್ 2 ತಯಾರಿಯಲ್ಲಿದ್ದಾರೆ.. ಹೌದು ಲಾಕ್ ಡೌನ್ ಇದ್ದ ಕಾರಣ ಲವ್ ಮಾಕ್ಟೈಲ್ 2 ಸಿನಿಮಾದ ಕತೆ ಬರೆಯುವ ಕೆಲಸದಲ್ಲಿ ಕೃಷ್ಣ ತೊಡಗಿಕೊಂಡಿದ್ದಾರೆ..

ಇದೆಲ್ಲದರ ನಡುವೆ ಕೃಷ್ಣ ಹೊಸದೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಹೌದು ರಾಧಿಕಾ ಕುಮಾರಸ್ವಾಮಿ ಅವರೇ ಹೀರೋಯಿನ್ ಆಗಿದ್ದು, ರೊಮ್ಯಾಂಟಿಕ್ ಸಿನಿಮಾಗಳ ನಿರ್ದೇಶಕ ಎಂದೇ ಖ್ಯಾತರಾಗಿರುವ ನಾಗಶೇಖರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.. ಈಗಾಗಲೇ ಕೃಷ್ಣ ಹಾಗೂ ರಾಧಿಕಾ ಕುನಾರಸ್ವಾಮಿ ಇಬ್ಬರೂ ಕೂಡ ಕತೆ ಕೇಳಿ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ..

ಎಲ್ಲವೂ ಅಂದುಕೊಂಡಂತೆ ಆದರೆ ಲಾಕ್ ಡೌನ್ ಮುಗಿದ ಬಳಿಕ ಕೆಲ ತಿಂಗಳಿನಲ್ಲಿ ಸಿನಿಮಾ ಸೆಟ್ಟೇರಲಿದೆ..‌ ಸಿನಿಮಾಗ ಈಗಾಗಲೇ ಹೆಸರು ಕೂಡ ಫೈನಲೈಸ್ ಆಗಿದ್ದು ಶ್ರೀಕೃಷ್ಣ@ಜಿಮೇಲ್.ಕಾಂ ಎಂಬ ವಿಭಿನ್ನವಾದ ಹೆಸರನ್ನಿಟ್ಟಿದ್ದು, ಯಾವ ರೀತಿಯ ಕತೆ ಎಂಬುದನ್ನು ಕಾದು ನೋಡಬೇಕಿದೆ..