ಬ್ರೇಕಿಂಗ್ ನ್ಯೂಸ್..‌ ಎಸ್ ಪಿ ಬಿ ಇನ್ನಿಲ್ಲ.. ಅಧಿಕೃತ ಮಾಹಿತಿ ತಿಳಿಸಿ ಕಣ್ಣೀರಿಟ್ಟ ಮಗ ಚರಣ್..

ಗಾಯನ ಲೋಕದ ಅದಮ್ಯ ಚೇತನ.. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯಜಿಸಿದ್ದಾರೆ.. ಹೌದು ಕಳೆದ ಎರಡು ದಿನಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಎಸ್ ಪಿ ಬಿ ಅವರು‌ ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ..

ಕಳೆದ ಆಗಸ್ಟ್ 5 ರಂದು ಗಂಟಲು ನೋವು ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿದ್ದ ಎಸ್ ಪಿ ಬಿ ಅವರಿಗೆ ಕೊರೊನ ಇರುವುದು ಧೃಡಪಟ್ಟಿತ್ತು.. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.. ಎರಡು ದಿನಗಳ ಬಳಿಕ ತಾನು ಗುಣಮುಖನಾಗುತ್ತಿರುವೆ ಎರಡೇ ದಿನದಲ್ಲಿ ಮರಳುವೆ ಎಂದು ಭರವಸೆ ನೀಡಿದ್ದರು.. ಆದರೆ ವಿಧಿಯಾಟ ಬೇರೆಯೇ ಆಗಿತ್ತು ಆಗಸ್ಟ್ 13 ರಂದು ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.. ಅವರನ್ನು ವೆಂಟಿಲೇಟರ್ ನಲ್ಲಿರಿಸಿ‌ ಚಿಕಿತ್ಸೆ ನೀಡಲಾಗುತಿತ್ತು.. ವಿಚಾರ ತಿಳೊದ ಕೋಟ್ಯಾನು ಕೋಟಿ ಅಭಿಮಾನಿಗಳು ಎಸ್ ಪಿ ಬೊ ಅವರ ಚೇತರಿಕೆಗಾಗಿ ಪ್ರಾರ್ಥಿಸಿದ್ದರು.. ಪ್ರಾರ್ಥನೆಯ ಫಲವೋ ಏನೋ ಎಸ್ ಪಿ ಬಿ ಕೆಲ ದಿನಗಳಲ್ಲಿ ಚೇತರಿಸಿಕೊಂಡಿದ್ದರು.. ಕೆಲ ದಿನಗಳ‌ ನಂತರ ಅವರ ಆರೋಗ್ಯ ಸುಧಾರಿಸಿ ಕೊರೊನಾ ನೆಗಟಿವ್ ಕೂಡ ಬಂತು.. ಆದರೆ ಉಸಿರಾಟದ ತೊಂದರೆ ಹೆಚ್ಚಾಯಿತು..

ಕಳೆದ ಎರಡು ದಿನದಿಂದ ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಲೈಫ್ ಸಪೋರ್ಟ್ ಅನ್ನು ಅಳವಡಿಸಲಾಗಿದೆ ಎಂದು ಆಸ್ಪತ್ರೆ ವರದಿ ಬಿಡುಗಡೆ ಮಾಡಿತ್ತು.. ಆದರೀಗ ಕಾಲ ಮಿಂಚಿ ಹೋಗಿದೆ.. ಕೋಟ್ಯಾನು ಕೋಟಿ ಅಭಿಮಾನಿಗಳ ಪ್ರಾರ್ಥನೆ ಫಲ ನೀಡದಾಗಿ ಹೋಯ್ತು. ಗಾನ ಗಂಧರ್ವ ತನ್ನ ಹಾಡುಗಾರಿಕೆಯನ್ನು ನಿಲ್ಲಿಸಿಯೇ ಬಿಟ್ಟರು..

ಹೌದು ಎಸ್ ಪಿ ಬಿ ಅವರು ಇನ್ನಿಲ್ಲವಾದ ಸುದ್ದಿಯನ್ನು ಮಗ ಚರಣ್ ತಿಳಿಸಿ ಕಣ್ಣೀರಿಟ್ಟಿದ್ದಾರೆ.. ಇಂದು ಮಧ್ಯಾಹ್ನ 1‌.04ಕ್ಕೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಹಲೋಕ ತ್ಯಜಿಸಿದ್ದಾರೆ.. ಎಸ್ ಪಿ ಬಿ ಅವರ ಪುತ್ರ ಚರಣ್ ಅವರು ಅಧಿಕೃತವಾಗಿ ಮಾಹಿತಿ‌ ನೀಡಿದ್ದಾರೆ.. ಇಷ್ಟು ದಿನ ಇಂದಲ್ಲ ನಾಳೆ ಹುಷಾರಾಗ್ತಾರೆ ಅನ್ನೋ ನಂಬಿಕೆ ಹುಸಿಯಾಗಿ ಹೋಗಿದೆ.. ಬಾರದ ಲೋಕಕ್ಕೆ ಗಾನ ಗಂಧರ್ವನ ಪಯಣ ಸಾಗಿದೆ.. ನಿಜಕ್ಕೂ ಸಂಪೂರ್ಣ ಭಾರತ ಚಿತ್ರರಂಗಕ್ಕೆ ಇದು ತುಂಬಲಾರದ ನಷ್ಟವಾಗಿದೆ..

ಅದಾಗಲೇ ಅನೇಕ ಗಣ್ಯರು ಚೆನ್ನೈನ ಎಂ ಜಿ ಎಂ ಆಸ್ಪತ್ರೆಗೆ ಭೇಟಿ‌ ಕೊಟ್ಟು ಎಸ್ ಪಿ ಬಿ ಅವರ ಅಂತಿಮ ದರ್ಶನ ಪಡೆದು ತೆರಳಿದ್ದಾರೆ.. ಗಣ್ಯಾತಿ ಗಣ್ಯರು ರಾಜಕೀಯ ಮುಖಂಡರು ಚಿತ್ರರಂಗದ ಗಣ್ಯರು ಎಲ್ಲರೂ ಸಹ ಎಸ್ ಪಿ ಬಿ ಅವರ ಸಾ ವಿಗೆ ಕಂಬನಿ ಮಿಡಿದಿದ್ದಾರೆ.. ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಭಗವಂತ.. ಎಸ್ ಪಿ ಬಿ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ..