ಐಶ್ವರ್ಯಾ ಧನುಷ್ ಡಿವೋರ್ಸ್ ನೋವಿನ ಬೆನ್ನಲ್ಲೇ ಸಿಹಿ ಸುದ್ದಿ.. ರಜನೀಕಾಂತ್ ಕುಟುಂಬಕ್ಕೆ ಗಂಡು ಮಗುವಿನ ಆಗಮನ..

ಸೂಪರ್ ಸ್ಟಾರ್ ರಜನಿಕಾಂತ್ ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದರಲ್ಲಿ ತಮ್ಮ ಜೀವನದಲ್ಲಿ ಸಾಕಷ್ಟು ನೋವಿದೆ‌.. ಜೀವನದಲ್ಲಿ ಎಲ್ಲಾ ಇದೆ ಆದರೆ ಸಂತೋಷ ನೆಮ್ಮದಿ ಅನ್ನೋದು ಶೇಕಡ ಹತ್ತರಷ್ಟೂ ಕೂಡ ಉಳಿದಿಲ್ಲ ಎಂದು ಹೇಳಿಕೊಂಡಿದ್ದರು.. ಇದಕ್ಕೆ‌ ಕಾರಣ ಅವರ ಮಕ್ಕಳ ವಿಚಾರವಾಗಿತ್ತು.. ಇಬ್ಬರೂ ಹೆಣ್ಣು ಮಕ್ಕಳೂ ಸಹ ಗಂಡನಿಂದ ಡಿವೋರ್ಸ್ ಪಡೆದಿದ್ದರು.. ಅದರಲ್ಲೂ ಐಶ್ವರ್ಯಾ ಅವರೂ ಇತ್ತೀಚೆಗೆ ನಟ ಧನುಷ್ ರಿಂದ ದೂರಾಗಿದ್ದು ಇಬ್ಬರೂ ಸಹ ಸಾಮಾಜಿಕ ಜಾಲತಾಣದಲ್ಲಿ ವಿಚಾರ ತಿಳಿಸಿದ್ದರು.. ರಜನೀಕಾಂತ್ ಅವರು ಈ ವಿಚಾರವನ್ನು ಇತ್ಯರ್ಥ ಮಾಡಿ ಇಬ್ಬರೂ ಒಟ್ಟಿಗೆ ಇರಲು ಸಾಕಷ್ಟು ಪ್ರಯತ್ನ ಮಾಡಿದರೂ ಸಹ ಅದು ಸಾಧ್ಯವಾಗಿರಲಿಲ್ಲ.. ಇದೇ ನೋವಿನಲ್ಲಿ ಸಂಪೂರ್ಣ ಕುಟುಂಬ ಇತ್ತು.. ಆದರೆ ಇದೀಗ ಆ ನೋವಿನ‌ ಬೆನ್ನಲ್ಲೇ ಕುಟುಂಬಕ್ಕೆ ಸಿಹಿ ಸುದ್ದಿ ಆಗಮನವಾಗಿದೆ.. ಹೌದು ರಜನೀಕಾಂತ್ ಕುಟುಂಬಕ್ಕೆ ಗಂಡು ಮಗುವಿನ ಆಗಮನವಾಗಿದೆ.. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತ ಪಡಿಸಲಾಗಿದೆ‌‌..

ಹೌದು ರಜನೀಕಾಂತ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು..‌ ಒಬ್ಬರು ಐಶ್ವರ್ಯಾ.. ಮತ್ತೊಬ್ಬರು ಸೌಂದರ್ಯ.. ಐಶ್ವರ್ಯಾ ರಜನೀಕಾಂತ್ ಅವರು ನಟ ಧನುಷ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹದಿನಾಲ್ಕು ವರ್ಷ ಸಂಸಾರ ಮಾಡಿದ್ದರು.. ಆದರೆ ಕಳೆದ ವರ್ಷ ಈ ಜೋಡಿಯ ನಡುವೆ ಮನಸ್ತಾಪ ಉಂಟಾಗಿ ಇಬ್ಬರೂ ಸಹ ಕಾನೂನಾತ್ಮಕವಾಗಿ ದೂರವಾಗಿದ್ದರು.. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅಭಿಮಾನಿಗಳು ಬಹಳಷ್ಟು ಬೇಸರ ವ್ಯಕ್ತ ಪಡಿಸಿದ್ದರು.. ಇನ್ನು ಈ ಜೋಡಿಗೆ ಇಬ್ಬರು ಮಕ್ಕಳಿದ್ದು ಸಧ್ಯ ನಟ ಧನುಷ್ ಮಕ್ಕಳನ್ನು ಈಗಲೂ ಹೊರ ದೇಶಗಳಿಗೆ ಹೋದಾಗ ಕರೆದುಕೊಂಡು ಹೋಗುವುದು ಮಕ್ಕಳ ಜೊತೆ ಸಮಯ ಕಳೆಯುವುದುಂಟು..

ಇನ್ನು ಅತ್ತ ರಜನೀಕಾಂತ್ ಅವರ ಮತ್ತೊಬ್ಬ ಮಗಳು ಸೌಂದರ್ಯ ಅವರು ಕಳೆದ ಹನ್ನೆರೆಡು ವರ್ಷದ ಹಿಂದೆ 2010 ರಲ್ಲಿ ಅಶ್ವಿನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಏಳು ವರ್ಷ ಸಂಸಾರ ಮಾಡಿದ ಈ ಜೋಡಿಗೆ ವೇದ್ ಎಂಬ ಮಗನಿದ್ದನು ಆದರೆ 2017 ರಲ್ಲಿ ಅಶ್ವಿನ್ ಹಾಗೂ ಸೌಂದರ್ಯ ಅವರು ಭಿನ್ನಾಭಿಪ್ರಾಯದ ಕಾರಣದಿಂದಾಗಿ ಡಿವೋರ್ಸ್ ಪಡೆದುಕೊಂಡಿದ್ದರು.. ಇನ್ನು ಸೌಂದರ್ಯ ಅವರು 2019 ರಲ್ಲಿ ನಟ ಹಾಗೂ ಉದ್ಯಮಿ ವಿಶಾಗನ್ ವನಂಗಮುಡಿ ಅವರ ಜೊತೆ ಎರಡನೇ ಮದುವೆಯಾದರು.‌. ಮಗ ವೇದ್ ನ ಸಮ್ಮುಖದಲ್ಲಿಯೇ ಈ ಮದುವೆ ನೆರವೇರಿತ್ತು.. ಅತ್ತ ವಿಶಾಗನ್ ಕೂಡ ಸೌಂದರ್ಯ ಅವರ ಮೊದಲ ಮಗುವಿಗೆ ತಂದೆಯ ಪ್ರೀತಿ ನೀಡಿದ್ದು ಅವರಿಬ್ಬರ ಆತ್ಮೀಯತೆಯ ಫೋಟೋಗಳನ್ನು ಸೌಂದರ್ಯ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡದ್ದೂ ಉಂಟು.. ಇನ್ನು ಇದೀಗ ಸೌಂದರ್ಯ ಹಾಗೂ ವಿಶಾಗನ್ ಜೋಡಿಗೆ ಗಂಡು ಮಗು ವಾಗಿದ್ದು ಸೌಂದರ್ಯ ಅವರು ನಿನ್ನೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಸೌಂದರ್ಯಾ ಮತ್ತು ವಿಶಾಗನ್ ದಂಪತಿ ಮುದ್ದಾದ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ಆಗಸ್ಟ್‌ನಲ್ಲಿ ಸೌಂದಯಾಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ರಜನಿಕಾಂತ್‌ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಮಾತ್ರ ಆಗಮಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಮುಖವನ್ನು ತೋರಿಸದೆ ಮಗುವಿನ ಕೈ ಹಿಡಿದಿರುವಂತಹ ಕೆಲವು ಫೋಟೋಗಳನ್ನು ಮಾತ್ರ ಸೌಂದರ್ಯಾ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೆಗ್ನೆನ್ಸಿ ಫೋಟೋ ಚಿತ್ರೀಕರಣದ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ..

ಸೌಂದರ್ಯಾ ಅವರಿಗೆ ಈಗಾಗಲೇ ವೇದ್‌ ಎಂಬ ಗಂಡು ಮಗನಿದ್ದಾನೆ. ಇದೀಗ ಎರಡನೇ ಮಗುವಿಗೆ ಜನ್ಮ ನೀಡಿರುವ ಸೌಂದರ್ಯಾ, ಮುದ್ದು ಮಗನಿಗೆ ಆಗಲೇ ಹೆಸರನ್ನೂ ಸಹ ಇಟ್ಟಿದ್ದಾರೆ‌‌.. ಹೌದು, ಮಗನಿಗೆ ವೀರ್ ರಜನಿಕಾಂತ್ ವನಂಗಮುಡಿ ಎಂದು ಹೆಸರಿಟ್ಟಿದ್ದಾರೆ.
‘ದೇವರ ಮತ್ತು ಹೆತ್ತವರ ಆಶೀರ್ವಾದಿಂದ ವಿಶಾಗನ್, ವೇದ್‌ ಮತ್ತು ನಾನು ವೇದ್‌ನ ತಮ್ಮನನ್ನು ಸ್ವಾಗತಿಸಲು ಥ್ರಿಲ್ ಆಗಿದ್ದೇವೆ. ವೀರ್ ರಜನಿಕಾಂತ್ ವನಂಗಮುಡಿ.. ಎಂದು ಬರೆದುಕೊಂಡಿರುವ ಸೌಂದರ್ಯಾ ರಜನಿಕಾಂತ್ ಅವರು, ವೈದ್ಯರಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಸೌಂದರ್ಯಾ ಅವರು ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ರಜನಿಕಾಂತ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಕೊಚಾಡಿಯನ್‌’ ಸಿನಿಮಾವನ್ನು ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಸೌಂದರ್ಯಾ ನಿರ್ದೇಶಿಸಿದ್ದರು. ಹಾಗೆಯೇ ಧನುಷ್ ಮತ್ತು ಕಾಜೋಲ್ ನಟಿಸಿದ್ದ ‘ವಿಐಪಿ 2’ ಸಿನಿಮಾವನ್ನು ಕೂಡ ಸೌಂದರ್ಯಾ ನಿರ್ದೇಶಿಸಿದ್ದರು.. ಒಟ್ಟಿನಲ್ಲಿ ಐಶ್ವರ್ಯಾ ಧನುಷ್ ವಿಚಾರದಲ್ಲಿ ಮನನೊಂದಿದ್ದ ರಜನೀಕಾಂತ್ ಅವರೀಗ ಮನೆಗೆ ಮೊಮ್ಮಗನ ಆಗಮನದ ಸಂತೋಷದಿಂದ ಆ ನೋವನ್ನು ಮರೆಯುವಂತಾಗಿದೆ..