ಆ ಒಬ್ಬ ನಿರ್ಮಾಪಕನಿಂದ ಧಾರಾವಾಹಿಯನ್ನೇ ಬಿಟ್ಟ ಮಿಲನ ಧಾರಾವಾಹಿ ನಟಿ ಸೌಮ್ಯ..

ಮಿಲನ ಧಾರಾವಾಹಿ ಕೆಲ ವರ್ಷಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿ.. ಸಾಕಷ್ಟು ಜನಮನ್ನಣೆ ಪಡೆದುಕೊಂಡಿದ್ದ ಧಾರಾವಾಹಿ.. ಆದರೆ ಆ ಧಾರಾವಾಹಿಯ ನಟಿ‌ ಸೌಮ್ಯ ಅವರು ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದ್ದರೂ, ಕೈತುಂಬಾ ಧಾರಾವಾಹಿಗಳ ಅವಕಾಶ ಇದ್ದರೂ ಈ ಕ್ಷೇತ್ರವನ್ನು ಬಿಟ್ಟು ಬೇರೆ ಕೆಲಸ ಮಾಡಲು ಶುರು ಮಾಡಿದ್ರು.. ಇದ್ದಕ್ಕಿಂದ ಹಾಗೆ ಧಾರಾವಾಹಿ ಕ್ಷೇತ್ರ ಬಿಡಲು ಕಾರಣವಾದರೂ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ.. ಆದರೆ ಮೊನ್ನೆ ಮೊನ್ನೆಯಷ್ಟೇ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸೌಮ್ಯ ಅವರು ಎಲ್ಲಾ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.. ಹೌದು ಆ ಒಬ್ಬ ನಿರ್ಮಾಪಕನಿಂದಾಗಿ ಸೌಮ್ಯ ಅವರು ಕಿರುತೆರೆಯನ್ನೇ ಬಿಡುವಂತಾಯಿತು..

ಸೌಮ್ಯ ಅವರು 4 ವತ್ಷ ಕಿರುತೆರೆಯಲ್ಲಿ ಇದ್ದರು.. ನಾಲ್ಕು ವರ್ಷದಲ್ಲಿ 12 ಧಾರಾವಾಹಿಯಲ್ಲಿ ಸೌಮ್ಯ ಅಭಿನಯಿಸಿದ್ದರು.. ಕನ್ನಡ ಮಾತ್ರವಲ್ಲದೇ ತಮಿಳು ತೆಲುಗು ಧಾರಾವಾಹಿಯಲ್ಲಿಯೂ ಸೌಮ್ಯ ಅಭಿನಯಿಸಿದರು.. ಸಾಕಷ್ಟು ಹಣ ಹೆಸರು ಎಲ್ಲವನ್ನೂ ಸಂಪಾದಿಸಿದರು.. ಮಿಲನ ಧಾರಾವಾಹಿ ಮುಗಿದ ಬಳಿಕ ಚೌಕ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಸೌಮ್ಯ ನಂತರ ಸಂಪೂರ್ಣವಾಗಿ ಮರೆಯಾದರು.. ಇದಕ್ಕೆ ಕಾರಣ ಆ ಒಬ್ಬ ನಿರ್ಮಾಪಕ..

ಹೌದು ತೆಲುಗು ನಿರ್ಮಾಪಕ ಒಬ್ಬ ಆಡಿಶನ್ ಇದೆ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದೇನೆ ಬನ್ನಿ‌ ಎಂದು ಪೋನ್ ಮಾಡಿದನಂತೆ.. ನಾನು ಎಲ್ಲಿಯೇ ಹೋದರು ತಾಯಿಯನ್ನು ಕರೆದುಕೊಂಡು ಬರ್ತೀನಿ.. ಅವರಿಗೂ ಒಂದು ಟಿಕೆಟ್ ಬುಕ್ ಮಾಡಿ.. ನಾನು ಹಣ ಕೊಡ್ತೀನಿ ಎಂದು ಸೌಮ್ಯ ಹೇಳಿದರಂತೆ… ಆದರೆ ಆ ನಿರ್ಮಾಪಕ ಇಲ್ಲ ನೀವ್ ಒಬ್ಬರೆ ಬರಬೇಕು.. ನಿಮಗೆ ಎಲ್ಲಾ ಗೊತ್ತು ತಾನೇ ಅಲ್ಲಿ ನಿರ್ದೇಶಕರು ಇರ್ತಾರೆ ನೀವು ಅಡ್ಜಸ್ಟ್ ಮಾಡಿಕೊಳ್ಳಬೇಕು.. ಇದೆಲ್ಲಾ ಏನು ಹೊಸದಲ್ಲವಲ್ಲ.. ನಾನು ಓಪನ್ ಆಗಿಯೇ ಹೇಳ್ತಿದ್ದೀನಿ ಎಂದರಂತೆ.. ತಕ್ಷಣ.. ನೋಡಿ ನಾನು ಆ ರೀತಿಯ ನಟಿ ಅಲ್ಲ..‌ ಹೀಗಿದ್ದರೆ ಪ್ರತಿಭೆಗೆ ಬೆಲೆ ಎಲ್ಲಿದೆ ಎಂದರಂತೆ ಸೌಮ್ಯ. ‌ ಅದಕ್ಕೆ ಅವರು ನಾಲ್ಕು ವರ್ಷ ಈ ಇಂಡಸ್ಟ್ರಿಯಲ್ಲಿ ಇದ್ದೀರಾ.. ಇದೆಲ್ಲಾ ಕಾಮನ್ ಇಷ್ಟವಿದ್ದರೆ ಬನ್ನಿ.. ಇಲ್ಲಾಂದ್ರೆ ಬೇಡ ಎಂದರಂತೆ.. ನಾನು ಆ ರೀತಿಯ ಹುಡುಗಿ ಅಲ್ಲ.. ಇನ್ಯಾವತ್ತೂ ನನಗೆ ಫೋನ್ ಮಾಡಬೇಡಿ ಎಂದರಂತೆ ಸೌಮ್ಯ.. ಸೌಮ್ಯ ಅವರಿಗೆ ಹಿಂದೆಂದೂ ಯಾರೂ ಕೂಡ ಈ ರೀತಿ ನಡೆದುಕೊಂಡಿರಲಿಲ್ಲವಂತೆ.‌. ಅದೇ ಕೊನೆ ಆನಂತರ ಸಂಪೂರ್ಣ ಕಿರುತೆರೆ ಇಂಡಸ್ಟ್ರಿಯನ್ನೇ ಬಿಟ್ಟುಬಿಟ್ಟರು..

ಆದರೆ ವಿಪರ್ಯಾಸ ಎಂದರೆ ಆ ನಿರ್ಮಾಪಕ ಮತ್ಯಾರೂ ಅಲ್ಲ.. ಆ ನಿರ್ಮಾಪಕನ ಹೆಂಡತಿಯೂ ಸಹ ಒಬ್ಬ ನಟಿ.. ಅವರ ಜೊತೆಯೂ ಸೌಮ್ಯ ಅಭಿನಯಿಸಿದ್ದಾರೆ.. ಆ ನಿರ್ಮಾಪಕನ ಬಳಿಯೂ ಸೌಮುಅ ಅವರು ಈ ಮುನ್ನ ಮಾತನಾಡಿದ್ದರಂತೆ.. ಆದರೆ ಫೋನ್ ನಲ್ಲಿ ಬೇರೆ ಹೆಸರಿನಲ್ಲಿ ಆ ನಿರ್ಮಾಪಕ ಸೌಮ್ಯ ಬಳಿ ಮಾತನಾಡಿದ್ದನಂತೆ.‌

ಆ ಬಳಿಕ 8 ತಿಂಗಳು ಮನೆಯಲ್ಲೇ ಕುಳಿತರಂತೆ.. ಸಾಕಷ್ಟು ಅವಕಾಶ ಬಂದರೂ ಸಹ ಆಡಿಶನ್ ಗೆ ಹೋಗಲಿಲ್ಲವಂತೆ.. ಆ ಬಳಿಕ ಬೇರೆ ಇಂಟೀರಿಯರ್ ಡಿಸೈನ್ ಕಂಪನಿಯಲ್ಲಿ 6 ತಿಂಗಳು ಕೆಲಸ ಮಾಡಿದರು.. ನಂತರ ತಮ್ಮದೇ ಆದ ಸ್ವಂತ ಕಂಪನಿಯೊಂದನ್ನು ತೆರೆದು ಅದರಲ್ಲೇ ಕೆಲಸ ಮಾಡುತ್ತಿದ್ದಾರಂತೆ.. ಈ ನಡುವೆ ಸೌಮ್ಯ ಅವರಿಗೆ ಮದುವೆಯೂ ಕೂಡ ಆಯಿತು.. ಇದೀಗ ಆನಂದವಾಗಿದ್ದಾರೆ.. ಇನ್ನು ಮೂತು ನಾಲ್ಕು ವರ್ಷ ಬಿಟ್ಟು ಒಳ್ಳೆಯ ಅವಕಾಶ ಸಿಕ್ಕರೆ ಮತ್ತೆ ಬಣ್ಣ ಹಚ್ವುವ ಕನಸಿದೆ ಎಂದಿದ್ದಾರೆ..

ಅವಕಾಶ ಕೊಡ್ತೀವಿ ಅಂತ ಹೆಣ್ಣನ್ನು ಈ ರೀತಿ ಬಳಸಿಕೊಳ್ಳುವ ಹಣದ ಮದ ತುಂಬಿದ ಕೆಲ ನಿರ್ಮಾಪಕರು ಅದೆಷ್ಟು ಪ್ರತಿಭೆಯುಳ್ಳ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾರೋ.. ಜೀವನ ಎಂಬುದು ಇಂತವರಿಗೆ ಕೇವಲ ಎರಡು ನಿಮಿಷದ ಕ್ಷಣಿಕ ಸುಖವಷ್ಟೇ.. ಬದಲಾಗಬೇಕಿದೆ ಮನುಷ್ಯನ ಮನಸ್ಥಿತಿ..