ಪ್ರವಾಹದಿಂದ ಪುಸ್ತಕ ಹೋಯ್ತು ಎಂದು ಬಿಕ್ಕಿ ಅಳುತ್ತಿದ್ದ ಈ ಹೆಣ್ಣಿಗೆ ಸೋನು ಸೂದ್ ಕೊಟ್ಟ ಉಡುಗೊರೆ ನೋಡಿ.. ಇದಕ್ಕಿಂತ ಇನ್ನೇನು ಬೇಕು ಅಲ್ವಾ..

ನಟ ಸೋನು ಸೂದ್.. ಕಷ್ಟದ ಸಮಯದಲ್ಲಿ ನೀವು ಕಂಡ ನಿಜ ಜೀವನದ ಹೀರೋ ಯಾರು ಎಂದು ಕೇಳಿದರೆ ಬಹುಶಃ ಭಾರತೀಯರು ಹೇಳುವ ಹೆಸರುಗಳಲ್ಲಿ ಸೋನು ಸೂದ್ ಅವರ ಹೆಸರು ಸಹ ಇದ್ದೇ ಇರುತ್ತದೆ.. ಕೊರೊನಾ ಬಂದ ಸಮಯದಿಂದಲೂ ಹಗಲು ರಾತ್ರಿ ಎನ್ನದೇ ಕಷ್ಟದಲ್ಲಿರುವವರಿಗೆ ನೆರವಾಗಿ ನಿಂತಿದ್ದಾರೆ.. ಒಂದು ಟ್ವೀಟ್.. ಒಂದು ಮೆಸೆಜ್..‌ಒಂದು ಮೇಲ್ ಮೂಲಕ ಸಾವಿರಾರು ಜನರ ನೆರವಿಗೆ ಸೋನು ಸೂದ್ ನಿಂತಿರುವುದು ಹೆಮ್ಮೆಯ ವಿಚಾರ..

ಅದೇ ರೀತಿ ಪ್ರವಾಹದಲ್ಲಿ ತನ್ನೆಲ್ಲಾ ವಸ್ತುಗಳನ್ನು ಕಳೆದುಕೊಂಡ ಹೆಣ್ಣು ಮಗಳಿಗೆ ಸೋನು ಸೂದ್ ಕೊಟ್ಟ ಉಡುಗೊರೆ ನೋಡಿ.. ಹೌದು ಇತ್ತೀಚೆಗೆ ಛತ್ತೀಸ್‌ಗಡದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ ನೂರಾರು ಜನರು ಮನೆ ಮಠ ಕಳೆದುಕೊಂಡು ಬೀದಿಪಾಲಾಗಿದ್ದರು. ಆ ಪೈಕಿ ಯುವತಿಯೊಬ್ಬಳು ಮನೆಯನ್ನು ಕಳೆದುಕೊಂಡಿದ್ದು ಮಾತ್ರವಲ್ಲದೇ ಪ್ರವಾಹದಲ್ಲಿ ತನ್ನ ಪುಸ್ತಕವನ್ನು ಕಳೆದುಕೊಂಡ ಪರಿಣಾಮ ಬಿಕ್ಕಿಬಿಕ್ಕಿ ಅತ್ತಿದ್ದಳು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು… ಛತ್ತೀಸ್‌ಗಡದ ಬಸ್ಟರ್ ಜಿಲ್ಲೆಯ ಗ್ರಾಮವೊಂದರ ಹುಡುಗಿ ಪ್ರವಾಹ ಇಳಿದ ನಂತರ ಮತ್ತೆ ತನ್ನ ಮನೆಗೆ ಬಂದು ಪರಿಶೀಲಿಸಿದಾಗ ಎಲ್ಲವೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಮನೆ ಕುಸಿದು ಬಿದ್ದಿತ್ತು. ಪುಸ್ತಕಗಳು ದಿಕ್ಕಾಪಾಲಾಗಿದ್ದವು.. ಇದರಿಂದ ವಿಪರೀತ ನೊಂದುಕೊಂಡ ಆಕೆ ದುಃಖದಿಂದ ಅಳುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.. ಇದನ್ನು ನೋಡಿದ ಸೋನು ಸೂದ್ ಆಕೆಯ ನೆರವಿಗೆ ನಿಂತಿದ್ದಾರೆ..

ಹೌದು ನೆರವಿಗೆ ನಿಂತದ್ದಷ್ಟೇ ಅಲ್ಲದೇ ಆಕೆಯನ್ನು ತನ್ನ ತಂಗಿ ಎಂದಿದ್ದಾರೆ ಪುಣ್ಯಾತ್ಮ.. ಇಲ್ಲಿದೆ ನೋಡಿ ಸೋನು ಸೂದ್ ಅವರು ಹೇಳಿದ ಮಾತುಗಳು.. “ಕಣ್ಣೀರು ಒರೆಸಿಕೋ ಸೋದರಿ. ನಿನಗೆ ಪುಸ್ತಕವೂ ಹೊಸದು ಸಿಗುತ್ತದೆ. ಜೊತೆಗೆ ಮನೆಯೂ ಹೊಸದು ಸಿಗುತ್ತದೆ” ಎಂದು ಭರವಸೆ ನೀಡಿದ್ದಾರೆ..

ಸೋನು ಸೂದ್ ಅವರ ಈ ನಡೆಗೆ ಜನರ ಮೆಚ್ಚುಗೆಯ ಮಹಾಪೂರವೇ ಹರಿದಿದೆ.. ಈ ಪುಣ್ಯತ್ಮ ನೂರ್ಕಾಲ ಸುಖವಾಗಿ ಬಾಳಲೆಂದು ಹಾರೈಸಿದ್ದಾರೆ.. ದೇವರು ಇವರನ್ನು ಇವರ ಕುಟುಂಬವನ್ನು ಸದಾ ಸುಖವಾಗಿಡಲಿ..