ತನ್ನ ಮೈಮೇಲೆ ಹಾಕಿದ್ದ ದುಬಾರಿ ಬೆಲೆಯ‌ ಆ ವಸ್ತುವನ್ನೆ ಬಿಚ್ಚಿ ರಾಕೇಶ್ ಗೆ ಕೊಟ್ಟು ಮುತ್ತು ನೀಡಿದ ಸೋನು ಗೌಡ.. ಶಾಕ್ ಆದ ರಾಕೇಶ್‌..

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಈ ಬಾರಿ ಓಟಿಟಿಯಲ್ಲಿ ತನ್ನ ಮೊದಲ ಸೀಸನ್ ಆರಂಭಿಸಿದ್ದು ಆರಂಭದಲ್ಲಿ ಬಹಳ ದೊಡ್ಡ ಮಟ್ಟದಲ್ಲಿಯೇ ಕುತೂಹಲವನ್ನು ಮೂಡಿಸಿತ್ತು.. ಆದರೆ ಬರುಬರುತ್ತಾ ಯಾಕೋ ಬಿಗ್ ಬಾಸ್ ಓಟಿಟಿ ಬಗ್ಗೆಗಿನ ಪ್ರೇಕ್ಷಕರ ಉತ್ಸಾಹವೂ ಕಡಿಮೆಯಾಗಿ ಹೋಯ್ತು.. ಇನ್ನು ಈ ಓಟಿಟಿ ಸೀಸನ್ ಗೆ ಬಂದ ಕೆಲ ಸ್ಪರ್ಧಿಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದುಂಟು.. ಅದರಲ್ಲಿ ಮುಖ್ಯವಾಗಿ ಸೋನು ಗೌಡ.. ಹೌದು ಸೋನು ಗೌಡ ಈ ಹಿಂದೆ ಮನೆಯಿಂದ ಹೊರಗೆ ಇದ್ದಾಗಲೂ ಆಗಾಗ ಸುದ್ದಿಯಾಗುತ್ತಿದ್ದು ಬಿಗ್ ಬಾಸ್ ಗೆ ಹೋದ ನಂತರವೂ ಸುದ್ದಿಯಾಗುತ್ತಿದ್ದಾರೆ..

ಇನ್ನು ಇದೀಗ ತಾನು ಧರಿಸಿದ್ದ ದುಬಾರಿ ಬೆಲೆಯ ಆ ವಸ್ತುವನ್ನೇ ಬಿಚ್ಚಿ ರಾಕೇಶ್ ಗೆ ಕೊಟ್ಟಿದ್ದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.. ಹೌದು ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಸೋನು ಶ್ರೀನಿವಾಸ್ ಗೌಡ ಆತ್ಮೀಯವಾಗಿರುವುದು ರಾಕೇಶ್ ಅಡಿಗ ಜೊತೆ ಮಾತ್ರ. ಫ್ರೆಂಡ್, ಫ್ರೆಂಡ್ ಅಂದರೂ.. ರಾಕೇಶ್ ಮತ್ತೊಬ್ಬರ ಜೊತೆ ಮಾತನಾಡಿದರೆ ಸೋನು ಶ್ರೀನಿವಾಸ್ ಗೌಡ ಪೊಸೆಸ್ಸಿವ್ ಆಗುತ್ತಾರೆ. ರಾಕೇಶ್ ಏನಾದರೂ ಹೇಳಿದರೆ, ಸೋನು ಶ್ರೀನಿವಾಸ್ ಗೌಡ ಸಹಿಸುವುದಿಲ್ಲ. ಹೀಗಿರುವಾಗಲೇ, ರಾಕೇಶ್ ಅಡಿಗ ಅವರಿಗೆ ಸೋನು ಶ್ರೀನಿವಾಸ್ ಗೌಡ ತಮ್ಮ ಚಿನ್ನದ ಪೆಂಡೆಂಟ್‌ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ..

ಕಾಲು ನೋವಿನ ಪರಿಣಾಮ ಬಿಗ್ ಬಾಸ್ ಮನೆಯಿಂದ ಮೊದಲ ವಾರವೇ ಲೋಕೇಶ್ ಹೊರಬಂದಿದ್ದರು. ಇಂತಿಪ್ಪ ಲೋಕೇಶ್ ಗ್ರ್ಯಾಂಡ್ ಫಿನಾಲೆ ದಿನಕ್ಕೂ ಮುನ್ನ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟರು. ಲೋಕೇಶ್ ಬರುತ್ತಿದ್ದ ಹಾಗೆ, ಬಿಗ್ ಬಾಸ್ ವಿಶೇಷ ಚಟುವಟಿಕೆಯೊಂದನ್ನ ನೀಡಿದರು..

ಹೌದು ಬಿಗ್ ಬಾಸ್ ಕನ್ನಡ ಓಟಿಟಿ 1 ಕಾರ್ಯಕ್ರಮದಲ್ಲಿ ಸೋನು ಶ್ರೀನಿವಾಸ್ ಗೌಡ ಆತ್ಮೀಯವಾಗಿರುವುದು ರಾಕೇಶ್ ಅಡಿಗ ಜೊತೆ ಮಾತ್ರ. ಫ್ರೆಂಡ್, ಫ್ರೆಂಡ್ ಅಂದರೂ.. ರಾಕೇಶ್ ಮತ್ತೊಬ್ಬರ ಜೊತೆ ಮಾತನಾಡಿದರೆ ಸೋನು ಶ್ರೀನಿವಾಸ್ ಗೌಡ ಪೊಸೆಸ್ಸಿವ್ ಆಗುತ್ತಾರೆ. ರಾಕೇಶ್ ಏನಾದರೂ ಹೇಳಿದರೆ, ಸೋನು ಶ್ರೀನಿವಾಸ್ ಗೌಡ ಸಹಿಸುವುದಿಲ್ಲ. ಹೀಗಿರುವಾಗಲೇ, ರಾಕೇಶ್ ಅಡಿಗ ಅವರಿಗೆ ಸೋನು ಶ್ರೀನಿವಾಸ್ ಗೌಡ ತಮ್ಮ ಚಿನ್ನದ ಪೆಂಡೆಂಟ್‌ಅನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ತಾಯಿ ಮಗುವನ್ನ ಎಷ್ಟು ಕೇರ್ ಮಾಡ್ತಾಳೋ, ಅದಕ್ಕಿಂತ ಜಾಸ್ತಿ ಕೇರ್ ಕೊಟ್ಟಿದ್ದೀನಿ ರಾಕೇಶ್‌ಗೆ. ನಮ್ಮಿಬ್ಬರದ್ದು ಸ್ಪೆಷಲ್ ಕನೆಕ್ಷನ್, ಬಾಂಡಿಂಗ್. ನನ್ನ ಲೈಫ್‌ನಲ್ಲಿ ರಾಕೇಶ್ ಬೇಜಾನ್ ಕಲಿಸಿಕೊಟ್ಟಿದ್ದಾನೆ.

ನನ್ನ ಲೈಫ್‌ನಲ್ಲಿ ನಾನು ಗಿಫ್ಟ್ ಕೊಟ್ಟರೆ, ಅದು ನನ್ನ ಸ್ವಂತ ದುಡ್ಡಿಂದ ಆಗಿರಬೇಕು ಅಂತ ನನಗೆ ಅನಿಸೋದು. ನಾನು ನನ್ನ ಸ್ವಂತ ದುಡ್ಡಿನಿಂದ ತೆಗೆದುಕೊಂಡಿದ್ದು ಈ ಗೋಲ್ಡ್ ಪೆಂಡೆಂಟ್. ಇದನ್ನ ನಾನು ರಾಕೇಶ್‌ಗೆ ಕೊಡ್ತಿದ್ದೀನಿ. ಇದು ರೌಂಡ್‌ ಆಗಿದೆ. ಈ ಭೂಮಿ ಕೂಡ ರೌಂಡ್ ಆಗಿದೆ. ಇವನು ಎಲ್ಲೇ ಹೋದರೂ ನಾನು ಇವನ ಹಿಂದೆ ಸುತ್ತುತ್ತಿರುತ್ತೇನೆ. ದಯವಿಟ್ಟು ಇದನ್ನ ಹಾಕಿಕೊಂಡು ನನ್ನನ್ನ ಯಾವಾಗಲೂ ನೆನಪಿಸಿಕೋ…’’ ಅಂತ ಹೇಳಿ ರಾಕೇಶ್ ಅಡಿಗಗೆ ಚಿನ್ನದ ಪೆಂಡೆಂಟ್ ನೀಡಿ, ಮುತ್ತು ಕೊಟ್ಟರು ಸೋನು ಶ್ರೀನಿವಾಸ್ ಗೌಡ..

ಇನ್ನು ಈ ಬಗ್ಗೆ ಮಾತನಾಡಿದ ರಾಕೇಶ್ ಸೋನು ಯಾವಾಗಲೂ ಯಶಸ್ವಿಯಾಗಬೇಕು. ಸೋನು ನನಗೆ ಟ್ರೂ ಫ್ರೆಂಡ್. ನಾನು ಎಷ್ಟೇ ಹರ್ಟ್ ಮಾಡಿದರೂ, ಸೋನು ನನ್ನನ್ನ ಬಿಡಲಿಲ್ಲ. ಅದೇ ಟ್ರೂ ಫ್ರೆಂಡ್‌ಶಿಪ್. ಥ್ಯಾಂಕ್ಯು ಸೋ ಮಚ್.. ಎಂದರು ರಾಕೇಶ್ ಅಡಿಗ..

ಇನ್ನು ಸೋನು ಗೌಡ ಮಾತನಾಡಿ ನನ್ನಿಂದ ತುಂಬಾ ಜನರಿಗೆ ನೋವಾಗಿದೆ. ನನ್ನ ದಡ್ಡತನದಿಂದ ಏನೇನೋ ಮಾತನಾಡುತ್ತೇನೆ. ನನಗೆ ಗೊತ್ತಿಲ್ಲದೆ ನಾನು ಗುರೂಜಿ ಒಂದು ಮಾತು ಹೇಳಿದ್ದೆ. ಅದಕ್ಕಾಗಿ ಇಂದು ನಾನು ಕ್ಷಮೆ ಕೇಳುತ್ತೇನೆ. ಮಗಳು ಅಂದುಕೊಂಡು ಕ್ಷಮಿಸಿಬಿಡಿ’’ ಎಂದು ಆರ್ಯವರ್ಧನ್‌ಗೆ ಸೋನು ಕ್ಷಮೆ ಕೇಳಿದರು.. ಅಷ್ಟೇ ಅಲ್ಲದೇ ಒಂಟಿತನ ಕಾಡುತ್ತೆ ಅಂತಿರ್ತಾರೆ. ಆದರೂ ನನ್ನನ್ನ ಮಾತನಾಡಿಸುತ್ತಾರೆ. ಇಲ್ಲಿ ನನ್ನ ತಾಯಿಯ ಸ್ಥಾನವನ್ನು ಅವರು ತುಂಬಿಸಿದ್ದಾರೆ. ಹೀಗಾಗಿ ಸೋಮಣ್ಣಗೆ ಥ್ಯಾಂಕ್ಸ್’’ ಎಂದರು ಸೋನು ಶ್ರೀನಿವಾಸ್ ಗೌಡ..