18 ನಿಮಿಷದ ವೀಡಿಯೋ ಬಗ್ಗೆ ಸತ್ಯ ಬಿಚ್ಚಿಟ್ಟ ಸೋನು ಗೌಡ.. ಆ ಹುಡುಗ ಯಾರು ಗೊತ್ತಾ..

ಸೋನು ಗೌಡ ಬಹುಶಃ ಸಾಮಾಜಿಕ ಜಾಲತಾಣ ಬಳಸುವ ಸಾಕಷ್ಟು ಜನರಿಗೆ ಈ ಹುಡುಗಿಯ ಹೆಸರು ಗೊತ್ತೇ ಇದೆ.. ಸದಾ ಒಂದಿಲ್ಲೊಂದು ಒಂದು ವಿಚಾರಗಳಿಗೆ ಟ್ರೋಲ್ ಆಗುವ ಸೋನು ಗೌಡ ಅವರ ವೀಡಿಯೋ ಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋದು ಉಂಟು.. ಅಂತಹ ಸಮಯದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುವ ಸೋನು ಗೌಡ ರೀಲ್ಸ್ ಮೂಲಕ ಫೇಮಸ್ ಕೂಡ ಹೌದು.. ಆನ್ಲೈನ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಲೇ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿರುವ ಸೋನು ಗೌಡ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು ಇವರ ಆಯ್ಕೆ ಸಾಕಷ್ಟು ಜನರ ಟೀಕೆಗೆ ಒಳಗಾಗಿತ್ತು..

ಇನ್ನು ಸೋನು ಗೌಡ ಈ ಹಿಂದೆ ಹದಿನೆಂಟು ನಿಮಿಷದ ವೀಡಿಯೋಗೆ ಫೇಮಸ್ ಆಗಿದ್ದು ಆ ವೀಡಿಯೋ ಬಹಳಷ್ಟು ಟ್ರೋಲ್ ಆಗಿತ್ತು.. ಹೌದು ತನ್ನ ಬಾಯ್ ಫ್ರೆಂಡ್ ಗೆ ಕಳುಹಿಸಿದ ವೀಡಿಯೋ ಅದಾಗಿದ್ದು ಆ ವೀಡಿಯೋವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡಿದ್ದ.. ಆ ಬಗ್ಗೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.. ಹೌದು ಆ ಹದಿನೆಂಟು ನಿಮಿಷದ ವೀಡಿಯೋವನ್ನು ಯಾರಿಗೆ ಕಳುಹಿಸಿದ್ದೆ ಎಂಬುದನ್ನೂ ಸಹ ಹೇಳಿಕೊಂಡಿದ್ದಾರೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿ, ಈಗ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಮಿರ ಮಿರ ಅಂತಾ ಮಿಂಚುತ್ತಿರುವ ಸೋನು ಶ್ರೀನಿವಾಸ್ ಗೌಡ ಈಗ ತಮ್ಮ ವಿಡಿಯೋ ಲೀಕ್ ಬಗ್ಗೆ ಮಾತನಾಡಿ, ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.. ತನ್ನ ಬಾಯ್‌ಫ್ರೆಂಡ್‌ನಿಂದ ಎದುರಿಸಿದ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ..

ಟಿಕ್ ಟಾಕ್ ಮೂಲಕ ಪರಿಚಿತರಾದ ಸೋನು ನಂತರದ ದಿನಗಳಲ್ಲಿ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದರು.. ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿ ಸೌಂಡ್ ಮಾಡುತ್ತಿರುವ ಸೋನು ಗೌಡ ಏಳು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರೋದುಂಟು.. ಈಗ ಬಿಗ್ ಬಾಸ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಸಹ ಪಡೆದಿದ್ದಾರೆ.. ಬಂದ ದಿನವೇ ತಮ್ಮ ಜೀವನ ಬಗ್ಗೆ ಅಸಲಿ ವಿಚಾರವೊಂದು ಇತರ ಸ್ಪರ್ಧಿಗಳೊಂದಿಗೆ ಶೇರ್ ಮಾಡಿದ್ದಾರೆ..

ನಮ್ಮ ಮನೆಯಲ್ಲಿ, ನೀನು ಯಾರನ್ನಾದರೂ ಲವ್ ಮಾಡು ಅಂತಾ ಸ್ವಾತಂತ್ರ್ಯ ಕೊಟ್ಟಿದ್ದರು. ಹಾಗಾಗಿ ನಾನು ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಒಂದು ದಿನ ಅವನು ಏನು ಕೇಳ್ದ ಅಂದರೆ ವಿಡಿಯೋ ಕಾಲ್ ಮಾಡು ಅಂತಾ ಕೇಳ್ದ.. ಆಮೇಲೆ ನಿನ್ನ ವಿಡಿಯೋ ಇದೆ.. ನೀನು ಯಾರನ್ನ ಮದುವೆ ಆಗುತ್ತೀಯಾ ನೋಡತ್ತೀನಿ.. ಅಂತ ಬೆದರಿಕೆ ಹಾಕಿದ್ದ ಅಂತಾ ಕಣ್ಣೀರಿಟ್ಟಿದ್ದಾರೆ.. ಸೋನು ಗೌಡ ಮಾತನ್ನು ಕೇಳಿದ ಇತರೇ ಸ್ಪರ್ಧಿಗಳು ಸೋನುಗೆ ಸಾಂತ್ವನ ಹೇಳಿದ್ದಾರೆ..

ಇಷ್ಟು ದಿನಗಳ ಕಾಲ ಸೋನು ಗೌಡ ಮೇಲೆ ಬಹಳಷ್ಟು ಜನರಿಗೆ ಬೇರೆಯದ್ದೇ ರೀತಿಯ ಅಭಿಪ್ರಾಯವಿದ್ದದ್ದಂತೂ ಸತ್ಯ.. ಈಗ ಸೋನು ಗೌಡ ಸತ್ಯ ತಿಳಿಸಿದ ಮೇಲೆ ಅದರಲ್ಲಿ ಕೆಲವರು ಸೋನು ಗೌಡ ಮೇಲಿನ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡರೂ ಬದಲಿಸಿಕೊಳ್ಳಬಹುದು.. ಇನ್ನು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಸೋನು ಗೌಡ ನಾಮಿನೇಟ್ ಆಗಿದ್ದು ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರ ಬರುವರ ವಾರಾಂತ್ಯದವರೆಗೆ ಕಾದು ನೋಡಬೇಕಿದೆ..