ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಶುಭಾ ಪೂಂಜಾ.. ಹುಡುಗ ಯಾರು ಗೊತ್ತಾ?

ಕನ್ನಡ ಹಾಗೂ ತಮಿಳಿನಲ್ಲಿ ಗುರುತಿಸಿಕೊಂಡಿರುವ ನಟಿ ಶುಭ ಪೂಂಜಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಪ್ರೀತಿಸಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.‌ ಜಾಕ್ಪಾಟ್ ಸಿನಿಮಾ ಮೂಲಕ ಕನ್ನಡ ಸಿನಿಮಾ‌ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದ ಶುಭಾ ಪೂಂಜಾ ಹೆಸರು ಮಾಡಿದ್ದು ಮಾತ್ರ ಮೊಗ್ಗಿನ ಮನಸ್ಸು ಸಿನಿಮಾ ಮೂಲಕವೇ.. ಮೊಗ್ಗಿನ ಮನಸ್ಸು ಸಿನಿಮಾ ಅಷ್ಟು ಪ್ರಖ್ಯಾತಿ ತಂದುಕೊಟ್ಟಿತ್ತು.. ಆನಂತರ ಕನ್ನಡದಲ್ಲಿ 20 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡರು..

ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಗೆಳೆಯ ಸುಮಂತ್ ಮಹಾಬಲ ಅವರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.. ಹೌದು ಸುಮಂತ್ ಹಾಗೂ ಶುಭ ಪೂಂಜಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದಾರಂತೆ.. ಶುಭಾ ಪೂಂಜಾ ಅವರ ನೇರ ನಡವಳಿಕೆ ಇಷ್ಟವಾಯಿತು ಎನ್ನುತ್ತಾರೆ ಸುಮಂತ್.. ಸುಮಂತ್ ಮೂಲತಃ ಮಂಗಳೂರು ಮೂಲದವರಾಗಿದ್ದು ಜೈ ಕರ್ನಾಟಕ ಸಂಘಟನೆಯ ಸೌತ್ ವಿಂಗ್ ನ ಅಧ್ಯಕ್ಷರೂ ಹೌದು.. ಮುತ್ತಪ್ಪ ರೈ ಅವರ ಮಗನ ಆಪ್ತನಾಗಿರುವ ಸುಮಂತ್ ಜೈ ಕರ್ನಾಟಕದ ಜೊತೆಗೆ ತಮ್ಮದೇ ಆದ ಉದ್ಯಮವನ್ನು ಸಹ ಮಾಡಿಕೊಂಡಿದ್ದಾರೆ..

ಲಾಕ್ ಡೌನ್ ನಲ್ಲಿ ಸಾಲು ಸಾಲು ಸೆಲಿಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು.. ಸದ್ಯ ಶುಭ ಪೂಂಜಾ ಅವರ ಮದುವೆಯೂ ಸಹ ನಿಶ್ಚಯವಾಗಿದೆ.. ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಇವರಿಬ್ಬರ ಕಲ್ಯಾಣಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದು, ಈ ವರ್ಷದ ಅಂತ್ಯದಲ್ಲಿ ಮದುವೆ ಸಮಾರಂಭ ನೆರವೇರಲಿದೆ..