ನೂತನ ಜೀವನ ಆರಂಭಿಸಿದ ನಟಿ ನಿರ್ಮಾಪಕಿ ಶೃತಿ ನಾಯ್ಡು.. ಶುಭ ಹಾರೈಸಿದ ದರ್ಶನ್..

ಕಿರುತೆರೆಯ ಒಂದು ಕಾಲದ ನಟಿ ಸದ್ಯ ದೊಡ್ಡ ದೊಡ್ಡ ಧಾರಾವಾಹಿಗಳ ನಿರ್ಮಾಪಕಿ ಶೃತಿ ನಾಯ್ಡು ಅವರು ಮೈಸೂರಿನಲ್ಲಿ ನೂತನ ಜೀವನವನ್ನು ಆರಂಭಿಸಿದ್ದಾರೆ..

ಹೌದು ಜೀ ವಾಹಿನಿಯ ಯಾರೆ ನೀ ಮೋಹಿನಿ, ಬ್ರಹ್ಮ ಗಂಟು ಧಾರಾವಾಹಿಗಳ ನಿರ್ಮಾಪಕಿ ಶೃತಿ ನಾಯ್ಡು ಅವರು ಕಿರುತೆರೆ ಮಾತ್ರವಲ್ಲದೆ ಪ್ರೀಮಿಯರ್ ಪದ್ಮಿನಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲೂ ನಿರ್ಮಾಪಕಿಯಾಗಿ ಗುರುತಿಸಿಕೊಂಡರು..

ಇದೀಗ ತಮ್ಮ ಜೀವನದಲ್ಲಿ ಹೊಸ ಹೆಜ್ಜೆಯನ್ನಿಟ್ಟಿದ್ದಾರೆ.. ಹೌದು ತಮ್ಮ ಹುಟ್ಟೂರು ಮೈಸೂರಿನಲ್ಲಿ ಹೊಟೆಲ್ ಉದ್ಯಮ ಶುರು ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಖುದ್ದು ಆಗಮಿಸಿ ಶುಭ ಕೋರಿದ್ದಾರೆ..

ಮೈಸೂರಿನ ರಾಮಸ್ವಾಮಿ ಸರ್ಕಲ್ ಬಳಿ ಮೈಸೂರು ಮಿರ್ಚಿ ಎಂಬ ರೆಸ್ಟೋರೆಂಟ್ ಪ್ರಾರಂಭ ಮಾಡಿದ್ದು, ಹೊಸ ಜೀವನ ಶುರು ಮಾಡುತ್ತಿದ್ದೇನೆ ಎಂದು ಶೃತಿ ನಾಯ್ಡು ಅವರು ತಿಳಿಸಿದ್ದಾರೆ.. ಅಷ್ಟೇ ಅಲ್ಲದೆ ರೆಸ್ಟೋರೆಂಟ್ ಉದ್ಘಾಟನೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕರಾದ ಸಂದೇಶ್ ನಾಗರಾಜ್ ಆಗಮಿಸಿ ಟೇಪ್ ಕಟ್ ಮಾಡುವ ಮೂಲಕ ಶುಭಾರಂಭ ಮಾಡಿದರು…

ಇತ್ತ ರೆಸ್ಟೋರೆಂಟ್ ಉದ್ಘಾಟನೆಗೆ ದರ್ಶನ್ ಅವರು ಬರುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ನೆಚ್ಚಿನ ಸ್ಟಾರ್ ನೋಡಲು ಆಗಮಿಸಿದ್ದು ಅಭಿಮಾನಿಗಳತ್ತ ಕೈ ಬೀಸಿ ದರ್ಶನ್ ಅವರು ವಿಶ್ ಮಾಡಿದರು..

ಇನ್ನು ನಿನ್ನೆಯಷ್ಟೇ ಜಗ್ಗೇಶ್ ಅವರು ಮೈಸೂರಿನ ತಮ್ಮ ಜಗ್ಗೇಶ್ ಕನ್ವೆಂಷನ್ ಹಾಲ್ ಗೆ ಆಗಮಿಸಿದ್ದು, ಇದೇ ಸಮಯದಲ್ಲಿ ಶೃತಿ ನಾ‌ಯ್ಡು ಅವರ ಮೈಸೂರು ಮಿರ್ಚಿ ರೆಸ್ಟೋರೆಂಟ್ ಗೂ ಆಗಮಿಸಿ ಶುಭ ಕೋರಿದ್ದರು.. ಇನ್ನು ಸೆಲಿಬ್ರೆಟಿಗಳು ಮೈಸೂರಿಗೆ ಆಗಮಿಸಿದರೆ ಮೈಸೂರು ಮಿರ್ಚಿ ಕಲಾವಿದರ ಅಡ್ಡ ಆಗೋದ್ರಲ್ಲಿ ಸಂಶಯವಿಲ್ಲ.. ಹೊಸ ಜರ್ನಿ ಆರಂಭಿಸಿರುವ ಶೃತಿ ನಾಯ್ಡು ಅವರಿಗೆ ಶುಭವಾಗಲಿ..

Latest from News

Go to Top