EMI ಕಟ್ಟಲು ಹಣವಿಲ್ಲ.. ಆರ್ಥಿಕ ಸಂಕಷ್ಟದಲ್ಲಿ ಸ್ಟಾರ್ ನಟಿ ಶೃತಿ ಹಾಸನ್..

ಕೊರೊನಾ ಕಾರಣದಿಂದಾಗಿ ಲಾಕ್ ಡೌನ್ ಆದಾಗಿನಿಂದ ಬಡವರು ಮಾತ್ರವಲ್ಲ ಸ್ಥಿತಿವಂತರೂ ಕೂಡ ಒಂದಿಲ್ಲೊಂದು ಸಂಕಷ್ಟಕ್ಕೀಡಾಗಿದ್ದಾರೆ.. ಹೌದು ಲಾಕ್ ಡೌನ್ ಆದಾಗಿನಿಂದ ಬೇರೆ ಉದ್ಯಮಗಳಂತೆ ಸಿನಿಮಾ ಇಂಡಸ್ಟ್ರಿ ಕೂಡ ಸಂಪೂರ್ಣ ಬಂದ್ ಆಗಿದೆ.. ಸದ್ಯ ಯಾವುದೇ ಸಿನಿಮಾ ಬಿಡುಗಡೆಯೂ ಇಲ್ಲ.. ಶೂಟಿಂಗ್ ಗೆ ಅನುಮತಿಯೂ ಇಲ್ಲ.. ಶೂಟಿಂಗ್ ಗೆ ಅನುಮತಿ ಕೊಟ್ಟರೂ ಕೂಡ ಸದ್ಯ ಕೊರೊನಾ ಭಯದಿಂದಾಗಿ ಸದ್ಯಕ್ಕೆ ಯಾರೂ ಶೂಟಿಂಗ್ ಮಾಡುವ ಧೈರ್ಯ ಮಾಡುವಂತೆ ಕಾಣುವುದಿಲ್ಲ..

ಇನ್ನು ತಮ್ಮ ಸಂಪಾದನೆಯನ್ನು ನಂಬಿಕೊಂಡು ಕಾರು ಮನೆ ಅಂತ ಲೋನ್ ನಲ್ಲಿ‌ ಕೊಂಡುಕೊಂಡವರ ಪರಿಸ್ಥಿತಿ ಹೇಳತೀರದು.. ಇತ್ತ ಇ ಎಂ ಐ ಕಟ್ಟಲೇ ಬೇಕು.. ಅತ್ತ ಸಂಪಾದನೆಯು ಇಲ್ಲ.. ಅಡ ಕತ್ತರಿಯ ನಡುವೆ ಸಿಲುಕಿದಂತಾಗಿದೆ ಅವರುಗಳ ಜೀವನ.. ಅದೇ ರೀತಿ ಇಲ್ಲೊಂದು ಸುದ್ದಿ ವೈರಲ್ ಆಗಿದ್ದು ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಕೂಡ ಆರ್ಥಿಕ ಸಂಕಷ್ಟ ಎದುರಾಗಿದೆಯಂತೆ..

ಹೌದು ಶೃತಿ ಹಾಸನ್ ಅವರು ಲಾಕ್ ಡೌನ್ ಆದಾಗಿನಿಂದ ಕೆಲಸ ಇಲ್ಲ.. ಪಾಕೆಟ್ ಕಾಲಿ ಆಗಿದೆ.. ಇ ಎಂ ಐ ಹೇಗೆ ಪೇ ಮಾಡಲಿ ಎಂದು ಚಿಂತಿಸುತ್ತಿದ್ದಾರಂತೆ.. ಒಟ್ಟಿನಲ್ಲಿ ಕೊರೊನಾ ಎಂಬುದು ಬಡವರಿಂದ ಹಿಡಿದು ಸ್ಥಿತಿವಂತ ಸಿರಿವಂತರನ್ನೂ ಕೂಡ ಬೇರೆ ಬೇರೆ ರೀತಿಯಲ್ಲಿ ಕಾಡುತಲಿದೆ ಎನ್ನಬಹುದು..