ಜೀವನದ ಹೊಸ ಆರಂಭದ ನಿರ್ಧಾರ ಮಾಡಿದ ನಟಿ ಶೃತಿ.. ಅಮ್ಮನ ನಿರ್ಧಾರಕ್ಕೆ ಬೆಂಬಲವಾಗಿ ನಿಂತ ಮಗಳು ಗೌರಿ..

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವವರು ನಟಿ ಶ್ರುತಿ..3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ನಟಿ ಶ್ರುತಿ ಅವರು ಕನ್ನಡ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಕಣ್ಣೀರಿನ ರಾಣಿ ಎಂದೇ ಇವರು ಖ್ಯಾತಿಯಾಗಿದ್ದರು. ನಟಿ ಶ್ರುತಿ ಅವರು ನಟಿಸಿದ್ದಾರೆ ಎಂದರೆ ಆ ಸಿನಿಮಗಳನ್ನು ನೋಡಲು ತಪ್ಪದೆ ಎಲ್ಲರೂ ಚಿತ್ರಮಂದಿರಕ್ಕೆ ಬರುತ್ತಿದ್ದರು. ಆ ಕಾಲವನ್ನು ಯಾರು ಮರೆಯಲು ಸಾಧ್ಯವಿಲ್ಲ. ಪ್ರಸ್ತುತ ನಟಿ ಶ್ರುತಿ ಅವರು ಮೊದಲಿನ ಹಾಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ಅಭಿನಯ ಮಾಡುತ್ತಿದ್ದಾರೆ ಜೊತೆಗೆ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ ನಟಿ ಶ್ರುತಿ. ಆದರೆ ಈಗ ನಟಿ ಶ್ರುತಿ ಅವರ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದ್ದು, ಜೀವನದಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ, ಇದಕ್ಕೆ ಅವರ ಮಗಳು ಗೌರಿ ಸಹ ಸಾಥ್ ಕೊಡುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..

ನಟಿ ಶ್ರುತಿ ಅವರದ್ದು ರಂಗಭೂಮಿಯ ಕುಟುಂಬ. ಶ್ರುತಿ ಅವರ ತಂದೆ ತಾಯಿ ಆಗಿನ ಕಾಲದಿಂದಲೂ ಅನೇಕ ನಾಟಕಗಳಲ್ಲಿ ಅಭಿನಯ ಮಾಡಿದವರು. ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿ, ಮಕ್ಕಳು ದೊಡ್ಡ ಸಾಧನೆ ಮಾಡಬೇಕು ಎನ್ನುವುದು ಆ ತಂದೆ ತಾಯಿಯ ದೊಡ್ಡ ಆಸೆ ಆಗಿತ್ತು. ಆದರೆ ಅದು ಸುಲಭ ಆಗಿರಲಿಲ್ಲ. ಶ್ರುತಿ ಅವರಿಗೆ ಆರಂಭದ ದಿನಗಳಲ್ಲಿ ಅವಕಾಶ ಸಿಗುವುದು ಸ್ವಲ್ಪ ಕಷ್ಟವೇ ಆಗಿತ್ತು. ಮೊದಲ ಬಾರಿಗೆ ಶಿವಣ್ಣ ಅವರಿಗೆ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು ನಟಿ ಶ್ರುತಿ. ನಂತರ ಶ್ರುತಿ ಎನ್ನುವ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು. ಅದಾದ ಬಳಿಕ ಅನೇಕ ಪಾತ್ರಗಳು ಶ್ರುತಿ ಅವರನ್ನು ಹುಡುಕಿಕೊಂಡು ಬರಲು ಶುರುವಾದವು.

ಶ್ರುತಿ ಅವರು ಹೆಚ್ಚಾಗಿ ಕಾಣಿಸಿಕೊಂಡಿದ್ದು ಮಹಿಳಾ ಪ್ರಧಾನ ಪಾತ್ರಗಳಲ್ಲಿ, ಜನರ ಕರುಳು ಚುರ್ ಎನ್ನುವಂಥ ಭಾವನಾತ್ಮಕ ಪಾತ್ರಗಳಲ್ಲೇ ಶ್ರುತಿ ಅವರು ಹೆಚ್ಚಾಗಿ ನಟಿಸಿದರು, ವೀಕ್ಷಕರ ಕಣ್ಣಲ್ಲಿ ನೀರು ಬರುವಂತೆ ಇರುತ್ತಿತ್ತು ಇವರ ಅಭಿನಯ. ಶ್ರುತಿ ಅವರ ಸಿನಿಮಾಗಳು ಅಂದ್ರೆ ವೀಕ್ಷಕರು ಥಿಯೇಟರ್ ನಲ್ಲಿ ನೋಡಲು ಕಾದಿರುತ್ತಿದ್ದರು. ಹಲವು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಿ ಶ್ರುತಿ ನಿರ್ದೇಶಕ ಎಸ್.ನಾರಾಯಣ್ ಅವರ ಜೊತೆ ಮದುವೆ ಬೇಗ ಮುರಿದು ಬಿದ್ದಿತು, ಆದರೆ ಶ್ರುತಿ ಅವರ ಜೊತೆಗೆ ಇಂದು ಅವರ ಮಗಳಿದ್ದಾಳೆ. ಶ್ರುತಿ ಅವರ ಮಗಳು ಗೌರಿ ಅಮ್ಮನಿಗೆ ಎಲ್ಲಾ ವಿಚಾರದಲ್ಲೂ ಸಾಥ್ ನೀಡುತ್ತಾಳೆ.

ಮಗಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದಾರೆ ನಟಿ ಶ್ರುತಿ. ತಾಯಿಯ ಹಾಗೆ ಗೌರಿ ಸಹ ಒಳ್ಳೆಯ ಪ್ರತಿಭೆ. ನೋಡಲು ಬಹಳ ಸುಂದರವಾಗಿರುವ ಗೌರಿ, ಬಹಳ ಚೆನ್ನಾಗಿ ಹಾಡುತ್ತಾಳೆ. ತಾನು ಹಾಡಿರುವ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಾಳೆ ಗೌರಿ, ಗೌರಿ ಹಾಡಿರುವುದನ್ನು ನೋಡಿ ಸಾಕಷ್ಟು ಜನ ಅಭಿಮಾನಿಗಳಾಗಿದ್ದು, ಚಿತ್ರರಂಗಕ್ಕೆ ಆದಷ್ಟು ಬೇಗ ಎಂಟ್ರಿ ಕೊಡಿ ಎನ್ನುತ್ತಿದ್ದಾರೆ. ಚಂದನವನಕ್ಕೆ ಗೌರಿ ನಾಯಕಿಯಾಗಿ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತವೆ. ಇದೀಗ ನಟಿ ಶ್ರುತಿ ಅವರು ತಮ್ಮ ಜೀವನದಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಅವರ ಮಗಳು ಸಾಥ್ ನೀಡಿದ್ದಾರೆ. ಆ ಮಹತ್ವದ ನಿರ್ಧಾರ ಏನು ಅಂದ್ರೆ..

ನಟಿ ಶ್ರುತಿ ಅವರು ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಅದು ಹಿರಿಯನಟ ರಾಮ್ ಕುಮಾರ್ ಅವರ ಜೊತೆ. 90ರ ದಶಕದಲ್ಲಿ ಶ್ರುತಿ ಮತ್ತು ರಾಮ್ ಕುಮಾರ್ ಬಹಳ ಫೇಮಸ್ ಆಗಿದ್ದ ಜೋಡಿ. ತವರಿನ ತೊಟ್ಟಿಲು, ನವಶಕ್ತಿ ವೈಭವ, ತಾಯಿ ಇಲ್ಲದ ತವರು ಹಾಗೂ ಇನ್ನಿತರ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ರಾಮ್ ಕುಮಾರ್ ಅವರು ನಟನೆಯಿಂದ ದೂರವಾಗಿಯೇ ಅನೇಕ ವರ್ಷಗಳಾಗಿವೆ. ಇದೀಗ ಈ ಜೋಡಿ ಸೀರಿಯಲ್ ಮೂಲಕ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೊಂದು ಜೋರಾಗಿಯೇ ಸೌಂಡ್ ಮಾಡುತ್ತಿದೆ. ಆದರೆ ಇದರ ಈ ಇಬ್ಬರು ಕಲಾವಿದರು ಇನ್ನು ಅಧಿಕೃತ ಹೇಳಿಕೆ ನೀಡಿಲ್ಲ..

ನಟಿ ಶ್ರುತಿ ಮತ್ತು ನಟ ರಾಮ್ ಕುಮಾರ್ ಇಬ್ಬರು ಧಾರಾವಾಹಿಯಲ್ಲಿ ನಟಿಸುತ್ತಿರುವುದು ಬಹುತೇಕ ಖಚಿತ ಎನ್ನಲಾಗಿದ್ದು, ಈಗಾಗಲೇ ಪ್ರೋಮೋ ಚಿತ್ರೀಕರಣ ಸಹ ನಡೆದಿದ್ದು, ಶೀಘ್ರದಲ್ಲೇ ಪ್ರೋಮೋ ಬಿಡುಗಡೆ ಆಗುತ್ತದೆ ಎನ್ನಲಾಗಿದೆ. ಇವರಿಬ್ಬರು ನಟಿಸುತ್ತಿರುವ ಈ ಧಾರಾವಾಹಿ ಒಂದು ಮರಾಠಿ ಸೀರಿಯಲ್ ನ ರಿಮೇಕ್ ಎಂದು ಕೂಡ ಹೇಳಲಾಗುತ್ತಿದೆ. ಇದು. ನಿಜವೇ ಎಂದು ತಿಳಿಯಲು ಇನ್ನು ಕೆಲವು ದಿನಗಳು ಕಾಯಬೇಕಿದೆ. ರಾಮ್ ಕುಮಾರ್ ಅವರ ಮಕ್ಕಳು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ರಾಮ್ ಕುಮಾರ್ ಮತ್ತು ಶ್ರುತಿ ಅವರು ಜೊತೆಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರೆ, ಇವರ ಅಭಿಮಾನಿಗಳಿಗೆಲ್ಲಾ ಸಂತೋಷ ಆಗುವುದು ಖಂಡಿತ.