ಅಂದು ಲವ್‌ ಮಾಕ್ಟೈಲ್‌ ಇಂದು ಓಲ್ಡ್‌ ಮಾಂಕ್‌.. ನಟನ ಪರಿಸ್ಥಿತಿ ಏನಾಗಿದೆ ನೋಡಿ..

ಓಲ್ಡ್ ಮಾಂಕ್.. ಕನ್ನಡ ಪ್ರತಿಭಾನ್ವಿತ ನಿರ್ದೇಶಕ ಮತ್ತು ಮತ ಶ್ರೀನಿ ನಿರ್ದೇಶನದ ಜೊತೆಗೆ ನಟಿಸಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಸಿನಿಮಾ. ಎಸ್.ನಾರಾಯಣ್, ಸಿಹಿ ಕಹಿ ಚಂದ್ರು, ಅರುಣಾ ಬಾಲರಾಜ್ ಹೀಗೆ ಒಳ್ಳೆಯ ತಾರಾಗಣ ಇರುವ ಸಿನಿಮಾ. ಅಪ್ಪಟ ಕನ್ನಡ ಸಿನಿಮಾ, ಕಳೆದ ವಾರ ಬಿಡುಗಡೆಯಾದ ಓಲ್ಡ್ ಮಾಂಕ್ ಸಿನಿಮಾವನ್ನ ಕನ್ನಡ ಸಿನಿಪ್ರಿಯರು ತುಂಬಾ ಇಷ್ಟಪಟ್ಟಿದ್ದಾರೆ. ಇಂತಹ ಕಥೆಯನ್ನ ಇದುವರೆಗೂ ನೋಡಿಲ್ಲ ಎಂದು ಹೇಳಿ ಎಂಜಾಯ್ ಮಾಡುತ್ತಿದ್ದಾರೆ. ಕರ್ನಾಟಕದ ಎಲ್ಲೆಡೆ ಬಹುತೇಕ ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಓಲ್ಡ್ ಮಾಂಕ್ ಸಿನಿಮಾಗೆ ಸಿನಿಪ್ರಿಯರಿಂದ ಮತ್ತು ವಿಮರ್ಷಿಕರಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಇಂತಹ ಒಳ್ಳೆಯ ಸಿನಿಮಾಗೆ ಇಂದು ಸಂಕಷ್ಟ ಎದುರಾಗಿದೆ. ಥಿಯೇಟರ್ ಗಳ ಕೊರತೆ ಅನುಭವಿಸುತ್ತಿದೆ ಓಲ್ಡ್ ಮಾಂಕ್ ಸಿನಿಮಾ. ಪರಭಾಷೆ ಸಿನಿಮಾಗಳ ಹಾವಳಿಯಿಂದ ನಮ್ಮ ಕನ್ನಡ ಸಿನಿಮಾಗಳು ನಲುಗಿ ಹೋಗುತ್ತಿವೆ. ಈ ರೀತಿ ಆಗಿರುವುದಕ್ಕೆ ನಟ ನಿರ್ದೇಶಕ ಶ್ರೀನಿ ಬಹಳ ನೋವಿನ ಮಾತುಗಳನ್ನಾಡಿದ್ದಾರೆ..

ನಮ್ಮ ಭಾಷೆಯನ್ನು ಬಿಟ್ಟು, ನಮ್ಮ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವುದನ್ನು ಬಿಟ್ಟು, ಬೇರೆ ಭಾಷೆಯ ಸಿನಿಮಾಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಕರ್ನಾಟಕದಲ್ಲಿ ಮಾತ್ರವೇ ಇರಬಹುದು. ಬೇರೆ ಎಲ್ಲಾ ರಾಜ್ಯಗಳಲ್ಲೂ ಅಲ್ಲಿನ ಸ್ಥಳೀಯ ಭಾಷೆಗೆ, ಅವರ ಸಿನಿಮಾಗಳಿಗೆ ಮೊದಲ ಆದ್ಯತೆ ಕೊಟ್ಟು, ನಂತರ ಬೇರೆ ಭಾಷೆ ಸಿನಿಮಾಗಳಿಗೆ ಸ್ಕ್ರೀನ್ ಗಳನ್ನು ನೀಡುತ್ತಾರೆ. ಆದರೆ ಕರ್ನಾಟಕದಲ್ಲಿ ಹಾಗಿಲ್ಲ, ತೆಲುಗು, ತಮಿಳು ಹಿಂದಿ ಭಾಷೆಯ ಸಿನಿಮಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ಹಾಗೆಯೇ ಜನರು ಸಹ ಬೇರೆ ಭಾಷೆಯ ಸಿನಿಮಾಗಳನ್ನೇ ಹೆಚ್ಚಾಗಿ ನೋಡುತ್ತಾರೆ. ಇದರಿಂದಾಗಿ ನಲುಗಿ ಹೋಗುತ್ತಿರುವುದು ನಮ್ಮ ಕನ್ನಡ ಸಿನಿಮಾಗಳು.

ಇಂತಹ ತೊಂದರೆಗಳು ಕನ್ನಡ ಸಿನಿಮಾಗಳಿಗೆ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅನೇಕ ಒಳ್ಳೆಯ ಕನ್ನಡ ಸಿನಿಮಾಗಳು ಪರಭಾಷೆ ಸಿನಿಮಾಗಳಿಗೆ ಸಿಗುತ್ತಿರುವ ಪ್ರಾಮುಖ್ಯತೆ ಇಂದ ಸೋತಿವೆ. ಇದರಿಂದಾಗಿ ಕನ್ನಡ ಪ್ರತಿಭೆಗಳಿಗೆ ಅನ್ಯಾಯವಾಗಿದೆ. ಇದೀಗ ಓಲ್ಡ್ ಮಾಂಕ್ ಸಿನಿಮಾ ಕೂಡ ಇದೇ ಸಮಸ್ಯೆ ಎದುರಿಸುತ್ತಿದೆ. ಈಗೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಹೆಸರಿನಿಂದ ಒಂದೇ ಕಡೆ ಎರಡು ಮೂರು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಥಿಯೇಟರ್ ಗಳು ಆ ಸಿನಿಮಾಗಳಿಗೆ ಹೋಗುತ್ತಿದೆ. ಓಲ್ಡ್ ಮಾಂಕ್ ಸಿನಿಮಾವನ್ನು ಜನರು ಇಷ್ಟಪಟ್ಟಿದ್ದರು ಸಹ ಥಿಯೇಟರ್ ಕೊರತೆಯಿಂದ ಜನರಿಗೆ ಸಿನಿಮಾ ತೋರಿಸಲು ಸಾಧ್ಯವಾಗುತ್ತಿಲ್ಲ.

ಬಹುತೇಕ ಥಿಯೇಟರ್ ಗಳನ್ನು ಬೇರೆ ಭಾಷೆಯ ಸಿನಿಮಾಗಳಿಗೆ ನೀಡಲಾಗಿದೆ. ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಇಂತಹ ಗತಿ ಬರುವುದು ನಿಜಕ್ಕೂ ನೋವಿನ ವಿಚಾರ. ಓಲ್ಡ್ ಮಾಂಕ್ ಚಿತ್ರತಂಡವು ಜನರಿಗೆ ಸಿನಿಮಾ ಇಷ್ಟ ಆಗಿರುವ ಕಾರಣ ತುಂಬಾ ಪ್ರಯತ್ನ ಪಟ್ಟ ನಂತರ ಸಿನಿಮಾಗೆ 30 ಹೆಚ್ಚು ಸ್ಕ್ರೀನ್ ಗಳು ಸಿಕ್ಕಿವೆ. ನಮ್ಮ ನಾಡಿನಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಲು ಈ ರೀತಿಯ ಕಷ್ಟ ಎದುರಿಸುವುದು ನಿಜಕ್ಕೂ ನೋವಿನ ವಿಚಾದ. ಇನ್ನು ಈ ರೀತಿ ಆಗಿರುವ ಬಗ್ಗೆ ನಟ ನಿರ್ದೇಶಕ ಶ್ರೀನಿ, ತಮಗಾದ ಅನುಭವದ ಬಗ್ಗೆ ಬೇಸರವಾಗಿ, ಟ್ವೀಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ..

“ನನಗೆ ನಿಜವಾಗಲೂ ಬೇಜಾರಾಗೋದು ಬೇರೆ ಭಾಷೆ ಸಿನಿಮಾ ರಿಲೀಸ್ ಆಗ್ತಿದೆ ಅನ್ನೋದಲ್ಲ ಆದ್ರೆ ಬೇರೆ ಬಾಶೆ ಸಿನಿಮಾಗಳಿಗೆ ಸಿಗೋ ನಂಬರ್ of ಶೋ/ಥಿಯೇಟರ್ಸ್ ನಮಗೆ ಸಿಗಲ್ಲ ,ಅದಕ್ಕೆ ತಕ್ಕಂತೆ ಸಾಕಷ್ಟು ಜನರು ಮೊದಲು ಬೇರೆ ಬಾಶೆ ಸಿನಿಮಾ ನೋಡುವುದಕ್ಕೆ ಮೊದಲು ಪ್ರಾಮುಖ್ಯತೆ ಕೊಡುತ್ತಾರೆ,ತುಂಬಾ ಜನ ಕನ್ನಡ ಸಿನಿಮಾ ಒಂದು ಚೆನ್ನಾಗಿದೆ ಅಂತ ಹೇಳಿದ.. ಮೇಲೆ ನಮ್ಮ ಕನ್ನಡ ಸಿನಿಮಾ ನೋಡ್ತಾರೆ ಆದ್ರೆ ಅಷ್ಟರಲ್ಲಿ ಶೋಸ್ ಕಮ್ಮಿ ಆಗುತ್ತೆ ,ಥಿಯೇಟರ್ಸ್ ಇಂದ ಎತ್ತಂಗಡಿ ಆಗುತ್ತೆ ..ಎಲ್ಲರಲ್ಲೂ ಒಂದು ಮನವಿ ಏನ್ ಅಂದರೆ ,ನಾವು ಕೂಡ ಒಳ್ಳೆ ಸಿನಿಮಾ ಮಾಡುವ ಎಲ್ಲಾ ಕೆಪಾಸಿಟಿ ಇದೆ..”

“ಮೊದಲ ಪ್ರಾಮುಖ್ಯತೆ ದಯಮಾಡಿ ಕನ್ನಡ ಸಿನೆಮಾಗಳ್ಳನ್ನು ನೋಡಾದ್ರಲ್ಲಿ ಇರಲಿ , ಖಂಡಿತ ನಮ್ಮ ಓಲ್ಡ್‌ ಮಾಂಕ್ ಚಿತ್ರ ನಿಮ್ಮನ್ನು ಬೇಸರ ಮಾಡುವುದಿಲ್ಲ , ನಿಮ್ಮ ಸ್ನೇಹಿತರನ್ನು ಕೇಳಿಕೊಂಡೆ ಹೋಗಿ ,ರಿವ್ಯೂಸ್ ನೋಡಿಕೊಂಡು ಹೋಗಿ ಆದ್ರೆ ಬೇಗ ಹೋಗಿ ನೋಡಿ ,ಇಲ್ಲವೇ ನಮಗೆ ನಮ್ಮ ಸಿನೆಮಾವನ್ನು ಥೀಯೇಟರ್ಗಳಲ್ಲಿ ಉಳಿಸಿ ಕೊಳ್ಳಲ್ಲು ಆಗುವುದಿಲ್ಲ ಇಟ್ಸ್ ಆಲ್ ಅಬೌಟ್ ನಂಬರ್ಸ್ ಎಂಡ್ ಆಫ್ ದಿ ಡೇ.” ಎಂದು ಬರೆದುಕೊಂಡಿದ್ದಾರೆ ನಟ ಶ್ರೀನಿ. ಒಬ್ಬ ನಿರ್ದೇಶಕನಿಗೆ ಎಷ್ಟು ನೋವಾಗಿರುತ್ತದೆ ಎಂದು ಇದರಲ್ಲಿ ಗೊತ್ತಾಗುತ್ತದೆ. ಇನ್ನುಮುಂದಾದರು ನಮ್ಮ ಭಾಷೆಗೆ ನಾವು ಪ್ರಾಮುಖ್ಯತೆ ಕೊಡುವುದನ್ನು ಕಲಿಯಬೇಕಿದೆ.