ಋತುಚಕ್ರದ ಬಗ್ಗೆ ಮಾತನಾಡಿದ್ದ ಶ್ರದ್ಧಾ ಶ್ರೀನಾಥ್.. ಆದರೆ…

ಹೆಣ್ಣು ಮಕ್ಕಳಿಗೆ ಋತುಚಕ್ರವೆಂಬುದು ಸಾಮಾನ್ಯದ ಸಂಗತಿ… ಸಾಮಾನ್ಯದ ಸಂಗತಿಯಾದರೂ ಕೆಲವೊಂದು ವಿಚಾರಗಳನ್ನು ಮಾತನಾಡಲು ಹಿಂಜರಿಕೆಯಿರುತ್ತದೆ.. ಆದರೆ ಮೊನ್ನೆಯಷ್ಟೇ ಶ್ರದ್ಧಾ ಶ್ರೀನಾಥ್ ಅವರು ತಮ್ಮ ಋತುಚಕ್ರದ ಬಗ್ಗೆ ಬೋಲ್ಡ್ ಹೇಳಿಕೆಯೊಂದನ್ನು ನೀಡಿದ್ದರು.. ತಮಗಾದ ಅನುಭವದ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು..

ಹೌದು ಈ ಬಗ್ಗೆ ಬರೆದು ಪೋಸ್ಟ್ ಮಾಡಿದ್ದ ಶ್ರದ್ಧಾ ಹೇಳಿದ ಮಾತುಗಳು ಇಲ್ಲಿದೆ ನೋಡಿ.. “ಆಗ ನನಗೆ ಇನ್ನು 14 ವರ್ಷ.. ಆ ಸಮಯದಲ್ಲಿ ನಮ್ಮ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು. ನಾನು ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದೆ.. ಆದರೆ ಅದೇ ಸಮಯಕ್ಕೆ ನನಗೆ ಪೀರಿಯಡ್ಸ್ ಆಯಿತು. ಆಗ ಅಮ್ಮ ನನ್ನ ಜೊತೆಯಲ್ಲಿ ಇರಲಿಲ್ಲ.

ಪಕ್ಕದಲ್ಲಿ ಚಿಕ್ಕಮ್ಮ ಇದ್ದರು.. ಅವರಿಗೆ ಈ ವಿಚಾರವನ್ನು ತಿಳಿಸಿದೆ. ನಾನು ಆ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಕೂಡ ಧರಿಸಿರಲಿಲ್ಲ.. ಈ ಸಮಯದಲ್ಲಿ ಪಕ್ಕದಲ್ಲೇ ಇನ್ನೊಬ್ಬ ಮಹಿಳೆ ಕೂತಿದ್ದರು.. ಅವರು ನಾನು ಚಿಕ್ಕಮ್ಮನಿಗೆ ಹೇಳಿದನ್ನು ಕೇಳಿಸಿಕೊಂಡು, ನನ್ನ ಕಡೆ ನೋಡಿ ಧೈರ್ಯದಿಂದ ನಗುತ್ತಾ ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾರೆ. ಪೂಜೆ ಸಂದರ್ಭದಲ್ಲಿ ಋತುಚಕ್ರ ಆಗಿದ್ದಕ್ಕೆ ನೀನು ಚಿಂತಿಸಬೇಡ.. ಎಂದು ಹೇಳಿದರು.. ಆ ದಿನವೇ ನಾನು ಮಹಿಳಾವಾದಿ ಆದೆ. ಅಲ್ಲದೇ ಪೀರಿಯಡ್ಸ್ ಬಗ್ಗೆ ತಪ್ಪು ಕಲ್ಪನೆಗಳನ್ನು ಮನಸ್ಸಿನಿಂದ ತೆಗೆದು ಹಾಕಿದೆ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಆದರೆ ಋತುಚಕ್ರದ ಬಗ್ಗೆ ಶ್ರದ್ಧಾ ಬರೆದ ಬೋಲ್ಡ್ ಪೋಸ್ಟ್ ನೋಡಿ‌ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.. ಮತ್ತೆ ಕೆಲವರು ಇದರಲ್ಲಿ ಪೋಸ್ಟ್ ಮಾಡುವಂತದ್ದೇನಿದೆ? ಎಲ್ಲಾ ಹೆಣ್ಣು ಮಕ್ಕಳಿಗೂ ಇದು ಸಾಮಾನ್ಯದ ಸಂಗತಿ.. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವಂತದ್ದೇನಿದೆ ಎಂದು ಕಮೆಂಟ್ ಮಾಡಿದ್ದಾರೆ..