ತನ್ನ ತಂದೆಗೆ ಖುದ್ದು ತಾನೇ ಕಟಿಂಗ್ ಶೇವಿಂಗ್ ಮಾಡುತ್ತಿರುವ ಸ್ಯಾಂಡಲ್ವುಡ್ ಹೀರೋ..

ಕೊರೊನಾದ ಭಯ ಎಷ್ಟರ ಮಟ್ಟಕ್ಕಿದೆ ಎಂದರೆ ಅವಶ್ಯಕತೆ ಇದ್ದರೂ ಸಹ ಹೊರ ಹೋಗುವುದೇಗೆ ಎನ್ನುವಂತಾಗಿದೆ.. ಹೊರಗೆಲ್ಲಾದರೂ ಸೋಂಕು ತಗುಲಿದರೆ ಏನಪ್ಪಾ ಗತಿ ಎನ್ನುವಂತಾಗಿದೆ.. ಅದಾಗಲೇ ಕೊರೊನಾ ಕಾರಣದಿಂದಾಗಿ ಬೆಂಗಳೂರು ಮತ್ತೊಮ್ಮೆ ಲಾಕ್ ಡೌನ್ ಆಗಿದೆ.. ಇನ್ನುಳಿದ ಭಾಗಗಳಲ್ಲಿಯೂ ಮುನ್ನೆಚ್ಚರಿಕಾ ಕ್ರಮವಾಗಿ ಅವಶ್ಯಕತೆ ಇಲ್ಲದೆ ಯಾರೂ ಹೊರ ಬರುತ್ತಿಲ್ಲ.. ಇನ್ನು ಸಲೂನ್ ಶಾಪ್ ಗಳು ಬಹುತೇಕ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿಕೊಂಡಿವೆ.. ಮತ್ತೆ ಕೆಲವು ಓಪನ್ ಇದ್ದರೂ ಸಹ ಜನರು ಸಲೂನ್ ಶಾಪ್ ಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವುದಂತೂ ಸತ್ಯ..

ಅದರಲ್ಲೂ ವಯಸ್ಸಾದ ಹಿರಿಯರು ಮನೆಯಿಂದ ಹೊರ ಬರುವುದು ಈ ಸಮಯದಲ್ಲಿ ಸರಿಯಿಲ್ಲದ ಕಾರಣ ಬಹುತೇಕ ಎಲ್ಲಾ ವೃದ್ಧರಿಗೂ ಒಂದು ರೀತಿ ಹೋಂ ಕ್ವಾರಂಟೈನ್ ಆಗಿಬಿಟ್ಟಿದೆ.. ಇನ್ನು ಇಂತಹ ಸಮಯದಲ್ಲಿ ಕಟಿಂಗ್ ಶೇವಿಂಗ್ ತಾವೇ ಮಾಡಿಕೊಳ್ಳಬೇಕಿದ್ದು ಸದ್ಯ ಕನ್ನಡದ ಖ್ಯಾತ ನಟ ತನ್ನ ತಂದೆಗೆ ಕಟಿಂಗ್ ಶೇವಿಂಗ್ ಮಾಡಿರುವ ಫೋಟೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತಂದೆ ಮಗನ ಪ್ರೀತಿಗೆ ಸಾಕ್ಷಿಯಾಗಿದೆ..

ಹೌದು ಆ ನಟ ಮತ್ಯಾರೂ ಅಲ್ಲ.. ಕಾಮಿಡಿ ಕಿಲಾಡಿಗಳು ಸಿನಿಮಾ ಮೂಲಕ ಕಿರುತೆರೆಗೆ ಕಾಲಿಟ್ಟು ಹಲವಾರು ಸಿನಿಮಾಗಳಲ್ಲಿ‌ ಅವಕಾಶ ಪಡೆದು ಕೊನೆಗೆ ನಾನು ಮತ್ತು ಗುಂಡ ಸಿನಿಮಾ ಮೂಲಕ ಹೀರೋ ಆಗಿಯೂ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟ ನಟ ಶಿವರಾಜ್ ಕೆ ಆರ್ ಪೇಟೆ.. ಹೌದು ಸದ್ಯ ಚಿತ್ರರಂಗ ಸ್ತಬ್ಧವಾಗಿದ್ದು, ಕಲಾವಿದರು ತಮ್ಮ ತಮ್ಮ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.. ಇತ್ತ ಲಾಕ್ ಡೌನ್ ಇರುವ ಕಾರಣ ಶಿವರಾಜ್ ಕೆ ಆರ್ ಪೇಟೆ ತನ್ನ ಊರಿನಲ್ಲಿಯೇ ವಾಸವಿದ್ದಾರೆ..

ಈ ಸಮಯದಲ್ಲಿ ತನ್ನ ವಯಸ್ಸಾದ ತಂದೆಗೆ ಮಗುವಿನ ರೀತಿಯಲ್ಲಿ ಕೂರಿಸಿಕೊಂಡು ಕಟಿಂಗ್ ಹಾಗೂ ಶೇವಿಂಗ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ಶಿವರಾಜ್ ಕೆ ಆರ್ ಪೇಟೆ ಅವರು “ನನ್ನಪ್ಪ.. ಚಿಕ್ಕಂದಿನಲ್ಲಿ ನಂಗೆ ಕಟ್ಟಿಂಗ್ ಮಾಡ್ಸಕ್ಕೆ ಶಾಪ್ ಗೆ ಕರ್ಕೊಂಡ್ ಹೋಗ್ತಿದ್ರು.. ಈಗ ಅವ್ರನ್ನ ಶಾಪ್ ಗೆ ಕರ್ಕೊಂಡ್ ಹೋಗೋಕೆ ಭಯ.. ಅದಕ್ಕೆ ನಾನೇ ಮಾಡ್ದೆ.” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಸದ್ಯ ಅಪ್ಪ ಮಗನ ಈ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಎಲ್ಲಾ ಮಕ್ಕಳು ಹೀಗೆ ಅಪ್ಪ ಅಮ್ಮನ ಜವಾಬ್ದಾರಿ ನಿಭಾಯಿಸಿದರೆ ಎಷ್ಟು ಚೆಂದವೆನ್ನುತ್ತಿದ್ದಾರೆ..