ಶಿವಣ್ಣನ ಮನೆಗೆ ಡಿ.ಕೆ‌ ಶಿವಕುಮಾರ್ ಅವರ ಭೇಟಿಯ ಹಿಂದಿನ ಅಸಲಿ ಕಾರಣ ಏನು ಗೊತ್ತಾ?

ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೊನ್ನೆಮೊನೆಯಷ್ಟೇ ಅಧಿಕಾರ ಸ್ವೀಕಾರ ಮಾಡಿದ ಡಿ ಕೆ ಶಿವಕುಮಾರ್ ಅವರು ಇಂದು ಧಿಡೀರ್ ಅಂತ ನಟ ಶಿವಣ್ಣನ ಮನೆಗೆ ಭೇಟಿ‌ ನೀಡಿದ್ದಾರೆ‌‌.. ಹೌದು ಕೆಪಿಸಿಸಿ ನೂತನ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಇಂದು ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಧಿಡೀರ್ ಭೇಟಿ‌ ನೀಡಿದ್ದು ಶಿವಣ್ಣ ಗೀತಾ ಡಿವರಾಜ್ ಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗಿದೆ.. ಈ ಭೇಟಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತು. ಆದರೆ ಶಿವಕುಮಾರ್ ಅವರು ಶಿವಣ್ಣನ ಮನೆಗೆ ಭೇಟಿ‌ ನೀಡಿದ್ದರ ಹಿಂದಿನ ಅಸಲಿ ಕಾರಣವೇ ಬೇರೆ ಇದೆ..

ಹೌದು ಮೊನ್ನೆ ಮೊನ್ನೆಯಷ್ಟೇ ಡಿಕೆ ಶಿವಕುಮಾರ್ ಅವರು ಅದ್ಧೂರಿಯಾಗಿ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದರು.. ಇದೇ ಕಾರಣಕ್ಕೆ ಶಿವಣ್ಣನ ಜೊತೆ ಫೋಟೋ ನೋಡಿ ರಾಜಕೀಯ ಉದ್ದೇಶದ ಭೇಟಿ ಎಂಬ ಮಾತುಗಳು ಕೇಳಿ ಬಂದಿದ್ದವು.. ಆದರೆ ಇದೊಂದು ಸೌಜನ್ಯದ ಭೇಟಿಯಷ್ಟೇ ಎಂಬ ವಿಚಾರ ತಿಳಿದುಬಂದಿದೆ..

ಹೌದು ಡಿ ಕೆ ಶಿವಕುಮಾರ್ ಅವರು ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.‌.. ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದು ಕೆಲ ಸಮಯ ಕಳೆದು ಬಂದಿದ್ದಾರೆ.‌

ಶಿವರಾಜ್‌ ಕುಮಾರ್ ಅವರ ಮನೆ ಇರುವುದು ನಾಗವಾರದಲ್ಲಿ.. ಅಲ್ಲಿಯೇ ಮದುವೆ ಸಮಾರಂಭವೊಂದಕ್ಕೆ ಡಿ.ಕೆ.ಶಿವಕುಮಾರ್ ಅವರು ಆಗಮಿಸಿದ್ದರು.. ಶಿವಣ್ಣ ಅಲ್ಲಿಯೇ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದುದನ್ನು ನೋಡಿದ ಶಿವಕುಮಾರ್ ಅವರು ಶಿವಣ್ಣನ ಮನೆಗೆ ತೆರಳಿ ಭೇಟಿಯಾಗಿ ಬಂದಿದ್ದಾರೆ..

ಅಷ್ಟೇ ಅಲ್ಲದೇ ಈ ಭೇಟಿಯ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಕುಮಾರ್ ಅವರು ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ.. ಇದೊಂದು ಸೌಜನ್ಯದ ಭೇಟಿ ಅಷ್ಟೇ ಎಂದು ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ..