ರಾಘಣ್ಣನನ್ನು ತಬ್ಬಿಕೊಂಡು ಮೈಕ್ ಆಫ್ ಮಾಡಿದ ಶಿವಣ್ಣ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಹೇಳಿದ್ದೇನು ಗೊತ್ತಾ..

ನಿನ್ನೆಯಷ್ಟೇ ಬೆಂಗಳೂರು ಅರಮನೆ ಮೈದಾನದಲ್ಲಿ ಪುನೀತ್ ರಾಜ್ ಕುಮಾರ್ ಅವರು ಅಭಿನಯದ ಕೊನೆ ಸಿನಿಮಾ ಜೇಮ್ಸ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಚಿತ್ರರಂಗದ ಬಹುತೇಕ ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.. ಅದರಲ್ಲಿಯೂ ಪ್ರಮುಖವಾಗಿ ದೊಡ್ಮನೆ ಕುಟುಂಬದ ಸಂಪೂರ್ಣ ಮಂದಿ ಪುನೀತ್ ಅವರ ಕೊನೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಪ್ಪು ಬಗ್ಗೆ ನೆನೆದು ಭಾವುಕರಾದರು.. ಇದೇ ಸಮಯದಲ್ಲಿ ವೇದಿಕೆ ಮೇಲೆ ಶಿವಣ್ಣ ಮಾತನಾಡುವ ಸಮಯದಲ್ಲಿ ಮೈಕ್ ಆಫ್ ಮಾಡಿದ ಶಿವಣ್ಣ ರಾಘಣ್ಣನನ್ನು ತಬ್ಬಿಕೊಂಡು ಸಾಕಷ್ಟು ಮಾತನಾಡಿದರು..

ಹೌದು ಪುನೀತ್ ರಾಜ್ ಕುಮಾರ್ ಅವರು ಇಲ್ಲದೇ ಅವರ ಸಿನಿಮಾ ಬಿಡುಗಡೆ ಹಾಗೂ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಕುಟುಂಬದ ಸದಸ್ಯರನ್ನು ಮಾತ್ರವಲ್ಲ‌ ಸಾಮಾನ್ಯ ಜನರನ್ನು ಸಹ ಭಾವುಕರನ್ನಾಗಿಸಿದೆ.. ನಿನ್ನೆ ರಾಜ್ಯದ ನಾನಾ ಮೂಲೆಗಳಿಂದ ಅಭಿಮಾನಿಗಳು ಅಪ್ಪುವಿನ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.. ಪುನೀತ್ ಅವರ ಬಗ್ಗೆ ಮಾತನಾಡುವುದನ್ನು ಕಂಡು ಕಣ್ಣಿರಿಟ್ಟರು.. ಇನ್ನು ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದ ಅಶ್ವಿನಿ‌ ಪುನೀತ್ ಅವರ ದುಃಖ ಮತ್ತಷ್ಟು ಹೆಚ್ಚಾಗಿ ಆ ಜಾಗದಿಂದ ಅರ್ಧಕ್ಕೆ ಹೊರ ನಡೆದು ಬಿಟ್ಟರು.. ಹೌದು ಅಶ್ವಿನಿ ಅವರು ಮಗಳ ಜೊತೆ ಕಾರ್ಯಕ್ರಮಕ್ಕೆ ಆಗಮಿಸಿದ್ದು ಕಾರ್ಯಕ್ರಮದ ಶುರುವಿನಲ್ಲಿ ಇದ್ದರು..

ಆದರೆ ಬರುಬರುತ್ತಾ ಪುನೀತ್ ಅವರ ಬಗ್ಗೆ ಮಾತುಗಳನ್ನು ಕೇಳಿ ದುಃಖ ತಡೆದು ತಲೆ ಬಗ್ಗಿಸಿ ಕಣ್ಣೀರಿಡುತ್ತಿದ್ದ ಅಶ್ವಿನಿ ಅವರು ಆ ಜಾಗದಿಂದ ಮಗಳ ಜೊತೆ ಹೊರ ನಡೆದರು.. ಇನ್ನು ಇತ್ತ ಶಿವಣ್ಣ ಹಾಗೂ ರಾಘಣ್ಣನ ಪರಿಸ್ಥಿತಿ ಯಾರಿಗೂ ಬೇಡ ಎನ್ನುವಂತಾಗಿತ್ತು.. ಹೌದು ಇತ್ತ ಸಿನಿಮಾ ತಂಡ ಮಾಡುತ್ತಿರುವ ಕಾರ್ಯಕ್ರಮವಾಗಿದ್ದರಿಂದ ರಾಘಣ್ಣ ಹಾಗೂ ಶಿವಣ್ಣ ಅಲ್ಲಿ‌ ಇರಲೇ ಬೇಕಾದ ಸಂದರ್ಭ ಎದುರಾಗಿತ್ತು.. ಜೊತೆಗೆ ಅಪ್ಪುವಿನ ಸಹೋದರಿಯರಾದ ಲಕ್ಷ್ಮಿ ಅವರು ಹಾಗೂ ಪೂರ್ಣಿಮಾ ಅವರೂ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು..

ಇನ್ನು ವೇದಿಕೆ ಮೇಲೆ ಆಗಮಿಸಿದ ರಾಘಣ್ಣ ಬಹಳ ಭಾವುಕರಾಗಿ ಮಾತನಾಡಿದ್ದು ರಾಘಣ್ಣನ ಪ್ರತಿ ಮಾತಿಗೂಸಹ ಶಿವಣ್ಣ ಕೂತಲ್ಲಿಯೇ ಕಣ್ಣೀರಿಡುವಂತಾಗಿತ್ತು.. ಹೌದು “ಮಾತುಗಳನ್ನು ಆಡ್ತೀರಾ.. ಆದರೆ ನಾನೇನು ಮಾಡಕ್ಕಾಗಲ್ಲ.. ಚೆನ್ನಾಗಿ ಓಡ್ತಿರೋ ಗಾಡಿನ ಹೇಗ್ ನಿಲ್ಲಿಸಿ ಬಿಟ್ಟ ನೋಡಿ.. ನನ್ನ ನೋಡಿ.. ಕುಂಟಿಕೊಂಡ್ ಕುಂಟಿಕೊಂಡ್ ಓಡಾಡ್ತೀನಿ‌.. ನನ್ನ ಇನ್ನು ಉಳ್ಸಿದಾನೆ.. ಎಷ್ಟು ಬೇಜಾರಾಗತ್ತೆ ನನಗೆ‌.. ನನಗೆ ಏನೇನೆಲ್ಲಾ ಆದರೂ ಸಹ ಇನ್ನು ಉಳಿದುಕೊಂಡಿದ್ದೀನಿ.. ಆದರೆ ಅವನು ಏನು‌ ಮಾಡಿದ್ದ ಪಾಪ.. ಇದನ್ನೆಲ್ಲಾ ನೋಡಿದಾಗ ಏನಕ್ಕೋಸ್ಕರ ಇರ್ಬೇಕು ಅನಿಸಿ ಬಿಡ್ತು.. ನಾನು ಅವನನ್ನು ಹುಡುಕಿಕೊಂಡು ಹೋಗ್ತೀನಪ್ಪಾ.. ಇಲ್ಲಿ ಆಗಲ್ಲ ನನಗೆ.. ಅವನು ಇರೋ ಕಡೆ ಹುಡುಕಿಕೊಂಡು ಹೋಗ್ತೀನಿ..

ನಾವು ಹೊರಡೋಕೆ ರೆಡಿ‌.. ಇನ್ನೇನ್ ಬೇಕು.. ಇನ್ನೇನ್ ಮಾತಾಡ್ಲಪ್ಪ.. ಜೇಮ್ಸ್ ತಂಡ ಅದೃಷ್ಟವಂತರು ಕೊನೆ ಮೂರು ತಿಂಗಳು ನನ್ನ ತಮ್ಮನ ಜೊತೆ ಒಟ್ಟಾಗಿ ಕಳೆದ್ರು.. ನಾನು ಆ ತಂಡದಲ್ಲಿ ಕೆಲಸ ಮಾಡಿದ್ರೆ ನಾನು ಕೂಡ ಸ್ವಲ್ಪ ಸಮಯ ಒಟ್ಟಾಗಿ ಕಳೀಬಹುದಾಗಿತ್ತು.. ನಾನು ಅವನ ಬಳಿ ಹೊರಟು ಹೋಗ್ತೀನಿ ಎಂದು ಭಾವುಕರಾದರು.. ನಂತರ ವೇದಿಕೆ ಮೇಲೆ ಬಂದ ಶಿವಣ್ಣ ಮೈಕ್ ಹಿಡಿದು ಮಾತನಾಡಲು ಮುಂದಾದರು.. ಅದಾರೆ ಆ ಕ್ಷಣ ದುಃಖ ತಡೆಯಲಾಗದೇ ಪಕ್ಕದಲ್ಲಿದ್ದ ರಾಘಣ್ಣನ ಬಳಿ ತೆರಳಿ ಬಿಗಿಯಾಗಿ ಅಪ್ಪಿಕೊಂಡು ಕಣ್ಣೀರಿಟ್ಟರು.. ಆ ತಕ್ಷಣ ಮೈಕ್ ಆಫ್ ಮಾಡಿದ ಶಿವಣ್ಣ ಹೇಳಿದ ಮಾತುಗಳು ನಿಜಕ್ಕೂ ಕಣ್ಣೀರು ತರಿಸುತ್ತದೆ..

ಹೌದು ರಾಘಣ್ಣನ ಮಾತುಗಳಿಂದ ಅದಾಗಲೇ ಭಾವುಕರಾಗಿದ್ದ ಶಿವಣ್ಣ ರಾಘಣ್ಣನನ್ನು ತಬ್ಬಿಕೊಂಡು ಮೈಕ್ ಆಫ್ ಮಾಡಿ “ಯಾಕೋ ಹಿಂಗೆಲ್ಲಾ‌ ಮಾತನಾಡ್ತೀಯಾ.. ಹೊರಟು ಹೋಗ್ತೀನಿ ಅಂತ ಇನ್ಯಾವತ್ತೂ ಮಾತನಾಡಬೇಡ.. ನಾನೇನ್ ಮಾಡ್ಲಿ.. ಅವನ್ನ ಕಳಕೊಂಡೇ ನೋವು ತಡೆಯೋಕೆ ಆಗ್ತಿಲ್ಲಾ.. ನೀನು ಈ ರೀತಿ ಮಾತನಾಡಬೇಡ ಎಂದು ಬಿಗಿಯಾಗಿ ಅಪ್ಪಿಕೊಂಡು ಹೇಳಿದರು..

ಆ ತಕ್ಷಣ ಮೈಕ್ ಪಡೆದ ರಾಘಣ್ಣ.. ಕ್ಷಮಿಸಿ ಅಪ್ಪಾಜಿ.. ನಾನು ಇನ್ನು ಆ ರೀತಿ ಮಾತನಾಡಲ್ಲ.. ಇನ್ಯಾವತ್ತೂ ಹೋಗ್ತೀನಿ ಅನ್ನಲ್ಲ.. ನಾನು ಎಲ್ಲಿಗೂ ಹೋಗಲ್ಲ.. ನೀವೆಲ್ಲಾ ನನ್ನ ಜೊತೆ ಇರಿ.. ಸ್ವಲ್ಪ ಎನೋಷನಲ ಆಗಿಬಿಟ್ಟೆ ಎಂದು ಶಿವಣ್ಣನ ಬಳಿ‌ ಕ್ಷಮೆ ಕೇಳಿದರು.. ಇದಕ್ಕೆ ಹೇಳೋದು ಎಷ್ಟೇ ವಯಸ್ಸಾದರು ಜೊತೆಲಿ ಹುಟ್ಟಿದವರು ಕಣ್ಣೀರಿಟ್ಟಾಗ ಅದನ್ನು ಸಹಿಸೋದು ಅಸಾಧ್ಯ.. ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಮೂವರು ಅಣ್ಣತಮ್ಮಂಡಿರನ್ನು ಕಣ್ತುಂಬಿಕೊಳ್ಳುತ್ತಿದ್ದೆವು‌‌.. ಆದರೆ ಇಂದು ಇವರಿಬ್ಬರು ಈ ರೀತಿ ದುಃಖ ಪಡುವುದನ್ನು ನಿಜಕ್ಕೂ ನೋಡಲು ಅಸಾಧ್ಯ ಎನ್ನುವಂತಾಗಿತ್ತು..