ಹೌದು ಇದು ಶಿವಣ್ಣನ ಮೊಮ್ಮಗುವೇ.. ಸತ್ಯ ಬಿಚ್ಚಿಟ್ಟ ಮಗುವಿನ ತಂದೆ..

ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಗಳ ಬಗ್ಗೆ ಸುದ್ದಿಯಾಗೊದು ಹೊಸ ವಿಚಾರವೇನೂ ಅಲ್ಲ.. ಅದೇ ರೀತಿ ಕಳೆದ ಕೆಲವು ದಿನಗಳಿಂದ ಒಂದು ಫೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಶಿವಣ್ಣ ಮಗುವನ್ನು ಎತ್ತಿಕೊಂಡಿರುವ ಫೋಟೊ ಅದು. ಆ ಫೋಟೊ ನೋಡಿದ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಗುವಿನೊಂದಿಗೆ ಮಗುವಂತಾಗಿದ್ದ ಶಿವಣ್ಣನ ಕಂಡು ಮೆಚ್ಚು ವ್ಯಕ್ತಪಡಿಸಿದ್ದರು. ಮತ್ತೆ ಕೆಲವರು ಇದೇ ಫೋಟೊವನ್ನಿಟ್ಟುಕೊಂಡು ತಪ್ಪು ಮಾಹಿತಿಯನ್ನು ಹಬ್ಬಿಸಿದ್ದರು. ಶಿವಣ್ಣ ಎತ್ತಿ ಮುದ್ದಾಡುತ್ತಿರೋದು ಮಗಳ ಮಗು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮೊಮ್ಮಗನ ರೂಪದಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಮಾಹಿತಿ ಹಬ್ಬಿತ್ತು.

ಇಂಹದ್ದೊಂದು ಸದ್ದು ಹಬ್ಬುತ್ತಿದ್ದಂತೆ ಮಗುವಿನ ತಂದೆ ದಿಗಂತ್ ಅಸಲಿ ಸತ್ಯವನ್ನು ಹಂಚಿಕೊಂಡಿದ್ದಾರೆ. ಅಣ್ಣಾವ್ರ ಕುಟುಂಬದ ಜೊತೆ ಮಗುವಿನ ತಂದೆ ದಿಗಂತ್ ದಿವಾಕರ್ ಹಾಗೂ ತಾಯಿ ಲಾವಣ್ಯ ಸಂಬಂಧವೇನು? ವೈರಲ್ ಆಗುತ್ತಿರುವ ಫೋಟೊ ಹಿಂದಿರುವ ಅಸಲಿ ಸತ್ಯವೇನು? ಅನ್ನೋದನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ.

ಅಣ್ಣಾವ್ರ ಕುಟುಂಬಕ್ಕೂ ನಿಮಗೂ ಏನು ಸಂಬಂಧ?.. ನನ್ನ ಪತ್ನಿಯ ಹೆಸರು ಲಾವಣ್ಯ ಅಂತ. ನನ್ನ ಹೆಸರು ದಿಗಂತ್ ದಿವಾಕರ. ಅಣ್ಣಾವ್ರ ತಂಗಿ ಇದ್ದಾರೆ ನಾಗಜ್ಜಿ ಅಂತ ಇದ್ದಾರೆ. ಅವರ ಮಗನ ಮಗಳು ಲಾವಣ್ಯ ಇವರ ಫ್ಯಾಮಿಲಿ ಇದೆಯಲ್ಲಾ ಎಲ್ಲಾ ಒಟ್ಟಿಗೆ ಬೆಳೆದಿದ್ದು. ಹುಟ್ಟಿದಾಗಿನಿಂದಲೂ ಅಣ್ಣಾವರ ಮನೆಯಲ್ಲಿಯೇ ಬೆಳೆದಿದ್ದು. ಮದುವೆ ಬಳಿಕ ಲಾವಣ್ಯ ತಾಯಿ ತೀರಿಕೊಂಡರು. ನನ್ನ ತಂದೆ-ತಾಯಿ ಇಬ್ಬರೂ ಕೂಡ ತೀರಿ ಹೋಗಿದ್ದಾರೆ. ಹೀಗಾಗಿ ಬಾಣಂತನ ನಾವೇ ಮಾಡಿಕೊಳ್ಳೋಣ. ನಾವು ಇಬ್ಬರೇ ಇರೋದು ಅಂದ್ಕೊಂಡ್ವಿ.

ಆಗ ಶಿವಣ್ಣ-ಗೀತಕ್ಕ ಅಂತು ಬಿಡಲೇ ಇಲ್ಲ. ಆಗ ಡಿಲೇವರಿ ಸಮಯದಲ್ಲಿ ಜೊತೆಗೆ ಇದ್ದೆವಲ್ಲಾ, ಆಗ ಜೊತೆಗೆ ಬಂದು ಅವರೇ ಪಾಪುನಾ ರಿಸೀವ್ ಮಾಡಿದ್ರು. ಮ್ಯಾಟನಿ ಅನ್ನೋ ಸಿನಿಮಾ ಶೂಟಿಂಗ್ ಮಾಡುತ್ತಿದೆ. ನಾನು ಬರೋದು ಲೇಟ್ ಆಯ್ತು. ಆಗ ಶಿವಣ್ಣ-ಗೀತಕ್ಕೆ ಎಲ್ಲಾ ನಿಂತು ಮಾಡಿದ್ರಲ್ಲಾ, ಆಗ ಫೋಟೊಗಳನ್ನು ಸ್ಟೇಟಸ್‌ ಹಾಕಿದ್ದು, ಅದನ್ನು ಯಾರೋ ತೆಗೆದು ಶಿವಣ್ಣನ ಮಗಳು ಡಿಲೇವರಿ ಅಂತೆಲ್ಲಾ ಸುದ್ದಿ ಬಂತು. ಆಗ ಯಾರಿಗಂತ ಹೇಳೋದು ಅಂತ ಸುಮ್ಮನಾಗಿದ್ವಿ. ಎನ್ನುತ್ತಾರೆ ದಿಗಂತ್ ದಿವಾಕರ್.

ಅಗಲುವ ವಾರದ ಹಿಂದಷ್ಟೇ ಅಪ್ಪು ಎತ್ತಾಡಿಸಿದ್ರು.. ಶಿವಣ್ಣ ನನ್ನ ಮಗನನ್ನು ಎತ್ತಿಕೊಂಡಿರುವ ಫೋಟೊಗಳನ್ನು ಇಟ್ಟುಕೊಂಡು ಅಪ್ಪು ಮಾಮ ಮತ್ತೆ ಹುಟ್ಟಿದ್ದಾರೆ ಅಂತ ಹಬ್ಬಿಸಿದ್ದರು. ಆದರೆ, ಅದು ತಪ್ಪು ಮಾಹಿತಿ. ಅಪ್ಪು ಮಾಮ ಡಿಲೇವರಿ ಆದ ದಿನವೇ ಫೋನ್ ಮಾಡಿದ್ದರು. ನಾನು ಎತ್ತಾಡಿಸಿದ ಮಗಳು ದಿಗಂತ್. ನಮ್ಮ ಮನೆ ಮಗಳು ಅವಳು. ನನಗೆ ಗೊತ್ತು ಚೆನ್ನಾಗಿ ನೋಡಿಕೊಳ್ಳುತ್ತೀರಾ. ಆದರೂ, ಚೆನ್ನಾಗಿ ನೋಡಿಕೊಳ್ಳಿ. ಇಬ್ಬರೂ ಚೆನ್ನಾಗಿ ಇರಿ ಅಂತೆಲ್ಲಾ ಮಾತಾಡಿದ್ರು ಎಂದು ದಿಗಂತ್ ದಿವಾಕರ್ ರಿಕಾಲ್ ಮಾಡಿಕೊಳ್ಳುತ್ತಾರೆ.

ನನ್ನ ಮಗುವಿನ ಹೆಸರು ಕೇಳಿದ್ರು ಅಪ್ಪು ಮಾಮ.. ಶಿವಣ್ಣನ ಮನೆಗೆ ಮಗು ನೋಡಲು ಅಪ್ಪು ಮಾಮ ಬಂದಿದ್ದರು. ಆ ವೇಳೆ ಗಂಧದ ಗುಡಿ ಬಿಟ್ ತೋರಿಸಲು ಮುಂದಾಗಿದ್ದರು. ಆಗ ಮಗುವಿನ ಹೆಸರು ಏನು ಎಂದು ಕೇಳಿದ್ದರು. ಏನು ಹೆಸರು ಇಡಬೇಕು ಅಂದುಕೊಂಡಿದ್ದೀರಾ ಅಂತ ಕೇಳಿದ್ದರು. ಆಗ ವಿಷ್ಣು ಅಂತ ಹೆಸರಿಡಬೇಕು ಅಂತ ಹೇಳಿದ್ದೆ. ಯೇ.. ಪವರ್‌ಪುಲ್ ಆಗಿದೆಯಮ್ಮಾ. ನನಗೆ ತುಂಬಾ ಇಷ್ಟ ಆ ಹೆಸರು ಎಂದು ಹೇಳಿ ಖುಷಿಯಿಂದ ಹೋದರು. ನಾನೇ ಕಾರಿನವರೆಗೂ ಹೋಗಿ ಬಿಟ್ಟು ಬಂದಿದ್ದೆ. ಆಮೇಲೆ ಹೀಗಾಯ್ತು. ನಾನು ಇವೆಲ್ಲಾ ಯಾಕೆ ಕ್ಲಾರಿಟಿ ಕೊಡಬೇಕು ಅಂತ ಸುಮ್ಮನಿದ್ದೆ, ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ದಿಗಂತ್.

ಶಿವಣ್ಣನಿಗೆ ಮಕ್ಕಳ ಮೇಲೆ ಭೇದ-ಭಾವವಿಲ್ಲ.. ಶಿವಣ್ಣ ಮಾಮನ ಮನೆಯಲ್ಲಿ ಮಕ್ಕಳನ್ನು ಅಷ್ಟು ಪ್ರೀತಿ ಮಾಡುತ್ತಾರೆ. ಇದು ನಂದು.. ನನ್ನದಲ್ಲ ಅಂತೆಲ್ಲಾ ನೋಡುವುದಿಲ್ಲ. ಇದು ನಮ್ಮ ಪುಣ್ಯ ಅಷ್ಟೇನೇ. ನನ್ನ ಪತ್ನಿಗೆ ಅಮ್ಮ ಇಲ್ಲ. ನನಗೆ ತಂದೆ-ತಾಯಿ ಇಬ್ಬರೂ ಇಲ್ಲ. ಆ ಸ್ಥಾನದಲ್ಲಿ ಶಿವಣ್ಣ ಫ್ಯಾಮಿಲಿ ಹಾಗೂ ರಾಘಣ್ಣ ಫ್ಯಾಮಿಲಿ ಎಲ್ಲರ ಕುಟುಂಬ ಎಲ್ಲರೂ ಇಷ್ಟ ಪಡುತ್ತಾರೆ. ಏನೋ ಪುಣ್ಯ ಮಾಡಿದ್ವಿ ಅಂತ ಅಂದ್ಕೊಂಡಿದ್ದೇವೆ, ಎಂದು ಶಿವಣ್ಣನ ಮಕ್ಕಳ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ಕಳೆದ ವರ್ಷದಿಂದ ವೆಬ್ ಸೀರಿಸ್ ಮಾಡಿದ್ದೀನಿ. ವನಜ ಅಂತ ಮಾಡಿದ್ದೀನಿ. ಆಮೇಲೆ ಚುಟುಕಿ ಅನ್ನೋ ಸೀರಿಸ್‌ನಲ್ಲಿ ಮಾಡಿದ್ದೀನಿ. ವನಜಾ’ದಲ್ಲಿ ಭೂಮಿ ಶೆಟ್ಟಿ ನಟಿಸಿದ್ದಾರೆ. ಚುಟುಕಿ ಯಲ್ಲಿ ನಿವೇದಿತಾ ಗೌಡ ನಟಿಸಿದ್ದಾರೆ. ಸಪ್ತಪದಿ ಅಂತ ಸೀರಿಯಲ್ ಫಾರ್ಮೆಟ್‌ನ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದೇನೆ. ನಾನು ಇದೇ ಕ್ಷೇತ್ರದಲ್ಲಿಯೇ ಮುಂದುವರೆಯೋಣ ಅಂತ ಇದ್ದೇನೆ. ಇನ್ನು ಮ್ಯಾಟನಿ ಅನ್ನೋ ಸಿನಿಮಾ ಮುಗಿದಿದೆ. ಈಗಷ್ಟೇ ಡಬ್ಬಿಂಗ್ ಮುಗಿಸಿದ್ದೇನೆ. ಈ ವೇಳೆ ಕೆಲವರು ಈ ಫೋಟೊಗಳನ್ನು ನೋಡಿ, ಮಾಹಿತಿ ಹೀಗೆ ತಪ್ಪಾಗಿ ಹೋಗುತ್ತಿದೆ ಅಂದರು. ಅದಕ್ಕೆ ಕ್ಲಾರಿಟಿ ಕೊಡುತ್ತಿದ್ದೇನೆ ಎಂದು ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಎತ್ತಿಕೊಂಡಿರೋ ಮಗುವಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಭಟ್, ಶ್ರೀ ಅಂಬಾ ಭವಾನಿ ದೈವ ಶಕ್ತಿ ಜ್ಯೋತಿಷ್ಯರು.. ಮೊ.9845642321 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ‌ ಉಲ್ಭಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುತ್ತಾರೆ.. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ.. ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ.. 9845642321 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ತೊಂದರೆ ಪ್ರೀತಿಯಲ್ಲಿ ನಂಬಿ ಮೋಸ.. ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ವಿಚಾರ ಜನರ ದೃಷ್ಟಿಯಿಂದ ಮನೆಯಲ್ಲಿ ಆಗುವ ತೊಂದರೆ ಹಣಕಾಸಿನ ತೊಂದರೆ ಸ್ತ್ರೀ ಪುರುಷ ವಶೀಕರಣ ಇನ್ನೂ ಅನೇಕ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಿ.. 9845642321