ಶಿವಣ್ಣನ ಮನೆಗೆ ಎಲ್ಲಾ ನಟರು ಬಂದರು ಆದರೆ ಸುದೀಪ್ ಹಾಗೂ ದರ್ಶನ್ ಬರದೆ ಇರಲು ನಿಜವಾದ ಕಾರಣ ಇಲ್ಲಿದೆ ನೋಡಿ..

ಅಂಬರೀಶ್ ಅವರ ನಂತರ ಇದೀಗ ಸ್ಯಾಂಡಲ್ವುಡ್ ನ ನಾಯಕತ್ವವನ್ನು ಶಿವಣ್ಣನಿಗೆ ನೀಡಲಾಗಿದ್ದು ಎಲ್ಲಾ ಕಲಾವಿದರು ಹಾಗೂ ತಾಂತ್ರಿಕ ಸಂಘದವರು ಕೂಡ ಒಮ್ಮತದಿಂದ ಒಪ್ಪಿಕೊಂಡಿದ್ದಾರೆ.. ಇನ್ನು ಕೆಲ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನ ಒಗ್ಗಟ್ಟು ಏನೆಂದು ತಿಳಿದಿದೆ.. ಕೊರೊನಾ ಕಾರಣದಿಂದಾಗಿ ಕನ್ನಡ ಚಿತ್ರೋದ್ಯಮದ ಈಗಾಗಲೇ ಸಾಕಷ್ಟು ಸಂಕಷ್ಟದಲ್ಲಿದೆ.‌. ಇದೇ ಕಾರಣಕ್ಕೆ ಕಾರ್ಮಿಕರಿಗೆ ಸಹಾಯ ಮಾಡುವ ಸಲುವಾಗಿ ಕೆಲ ದಿನಗಳ ಹಿಂದೆ ಕನ್ನಡದ ಕಲಾವಿದರೆಲ್ಲಾ ಶಿವಣ್ಣನ ಮನೆಯಲ್ಲಿ ಸಭೆ ಸೇರಿ ಚರ್ಚೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು..

ಹೌದು ಅಂದು ಶಿವಣ್ಣನ ಮನೆಯಲ್ಲಿ ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಯಶ್, ಪುನೀತ್ ರಾಜ್ ಕುಮಾರ್, ಗಣೇಶ್, ದುನಿಯಾ ವಿಜಯ್, ಶ್ರೀಮುರುಳಿ, ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕ ನಟರು ಹಾಗೂ ನಿರ್ಮಾಪಕರುಗಳು ಶಿವಣ್ಣನ ಮನೆಯಲ್ಲಿ ಉಪಸ್ಥಿತರಿದ್ದು, ಕನ್ನಡದ ಚಿತ್ರೋದ್ಯಮದ ಕಾರ್ಮಿಕರಿಗೆ ಇಂತಹ ಕಷ್ಟದ ಸಮಯದಲ್ಲಿ ಏನು ಸಹಾಯ ಮಾಡಬಹುದೆಂದು ಚರ್ಚಿಸಿ ಜೊತೆಗೆ ಸಿಟಿ ರವಿ ಅವರಿಗೆ ಮನವಿ ಪತ್ರವನ್ನು ಸಹ ನೀಡಿದ್ದರು..

ಆದರೆ ಆ ಸಮಯದಲ್ಲಿ ದರ್ಶನ್ ಹಾಗೂ ಸುದೀಪ್ ಅವರು ಸಭೆಯಲ್ಲು ಹಾಜರಾಗದೇ ಇರುವುದು ಸಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು… ಆದರೆ ಅವರಿಬ್ಬರು ಬರದೇ ಇರಲು ಅಸಲಿ ಕಾರಣ ಬೇರೆಯೇ ಇದೆ.. ಹೌದು ಸುದೀಪ್ ದರ್ಶನ್ ಒಂದೇ ಜಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿರಲು ಇಷ್ಟವಿಲ್ಲದೇ ಬಂದಿಲ್ಲ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಆದರೆ ಇದು ಸತ್ಯವಲ್ಲ.. ಅಸಲಿ‌ ಕಾರಣ ಇಲ್ಲಿದೆ ನೋಡಿ..

ಕನ್ನಡದ ಸಿನಿಮಾ ನಟರು ಚಿತ್ರೋದ್ಯಮದ ವಿಚಾರ ಅಂತ ಬಂದರೆ ವ್ಯಯಕ್ತಿಕ ಕಾರಣ ಏನೇ ಇದ್ದರು ಎಲ್ಲವನ್ನೂ ಬದಿಗಿಟ್ಟಿದ್ದಾರೆ.. ಮುಂದೆಯೂ ಸಹ ಸ್ಯಾಂಡಲ್ವುಡ್ ಒಗ್ಗಟ್ಟಿನಿಂದ ಇರುವ ಭರವಸೆಯೂ ಇದೆ.. ಆದರೆ ಅಂದು ಸಭೆಯಲ್ಲಿ ಸುದೀಪ್ ಹಾಗೂ ದರ್ಶನ್ ಅವರು ಪಾಲ್ಗೊಳ್ಳದೇ ಇರಲು ಕಾರಣ ಸುದೀಪ್ ಅವರು ತಮ್ಮ ಫ್ಯಾಂಟಮ್ ಸಿನಿಮಾದ ಚಿತ್ರೀಕರಣಕ್ಕಾಗಿ ಹೈದರಬಾದ್ ನಲ್ಲಿದ್ದಾರೆ.. ಇನ್ನು ಇತ್ತ ದರ್ಶನ್ ಅವರು ಬೆಂಗಳೂರಿನಲ್ಲಿರಲಿಲ್ಲ.. ಕೊಳ್ಳೆಗಾಲ ಸಮೀಪದ ಕಾಡಿನಲ್ಲಿ ಪರಿಸರ ರಕ್ಷಣೆಯ ಸಂಬಂಧಿತವಾದ ಕಾರ್ಯದಲ್ಲಿ ತೊಡಗಿ ಕೊಂಡಿದ್ದರು.. ಇದೇ ಕಾರಣಕ್ಕೆ ಇಬ್ಬರೂ ಅಂದು ಶಿವಣ್ಣನ ಮನೆಯಲ್ಲಿನ ಸಭೆಯಲ್ಲಿ ಪಾಲ್ಗೊಳ್ಳಲಾಗಿಲ್ಲ.. ಬದಲಿಗೆ ಇಬ್ಬರೂ ನಟರು ಫೋನ್ ನಲ್ಲಿ ಮಾತನಾಡಿದ್ದು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಕ್ಕೆ ತಾವು ಸಂಪೂರ್ಣ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ..