ಏಳು ವರ್ಷ ಒಬ್ಬನನ್ನು ಪ್ರೀತಿಸಿದಳು.. ನಂತರ ಮತ್ತೊಬ್ಬ ಆಂಬ್ಯುಲೆನ್ಸ್ ಚಾಲಕನ ಹಿಂದೆ ಹೋದ ಈಕೆಯ ಸ್ಥಿತಿ ಏನಾಗಿದೆ ಗೊತ್ತಾ.. ಬೆಚ್ಚಿಬಿದ್ದ ಅಪ್ಪ ಅಮ್ಮ..

ಹೆಣ್ಣು ಮಕ್ಕಳಾಗಲಿ ಯುವಕರಾಗಲಿ ವಯಸ್ಸಿಗೆ ಬಂದೊಡನೆ ಆಗುವ ಆಕರ್ಷಣೆಗಳನ್ನು ಪ್ರೀತಿ ಎಂದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಅನೇಕ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ.. ನಮ್ಮ ಸುತ್ತ ಮುತ್ತಲೇ ನಡೆಯುತ್ತಲೂ ಇರುತ್ತವೆ.. ಇನ್ನೂ ಕೆಲವರು ತಿಳುವಳಿಕೆ ಬಂದ ನಂತರ ಪ್ರೀತಿಸಿ ಮದುವೆಯಾಗಿ ತಮ್ಮ ಜೀವನವನ್ನು ಸುಂದರವಾಗಿ ಕಟ್ಟಿಕೊಂಡ ಉದಾಹರಣೆಗಳೂ ಸಹ ಇವೆ.. ಆದರೆ ಇಲ್ಲೊಂದು ವಿಚಿತ್ರ ಪ್ರೇಮ ಕತೆ ನಡೆದು ಕೊನೆಗೆ ಪ್ರೀತಿಸಿದ ಆ ಇಬ್ಬರಿಗೂ ಬಂದ ಸ್ಥಿತಿ ನಿಜಕ್ಕೂ ಅವರಿಬ್ಬರನ್ನು ಹೆತ್ತವರು ಅದೇನು ಪಾಪ ಮಾಡಿದ್ದರೋ ಆ ಭಗವಂತನೇ ಬಲ್ಲ..

ಹೌದು ಏಳು ವರ್ಷ ಒಬ್ಬನ ಜೊತೆ ಪ್ರೀತಿ ಎಂದು ಸುತ್ತಾಡಿ‌ ಕೊನೆಗೆ ಮತ್ತೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದು ಕೊನೆಗೆ ಆಕೆ ಏನಾದಳು.. ಇತ್ತ ಆಕೆಯನ್ನು ಏಳು ವರ್ಷ ಅತಿಯಾಗಿ ಪ್ರೀತಿಸಿದ್ದ ಯುವಕ ಏನಾದ ಎಂದು ತಿಳಿದರೆ ನಿಜಕ್ಕೂ ಮನಕಲಕುತ್ತದೆ.. ಹೌದು ಗಂಡಾಗಲಿ ಹೆಣ್ಣಾಗಲಿ ಯಾರೇ ಆದರೂ ಪ್ರೀತಿ ಎಂಬ ಹೆಸರನ್ನು ಹೇಳಿ ಯಾರ ಜೀವನದಲ್ಲಿಯೂ ಆಟವಾಡಬಾರದು ಎಂಬುದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ.. ಹೌದು ಈಕೆಯ ಹೆಸರು ಕವಿತಾ.‌ ವಯಸ್ಸಿನ್ನು ಕೇವಲ ಇಪ್ಪತೊಂದು ವರ್ಷ.. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೇರಲಗಿ ಗ್ರಾಮದ ನಿವಾಸಿ..

ಈಕೆ ಶಿವಮೊಗ್ಗದ ಕಾಲೇಜೊಂದರಲ್ಲಿ ನರ್ಸಿಂಗ್ ಓದುತ್ತಿದ್ದಳು.. ಇನ್ನು ಆ ಹುಡುಗನ ಹೆಸರು ಶಿವಮೂರ್ತಿ ಆತನ ವಯಸ್ಸೂ ಕೇವಲ ಇಪ್ಪತ್ತೊಂದು.. ಹೊಸನಗರ ತಾಲೂಕಿನ ಕಗಲಿ ಗ್ರಾಮದ ನಿವಾಸಿ.. ಈತ ರಿಪ್ಪನ್ ಪೇಟೆಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದನು.. ಈ ಇಬ್ಬರು ಕಳೆದ ಏಳು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.. ಆದರೆ ಕವಿತಾ ಕೆಲ ದಿನಗಳಿಂದ ಶಿವಮೂರ್ತಿಯನ್ನು ಬಿಟ್ಟು ಭದ್ರಾವತಿ ಮೂಲದ ಆಂಬ್ಯುಲೆನ್ಸ್ ಚಾಲಕನೊಬ್ಬನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು.. ಅತ್ತ ಮತ್ತೊಬ್ಬನ ಜೊತೆ ಪ್ರೀತಿ ಶುರುವಾದ ಬಳಿಕ ಶಿವಮೂರ್ತಿಯನ್ನು ದೂರ ಮಾಡಲು ಶುರು ಮಾಡಿದಳು..

ಇದರಿಂದ ಬೇಸರಗೊಂಡ ಶಿವಮೂರ್ತಿ ದುಡುಕಿನ ನಿರ್ಧಾರ ತೆಗೆದುಕೊಂಡು ಬಿಟ್ಟ. ಹೌದು ಮೊನ್ನೆ ಬುಧವಾರ ನಿನ್ನ ಜೊತೆ ಮಾತನಾಡಬೇಕು ಎಂದು ಕವಿತಾಳನ್ನು ನೇರಲಗಿ ಬಳಿ ಕರೆಸಿಕೊಂಡಿದ್ದಾನೆ.. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ತಾನು ಮೊದಲೇ ಅಂದುಕೊಂಡಂತೆ ಶಿವಮೂರ್ತಿ ಕವಿತಾಳನ್ನು ಇಲ್ಲವಾಗಿಸಿಬಿಟ್ಟ.. ಕೊನೆಗೆ ತಾನು ಇಷ್ಟು ವರ್ಷ ಅತಿಯಾಗಿ ಪ್ರೀತಿಸಿದ ಹುಡುಗಿ ಹೀಗೆ ಮಾಡಿದಳೆಂದು ಬೇಸರಗೊಂಡು ತಾನೂ ಸಹ ಜೀವ ಕಳೆದುಕೊಳ್ಳಲು‌ ಮುಂದಾದ ಆದರೆ ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಪೊಲೀಸರ ಮುಂದೆ ನಾನೇ ಹೀಗೆಲ್ಲಾ ಮಾಡಿದ್ದು ಎಂದು ಸಹ ಒಪ್ಪಿಕೊಂಡಿದ್ದ.. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಶಿವಮೂರ್ತಿ ಸಹ ಕೊನೆಯುಸಿರೆಳೆದುಬಿಟ್ಟ..

ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು ಏಳು ವರ್ಷ ನೀನೆ ಜೀವ ಎಂದು ಭವಿಷ್ಯದ ಸಾವಿರಾರು ಕನಸು ಕಂಡು ಕೊನೆಗೆ ಇಪ್ಪತ್ತೊಂದು ವರ್ಷ ವಯಸ್ಸಿಗೆ ಜೀವನವನ್ನೇ ಅಂತ್ಯ ಮಾಡಿಕೊಂಡ ಇವರ ಬದುಕಿಗೆ ಏನು ಅರ್ಥ ದೊರಕಿತು.. ಈ ಇಬ್ಬರ ಹೆತ್ತವರು ಮಕ್ಕಳ ಸ್ಥಿತಿ ಕಂಡು ಅಕ್ಷರಶಃ ಕುಸಿದು ಹೋದರು.. ಅವರಿಬ್ಬರ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತು.. ಮಕ್ಕಳನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕಾ ಇಷ್ಟು ಕಷ್ಟಪಟ್ಟು ಹೆತ್ತು ಹೊತ್ತು ಸಾಕಿದ್ದು.. ಅವರೇನು ತಪ್ಪು ಮಾಡಿದ್ದರು ಆ ಭಗವಂತನೇ ಬಲ್ಲ.. ದಯವಿಟ್ಟು ಯಾರೇ ಆಗಲಿ ತಿಳುವಳಿಕೆ ಬರುವ ಮುನ್ನ ವಯಸ್ಸಿನಲ್ಲಿ ಆಗುವ ಆಕರ್ಷಣೆಗಳನ್ನು ಪ್ರೀತಿ ಎಂದುಕೊಂಡು ಜೀವನ ಹಾಳು ಮಾಡಿಕೊಳ್ಳಬೇಡಿ.. ನಿಮ್ಮ ಹೆತ್ತವರ ಬಗ್ಗೆ ಒಮ್ಮೆ ದಯವಿಟ್ಟು ಆಲೋಚಿಸಿ..