ಬಿಗ್ ಬಾಸ್ ಗೆಲುವಿನ ಬಳಿಕ ಮತ್ತೊಂದು ಸಂಭ್ರಮದಲ್ಲಿ ಶೈನ್ ಶೆಟ್ಟಿ.. ಶುಭ ಹಾರೈಸಿದ ಸ್ನೇಹಿತರು..

ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿಗೆ ಇದೀಗ ಮತ್ತೊಂದು ಪಟ್ಟ ಲಭಿಸಿದೆ.. ಬಿಗ್ ಬಾಸ್ ಶುರು ಆದಾಗಿನಿಂದ ಬಹುತೇಕ ಪ್ರೇಕ್ಷಕರಿಗೆ ಇಷ್ಟವಾಗಿದ್ದ ಸ್ಪರ್ಧಿ, ಬಹುತೇಕರ ನಿರೀಕ್ಷೆಯಂತೆ ಶೈನ್ ಶೆಟ್ಟಿ ಅವರೇ ಬಿಗ್ ಬಾಸ್ ಗೆದ್ದು ಈ ಸೀಸನ್ ನ ವಿನ್ನರ್ ಪಟ್ಟದ ಜೊತೆಗೆ 51 ಲಕ್ಷ ರೂಪಾಯಿ ಬಹುಮಾನ ಮತ್ತು ಟಾಟಾ ಮೋಟರ್ಸ್ ಕಡೆಯಿಂದ ಹೊಸದಾಗಿ ಬಿಡುಗಡೆಯಾದ ಟಾಟಾ ಆಲ್ಟ್ರೋಜ್ ಕಾರ್ ಕೂಡ ಶೈನ್ ಶೆಟ್ಟಿ ಅವರಿಗೆ ತಲುಪಿತು..

ಇಷ್ಟು ದಿನ ಶೈನ್ ಶೆಟ್ಟಿ ಪಟ್ಟ ಕಷ್ಟಗಳೆಲ್ಲಾ ಮಂಜಿನಂತೆ ಕರಗುವಂತೆ ಭಾಸವಾಯಿತಷ್ಟೇ ಅಲ್ಲದೆ ಶೈನ್ ಅವರ ಮುಂದಿನ ಕಲಾಬದುಕು ಚೆನ್ನಾಗಿರಲಿ ಎಂದು ಎಲ್ಲರೂ ಹಾರೈಸಿದರು.. ಈಗ ಇದೆಲ್ಲದರ ಜೊತೆಗೆ ಶೈನ್ ಶೆಟ್ಟಿಗೆ ಮತ್ತೊಂದು ಪಟ್ಟ ಲಭಿಸಿದೆ..

ಹೌದು ಬೆಂಗಳೂರು ಟೈಮ್ಸ್ ನವರ 2019ನೇ ಸಾಲಿನ ಪ್ರತಿಷ್ಠಿತ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿಯಲ್ಲಿ ಶೈನ್ ಶೆಟ್ಟಿ ಅವರು ಕೂಡ ಸ್ಥಾನ ಪಡೆದುಕೊಂಡಿದ್ದಾರೆ.. ಈ ಕುರಿತು ಶೈನ್ ಶೆಟ್ಟಿ ಅವರು ಸಂತೋಷ ಹಂಚಿಕೊಂಡಿದ್ದು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ..

ಬೆಂಗಳೂರು ಟೈಮ್ಸ್ ನವರು ಪ್ರತಿ ವರ್ಷ ಬಿಡುಗಡೆ ಮಾಡುವ ಮೋಸ್ಟ್ ಡಿಸೈರೆಬಲ್ ಮೆನ್ ಪಟ್ಟಿಯಲ್ಲಿ 2019ನೇ ಸಾಲಿನಲ್ಲಿ ಶೈನ್ ಶೆಟ್ಟಿ ಅವರು 27ನೇ ಸ್ಥಾನ ಪಡೆದಿದ್ದಾರೆ.‌. ಅಷ್ಟೇ ಅಲ್ಲದೆ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ಧಾರಾವಾಹಿ ಬಿಟ್ಟ ಶೈನ್ ಶೆಟ್ಟಿ ಅವರ ಸಿನಿಮಾ ಕನಸು ಕೂಡ ನೆರವೇರುತ್ತಿದ್ದು, ರಿಷಭ್ ಶೆಟ್ಟಿ ಅವರ ಬ್ಯಾನರ್ ನಲ್ಲಿ‌ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.. ಈಗಾಗಲೇ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಿನಿಮಾ ಸೆಟ್ಟೇರಬಹುದಾಗಿದೆ.. ಬಹುಶಃ ದೇವರು ಕೊಟ್ಟರೆ ಎಲ್ಲವನ್ನೂ ಕೊಡುತ್ತಾನೆ ಎಂಬುದಕ್ಕೆ ಇದೇ ಉದಾಹರಣೆ ಇರಬೇಕು.. ಶೈನ್ ಅವರ ಸಿನಿಮಾ ಕನಸು ಆದಷ್ಟು ಬೇಗ ನೆರವೇರಲಿ..

ಬಿಗ್ ಬಾಸ್ ನಲ್ಲಿ ಭಾಗವಹಿಸಿದ ಅದೆಷ್ಟೋ ಮಂದಿ ನೆನಪಿಗೆ ಬಾರದಂತೆ ಮರೆಯಾಗಿ ಹೋದರು.. ಆದರೆ ಶೈನ್ ಶೆಟ್ಟಿ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ತಮ್ಮ ಗುರಿ ಸಾಧನೆಯತ್ತ ಮುಖ ಮಾಡಿರುವುದು ಮೆಚ್ಚುವಂತ ವಿಚಾರ.. ಸಾಲು ಸಾಲು ಕಷ್ಟಗಳನ್ನು ದಾಟಿ ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಶೈನ್ ಅವರಿಗೆ ಶುಭವಾಗಲಿ..

Tags:

Latest from Entertainment

Go to Top