ಜೊತೆಜೊತೆಯಲಿ ಅನು ಜೊತೆ ಕಾಣಿಸಿಕೊಂಡ ಶೈನ್ ಶೆಟ್ಟಿ..

ಜೊತೆಜೊತೆಯಲಿ ಧಾರಾವಾಹಿ ಮೂಲಕ ಮನೆಮಾತಾದ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರು ಸದ್ಯ ನಮ್ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರೊಡನೆ ಕಣಿಸಿಕೊಂಡಿದ್ದಾರೆ..

ಹೌದು ಬಿಗ್ ಬಾಸ್ ಸೀಸನ್ 7 ರ ವಿನ್ನರ್ ಶೈನ್ ಶೆಟ್ಟಿ ಅವರು ಪ್ರತಿದಿನ ಬಿಡುವಿಲ್ಲದೇ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಲೇ ಬಂದಿದ್ದಾರೆ.. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಹುಟ್ಟೂರು ಮಂಗಳೂರು ಕಡೆ ದೀಪಿಕಾ ದಾಸ್ ಚಂದನ ಅನಂತಕೃಷ್ಣ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿಕೊಟ್ಟಿದ್ದ ಶೈನ್ ಶೆಟ್ಟಿ.. ಇದೀಗ ಮತ್ತೊಮ್ಮೆ ಹುಟ್ಟೂರಿನ ಕಡೆ ಮುಖ ಮಾಡಿದ್ದಾರೆ..

ಹೌದು ಮೊನ್ನೆ ಮೊನ್ನೆಯಷ್ಟೇ ಶೈನ್ ಶೆಟ್ಟಿ ಅವರು ಮಂಗಳೂರಿನಲ್ಲಿ‌ ನಡೆದ ರಂಗ್ ದೇ ಬರ್ಸಾ ಕಾರ್ಯಕ್ರಮದಲ್ಲಿ ದೀಪಿಕಾ ಹಾಗೂ ಚಂದನ ಜೊತೆ ಪಾಲ್ಗೊಂಡಿದ್ದು.. ಹಾಡು ಡ್ಯಾನ್ಸ್ ಎಲ್ಲವೂ ಇತ್ತು.. ನೆರೆದಿದ್ದ ಯುವ ಸಮೂಹದ ಜೊತೆಗೆ ಹೋಳಿ ಹಬ್ಬ ಆಚರಿಸಿದರು..

ಆ ಬಳಿಕ ನಿನ್ನೆ ಮೈಸೂರಿನಲ್ಲಿ ಮತ್ತೊಂದು ಹೋಳಿ ಕಾರ್ಯಕ್ರಮದಲ್ಲಿ ಶೈನ್ ಶೆಟ್ಟಿ ಅವರು ಪಾಲ್ಗೊಂಡಿದ್ದು, ಜೊತೆಜೊತೆಯಲಿ ಖ್ಯಾತಿಯ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರು ಕೂಡ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸದ್ಯ ಕಾರ್ಯಕ್ರಮದ ವೀಡಿಯೋ ಹಂಚಿಕೊಂಡಿದ್ದಾರೆ..

ಮೇಘಾ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರೂ ಕೂಡ ಮೈಸೂರಿನಲ್ಲಿ ನಡೆದ ರಂಗ್ ದೇ 2020 ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹೋಳಿ ಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿದರು.. ಇನ್ನು ಸದ್ಯ ಕಿರುತೆರೆಯಲ್ಲಿ ಇಬ್ಬರೂ ಕೂಡ ಬಹಳ ಪೀಕ್ ನಲ್ಲಿ ಇರುವ ಕಲಾವಿದರಾದ್ದರಿಂದ ಕಾರ್ಯಕ್ರಮ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು.. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಫೋಟೋ ವೈರಲ್ ಆಗಿದೆ.

Latest from News

Go to Top