ಗಂಡನಿಗಾಗಿ ಶಿಲ್ಪಾ ಶೆಟ್ಟಿ ಮಾಡಿರುವ ಕೆಲಸ ನೋಡಿ..

ಕಳೆದ ಕೆಲ ತಿಂಗಳ ಹಿಂದೆ ಬೇರೆ ರೀತಿಯ ಸಿನಿಮಾ ಮಾಡುವ ವಿಚಾರವಾಗಿ ಆ ಚಿತ್ರಗಳ ನಿರ್ಮಾಣದ ವಿಚಾರವಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರನ್ನು ಪೊಲೀಸರ ವಶದಲ್ಲಿದ್ದು ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಆದರೆ, ಈ ವಿಚಾರವಾಗಿ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ನಡುವಿನ ಸಂಬಂಧ ಮುರಿದು ಬಿತ್ತು ಅವರಿಬ್ಬರು ದೂರವಾಗ್ತಾರೆ ಹೀಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು.. ಆದರೆ ಈ ವಿಚಾರ ನಡೆದ ಕೆಲ ದಿನಗಳ ನಂತರ ಎಂದಿನಂತೆ ಶಿಲ್ಪಾ ಶೆಟ್ಟಿ ತಮ್ಮ ವೃತ್ತಿ ಜೀವನಕ್ಕೆ ಮರಳಿದ್ದರು.. ಇನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುವ ಶಿಲ್ಪಾ ಶೆಟ್ಟಿ ಅವರು ಪತಿ ರಾಜ್ ಕುಂದ್ರಾ ಹೊರ ಬಂದ ನಂತರ ಬಹಳ ಸಂತೋಷವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ..

ಕೆಲ ದಿನಗಳ ಹಿಂದಷ್ಟೇ ತಮ್ಮ ತಲೆ ಕೂದಲನ್ನು ತೆಗೆದು ವೀಡಿಯೋ ಹಾಕಿಕೊಂಡಿದ್ದ ಶಿಲ್ಪಾ ಶೆಟ್ಟಿ ಅವರನ್ನು ಟ್ರೋಲ್ ಸಹ ಮಾಡಲಾಗಿತ್ತು.. ಇನ್ನು ಇದೀಗ ಮತ್ತೊಂದು ವಿಚಾರಕ್ಕೆ ಶಿಲ್ಪಾ ಶೆಟ್ಟಿ ಸುದ್ದಿಯಾಗಿದ್ದಾರೆ.. ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಹೊರ ಬಂದ ಬಳಿಕ ಸಂತೋಷವಾಗಿದ್ದರೂ ಸಹ ಇಬ್ಬರ ನಡುವಿನ ಸಂಬಂಧ ಮಾತ್ರ ಸರಿಯಿಲ್ಲ ಎನ್ನಲಾಗುತ್ತಿದೆ.. ಹೌದು ಮೊನ್ನೆ ವಾರಾಂತ್ಯದಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಾದ ವಿಯಾನ್ ಹಾಗೂ ಸಮಿಷಾ ಮತ್ತು ತಾಯಿಯಾದ ಸುನಂದಾ ಶೆಟ್ಟಿ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾರೆ.. ಆದರೆ ಪತಿ ರಾಜ್ ಕುಂದ್ರ ಮಾತ್ರ ಎಲ್ಲಿಯೂ ಕಾಣಸಿಗಲಿಲ್ಲ..

ಅಷ್ಟೇ ಅಲ್ಲದೇ ರಾಜ್ ಕುಂದ್ರಾ ಹೊರ ಬಂದ ನಂತರ ಇವರಿಬ್ಬರೂ ಒಟ್ಟಿಗೆ ಎಲ್ಲೂ ಹೊರಗೆ ಕಾಣಿಸಿಕೊಂಡಿಲ್ಲ. ಅಲ್ಲದೇ, ಇವರಿಬ್ಬರ ಸಂಬಂಧದ ಬಗ್ಗೆ ಕುಟುಂಬದವರೂ ಯಾವ ವಿಚಾರವನ್ನೂ ಬಿಟ್ಟು ಕೊಟ್ಟಿಲ್ಲ. ಇನ್ನು ಪ್ರವಾಸವನ್ನು ಹೊರತು ಪಡಿಸಿದರೂ ಮೊನ್ನೆ ಭಾನುವಾರ ಕರ್ವಾ ಚೌತ್ ಹಬ್ಬವಿತ್ತು. ಇದು ಶಿಲ್ಪಾ ಶೆಟ್ಟಿ ಅವರು ಆಚರಿಸುತ್ತಿರುವ 12ನೇ ಹಬ್ಬ. ಕರ್ವಾ ಚೌತ್ ಎಂದರೆ, ಮದುವೆಯಾಗಿರುವ ಗೃಹಿಣಿಯರು ಬೆಳಗ್ಗಿನಿಂದ ಒಂದು ಹನಿ ನೀರನ್ನೂ ಕುಡಿಯದೇ ಉಪವಾಸವಿರುತ್ತಾರೆ. ಬಳಿಕ ರಾತ್ರಿ ಚಂದ್ರನನ್ನು ಜರಡಿಯಲ್ಲಿ ನೋಡಿ, ಅದೇ ಜರಡಿಯಿಂದ ಪತಿ ಮುಖವನ್ನು ನೋಡುತ್ತಾರೆ. ತದ ನಂತರ ಪತಿ ಪತ್ನಿಗೆ ನೀರು ಕುಡಿಸುವುದರ ಮೂಲಕ ಉಪವಾಸವನ್ನು ಅಂತ್ಯಗೊಳಿಸುತ್ತಾರೆ.

ದಕ್ಷಿಣ ಭಾರತದಲ್ಲಿ ಭೀಮನ ಅಮಾವಾಸ್ಯೆಯನ್ನು ಮದುವೆಯಾದ ಗೃಹಿಣಿಯರು ಆಚರಿಸಿದಂತೆಯೇ ಉತ್ತರ ಭಾರತದಲ್ಲಿ ಕರ್ವಾ ಚೌತ್ ಅನ್ನು ಆಚರಿಸುತ್ತಾರೆ. ಇದೇ ರೀತಿ ಶಿಲ್ಪಾ ಶೆಟ್ಟಿ ಕೂಡ ಮೊನ್ನೆ ಭಾನುವಾರ ಕರ್ವಾ ಚೌತ್ ಆಚರಿಸಿದ್ದಾರೆ. ಪ್ರತಿವರ್ಷವೂ ಈ ದಿನ ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿಯೊಂದಿಗೆ ತೆಗೆಸಿಕೊಂಡ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು.. ಆದರೆ, ಈ ವರ್ಷ ಶಿಲ್ಪಾ ಶೆಟ್ಟಿ ತಮ್ಮದೊಂದೇ ಫೋಟೋವನ್ನು ಹಾಕಿ ಅಭಿಮಾನಿಗಳಿಗೆ ಕರ್ವಾ ಚೌತ್ ಹಬ್ಬದ ಶುಭಾಶಯ ತಿಳಿಸಿದ್ದಾರೆ.. ಈ ಮೂಲಕ ಜನರಿಗೆ ನಾನು ನನ್ನ ಪತಿಯೊಂದಿಗೆ ಇಲ್ಲ.. ಒಬ್ಬಳೇ ಇದ್ದೀನಿ ಎಂದೂ ತಿಳಿಸುವುದರ ಜೊತೆಗೆ ತಮ್ಮ ಪತಿಯ ಶ್ರೇಯಸ್ಸಿಗಾಗಿ ಹಬ್ಬ ಆಚರಿಸಿರುವುದಾಗಿಯೂ ತಿಳಿಸಿದ್ದಾರೆ..

ಇದೆಲ್ಲವನ್ನು ನೋಡುತ್ತಿದ್ದರೆ, ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ನಡುವೆ ಎಲ್ಲವೂ ಸರಿಯಿಲ್ಲ ಎಂಬಂತೆ ಗೋಚರಿಸುತ್ತಿದೆ. ಇತ್ತ ಕೆಲ ಅಭಿಮಾನಿಗಳು ಫೋಟೋಗೆ ಕಮೆಂಟ್ ಮಾಡಿ ಹಬ್ಬದ ಶುಭಾಶಯ ತಿಳಿಸಿದರೆ ಮತ್ತೆ ಕೆಲವರು ಪತಿಯ ಜೊತೆಗಿನ ಫೋಟೋವೆಲ್ಲಿ ಎಂದಿದ್ದಾರೆ.. ಆದರೆ ಆಕೆಯ ನೋವು ಬಹುಶಃ ಆಕೆಗಷ್ಟೇ ಗೊತ್ತಿರುತ್ತದೆ.. ಎಂದು ಮತ್ತಷ್ಟು ಜನರು ಕಮೆಂಟ್ ಹಾಕಿ ಸುಮ್ಮನಾದರು.. ಗಂಡನಿಗಾಗಿ ಉಪವಾಸ ಮಾಡಿ ಹಬ್ಬ ಆಚರಿಸಿದರೂ ಗಂಡನ ಜೊತೆಗಿನ ಫೋಟೋ ಹಂಚಿಕೊಳ್ಳಲು ಮನಸ್ಸಾಗದ ಶಿಲ್ಪಾ ಶೆಟ್ಟಿ ಅವರು ಸಧ್ಯ ಎಂದಿನಂತೆ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ..