ಹೀರೋ ಮಾಡ್ತೀನಿ ಅಂತ ಹುಡುಗರ ಜೊತೆ ಈ ನಿರ್ಮಾಪಕಿ ಮಾಡುತ್ತಿದ್ದ ಕೆಲಸ ನೋಡಿ..

ಸಿನಿಮಾ ಅನ್ನೋದು ಸಂಪಾದನೆಯ ಒಂದು ದಾರಿಯಾಗಿದ್ದರೂ ಸಹ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಸಿ‌ನಿಮಾವನ್ನು ದೇವರೆಂದೂ ಅದನ್ನು ಒಂದು ಸೇವೆಯೆಂದೂ ಸಹ ಕಲಾವಿದರು ಭಕ್ತಿ ಇಂದ ಮಾಡುತ್ತಿದ್ದರು.. ನಿರ್ದೇಶಕರಾಗಲಿ‌ ನಿರ್ಮಾಪಕರುಗಳಾಗಲಿ ಯಾರೇ ಆದರೂ ಸಿನಿಮಾವನ್ನು‌ ಒಂದು ಕಲಾ ಸೇವೆಯ ರೀತಿಯಲ್ಲಿಯೇ ಮಾಡುತ್ತಿದ್ದರು.. ಆದರೀಗ ಕಾಲ ಬದಲಾಗಿದೆ ಸಿನಿಮಾ ಎಂದರೆ ಬಹುತೇಕರ ಪ್ರಕಾರ ಕೇವಲ ಬ್ಯುಸಿನೆಸ್ ಅಷ್ಟೇ.. ಆದರೆ ಈ ಬ್ಯುಸಿನೆಸ್ ನ ಹಿಂದೆ ನಾನಾ ಮುಖಗಳಿರುತ್ತವೆ.. ಅದೇ ರೀತಿ‌ ನಿರ್ಮಾಪಕಿಯೊಬ್ಬಳು ನಿಮ್ಮನ್ನು ಹೀರೋ‌ ಮಾಡ್ತೀನಿ ಅಂತ ಹುಡುಗರ ಜೊತೆ ಮಾಡುತ್ತಿದ್ದ ಕೆಲಸ ಇದೀಗ ಬಯಲಾಗಿದೆ..

ಹೌದು ಸಿನಿಮಾ ಹೆಸರಿನ ನೆಪದಲ್ಲಿ ಅದೆಷ್ಟೋ ಮೋಸಗಳು ನಡೆಯುತ್ತಲೇ ಇವೆ. ಈ ಕುರಿತಾಗಿ ಅನೇಕ ಸುದ್ದಿಗಳು ಆಗಾಗ ಹೊರಬರುತ್ತಲೇ ಇರುತ್ತವೆ.. ಆದರೂ ಸಹ ಸಿನಿಮಾ ನಿರ್ಮಾಪಕರ ಹೆಸರಿನಲ್ಲಿ, ಸಿನಿಮಾದಲ್ಲಿ ಚಾನ್ಸ್‌ ಕೊಡಿಸುವ ವಿಷಯದಲ್ಲಿ ಅದೆಷ್ಟೋ ಮೋಸಗಳು ನಡೆದಿದೆ.. ಹೌದು ಸಿನಿಮಾ ನಿರ್ಮಾಪಕರು ಎಂದು ಹೇಳಿಕೊಂಡು ಸಿನಿಮಾ ಮಂದಿಗೆ ಅದರಲ್ಲೂ ಚೆಂದದ ಹುಡುಗರಿಗೆ ಮೋಸ ಮಾಡಿದ ಮತ್ತೊಂದು ಸುದ್ದಿ ಹೊರಬಿದ್ದಿದೆ.. ಹೌದು ಸಿನಿಮಾ ಇಂಡಸ್ಟ್ರಿಯಲ್ಲಿ ತಾನು ನಿರ್ಮಾಪಕಿ ಎಂದು ಹೇಳಿಕೊಂಡಿದ್ದು, ಅನೇಕರಿಗೆ ಕೋಟಿಗಟ್ಟಲೆ ಹಣ ನಾಮ ಹಾಕಿದ್ದಾಳೆ ಈ ಮಹಿಳೆ..

ಈ ನಕಲಿ ನಿರ್ಮಾಪಕಿಯ ಬಣ್ಣದ ಮಾತಿನಿಂದ ಅದೆಷ್ಟೋ ಜನ ಮೋಸ ಹೋಗಿದ್ದಾರೆ. ಕೋಟಿಗಟ್ಟಲೆ ಹಣ ಕಳೆದುಕೊಂಡು ಈಗ ಪೊಲೀಸರ ಮೊರೆ ಹೋಗಿದ್ದಾರೆ.. ಹೌದು ಚಿತ್ರರಂಗಕ್ಕೆ ಸಂಬಂಧಿಸಿದ ದೊಡ್ಡ ಜಾಲವೊಂದನ್ನು ಪೊಲೀಸರು ಬಯಲು ಮಾಡಿದ್ದಾರೆ. ಈ ನಿರ್ಮಾಪಕಿ ಹೆಸರು ಶಿಲ್ಪಾ ಚೌಧರಿ. ನಿರ್ಮಾಪಕಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಶಿಲ್ಪಾ ಚೌಧರಿ ಸಿನಿಮಾ ಮಂದಿಗೆ ದೊಡ್ಡ ಮಟ್ಟದಲ್ಲಿಯೇ ಮೋಸ ಮಾಡಿದ್ದಾಳೆ.. ತೆಲುಗಿನ ನಟ ಮಹೇಶ್‌ ಬಾಬು ಸಹೋದರಿ ಸೇರಿದಂತೆ ಕೆಲ ನಟನಟಿಯರು ಸಹ ಇವಳ ಬಲೆಗೆ ಬಿದ್ದಿರೋದು ವಿಪರ್ಯಾಸವೇ ಸರಿ.. ಆದರೆ ಸಧ್ಯ ಈಕೆ ಈಗ ಪೊಲೀಸರ ಅತಿಥಿಯಾಗಿದ್ದು, ಈಕೆಯ ಪ್ರಕರಣಗಳು ಒಂದೊಂದಾಗಿ ಹೊರಬರುತ್ತಿವೆ.

ಶಿಲ್ಪಾ ಚೌಧರಿಯ ಪ್ಲ್ಯಾನ್‌ ಹೀಗಿದೆ ನೋಡಿ. ಸಿನಿಮಾದವರ ದೊಡ್ಡ ದೊಡ್ಡ ಪಾರ್ಟಿಗೆ ನಿರ್ಮಾಪಕಿ ಎಂದುಕೊಂಡು ಶಿಲ್ಪಾ ಕೂಡ ಬರುತ್ತಾಳೆ. ಪಾರ್ಟಿಯಲ್ಲಿ ಸಿನಿಮಾ ಮಂದಿಯನ್ನು ಖುದ್ದು ಪರಿಚಯ ಮಾಡಿಕೊಳ್ಳುತ್ತಾಳೆ. ತಾನು ಸಿನಿಮಾ ನಿರ್ಮಾಣ ಮಾಡುವುದಾಗಿ, ಅಥವಾ ದೊಡ್ಡ ಮೊತ್ತದ ಹಣವನ್ನು ಬಡ್ಡಿಗೆ ಕೊಡುವುದಾಗಿ ಆಸೆ ಹುಟ್ಟಿಸುತ್ತಾಳೆ. ಅಷ್ಟೇ ಅಲ್ಲದೇ ತನ್ನದು ರೀಯಲ್‌ ಎಸ್ಟೇಟ್‌ ಬಿಸಿನೆಸ್‌ ಎಂದು ಸಹ ಪುಂಗಿ ಊದುತ್ತಾಳೆ. ಇನ್ನು ಹೊಸಬರಿಗೆ ಅದರಲ್ಲೂ ಹುಡುಗರಿಗೆ ಹೀರೋ ಮಾಡ್ತೀನಿ ಸಿನಿಮಾಗಳಲ್ಲಿ ಚಾನ್ಸ್‌ ಕೊಡಿಸುವುದಾಗಿಯೂ ಹೇಳಿ ಅನೇಕರಿಗೆ ಮೋಸ ಮಾಡಿದ್ದಾಳೆ. ಶಿಲ್ಪಾಳ ಈ ಎಲ್ಲ ಮೋಸದಾಟಗಳಿಗೆ ಈಕೆಯ ಪತಿಯ ಸಾಥ್‌ ಕೂಡ ಇದೆ.

ಪ್ರಿನ್ಸ್‌ ಮಹೇಶ್‌ ಬಾಬುರವರ ಸಹೋದರಿ ಪ್ರಿಯದರ್ಶಿನಿ ಶಿಲ್ಪಾಳ ಬಣ್ಣ ಬಣ್ಣದ ಮಾತಿಗೆ ಮೊರೆ ಹೋಗಿ 3.90 ಕೋಟಿ ಹಣವನ್ನು ನೀಡಿದ್ದಾರೆ. ರಿಯಲ್‌ ಎಸ್ಟೇಟ್‌ಗೆ ಹೂಡಿಕೆ ಮಾಡುವುದಾಗಿ ಶಿಲ್ಪಾ ಮಹೇಶ್‌ ಬಾಬುರವರ ಸಹೋದರಿ ಪ್ರಿಯದರ್ಶಿನಿ ಬಳಿ ಇಷ್ಟು ದೊಡ್ಡ ಮೊತ್ತವನ್ನು ಪಡೆದಿದ್ದಾರೆ. ಇದೀಗ ಶಿಲ್ಪಾ ಚೌಧರಿ ವಿರುದ್ಧ ಪ್ರಿಯದರ್ಶಿನಿ ಪೊಲೀಸರಿಗೆ ದೂರು ದಾಖಲಿದ್ದಾರೆ.

ಪ್ರಿಯದರ್ಶಿನಿ ವಿಷಯ ಹೊರ ಬರುತ್ತಿದಂತೆ ತೆಲುಗಿನ ಕೆಲ ಸಿನಿಮಾ ಮಂದಿ ಎಚ್ಚೆತ್ತುಕೊಂಡಿದ್ದಾರೆ. ತೆಲುಗು ಯುವ ನಟ ಹರ್ಷ ಕನುಮೇಲಿ ಕೂಡ ಶಿಲ್ಪಾ
ನಿಂದ ಮೋಸ ಹೋಗಿರುವುದಾಗಿ ಹೇಳಿಕೊಂಡಿದ್ದಾರೆ. ಶಿಲ್ಪಾ ತನ್ನ ಬಳಿ 3ಕೋಟಿ ಹಣವನ್ನು ಸಾಲ ರೂಪದಲ್ಲಿ ಪಡೆದು ಈಗ ಮರಳಿ ನೀಡುತ್ತಿಲ್ಲ. ಹಣ ಕೇಳಿದರೆ ಬೌನ್ಸರ್‌ಗಳನ್ನು ಬಿಟ್ಟು ಬೆದರಿಕೆ ಹಾಕಿಸಿದ್ದಾರಂತೆ. ಎಂದು ಹರ್ಷ ಆರೋಪ ಮಾಡಿದ್ದಾರೆ. ಈಗ ಇವರೂ ಸಹ ದೂರು ದಾಖಲಿಸಿದ್ದಾರೆ. ತೆಲಂಗಾಣದ ನರ್ಸಿಂಗಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಮೋಸದ ದಂಪತಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರ ಮೋಸದಾಟಗಳ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ. ಇವರ ಬಲೆಗೆ ಇನ್ನೆಷ್ಟು ಜನ ಬಿದ್ದಿದ್ದಾರೋ ತನಿಖೆ ನಂತರವೇ ಗೊತ್ತಾಗಲಿದೆ.