ಪ್ರತ್ಯಕ್ಷವಾದ ಶರ್ಮಿಳಾ ಮಾಂಡ್ರೆ.. ಅಂದಿನ ಘಟನೆ ಬಗ್ಗೆ ಹೇಳಿದ್ದೇ ಬೇರೆ‌‌..

ಏಪ್ರಿಲ್ 4 ರಂದು ಬೆಳಗಿನ ಜಾವ ಕನ್ನಡದ ನಟಿಯೊಬ್ಬರ ಕಾರ್ ಅಪಘಾತವಾಗಿದೆ ಎಂಬ ಸುದ್ದಿ ಹಬ್ಬಿತ್ತು.. ಆ ನಟಿ ಬೇರೆ ಯಾರೂ ಅಲ್ಲ ಅದು ಶರ್ಮಿಳಾ ಮಾಂಡ್ರೆ.. ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮರಳುವ ವೇಳೆ ವೇಗವಾಗಿ ಕಾರು ಓಡಿಸಿ ಫ್ಲೈ ಓವರ್ ನ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಜಾಗ್ವಾರ್ ಕಾರ್ ನಜ್ಜುಗುಜ್ಜಾಗಿತ್ತು.. ಅದೃಷ್ಟವಶಾತ್ ಶರ್ಮಿಳಾ ಮಾಂಡ್ರೆ ಹಾಗೂ ಜೊತೆಯಲ್ಲಿದ್ದ ಸ್ನೇಹಿತನಿಗೆ ಯಾವುದೇ ಪ್ರಾಣಾಪಾಯ ವಾಗಲಿಲ್ಲ.. ಇದು ಸಾಮಾನ್ಯ ದಿನಗಳಲ್ಲಿ‌ ನಡೆದಿದ್ದರೆ ದೊಡ್ಡ ಸುದ್ದಿ ಆಗುತ್ತಿರಲಿಲ್ಲ.. ಇದು ನಡೆದದ್ದು ಲಾಕ್ ಡೌನ್ ಸನಯದಲ್ಲಿ.. ಅದರಲ್ಲೂ ಅವಶ್ಯಕ ಮೆಡಿಸಿನ್ ತರಲು ಕೂಡ ಹೊರ ಹೋಗೋದು ಕಷ್ಟವಾಗಿದ್ದ ಸಮಯದಲ್ಲಿ ಶರ್ಮಿಳಾ ಮಾಂಡ್ರೆ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿ ರಾತ್ರಿ ಮನೆಗೆ ಮರಳುವ ವೇಳೆಯಲ್ಲಿ ಈ ರೀತಿ ಆಗಿದೆ ಎಂಬ ಸುದ್ದಿ ಹಬ್ಬಿತ್ತು..

ಅಷ್ಟೇ ಅಲ್ಲದೇ ಪೊಲೀಸರಿಗೆ ಸರಿಯಾಗಿ ಹೇಳಿಕೆ ನೀಡದೇ ಆಸ್ಪತ್ರೆಯಿಂದ ಯಾರಿಗೂ ತಿಳಿಸದೇ ಹೊರಟು ಹೋಗಿದ್ದಾರೆ ಎನ್ನಲಾಗಿತ್ತು.. ಬಡವರ ಮಕ್ಕಳಾದರೆ ಕೇಸು.. ಶ್ರೀಮಂತರಾದರೆ ಈ ರೀತಿ ಎಂದು ಮಾದ್ಯಮದಲ್ಲಿ ಟೀಕಿಸಲಾಗಿತ್ತು..

ಆನಂತರ ಶರ್ಮಿಳಾ ಎಲ್ಲಿದ್ದಾರೆ ಎಂದು ಯಾರಿಗೂ ತಿಳಿಯಲಿಲ್ಲ. ಕೊರೊನಾ ಇದ್ದ ಕಾರಣ ಇದು ಹೆಚ್ಚು ಸುದ್ದಿಯೂ ಆಗಲಿಲ್ಲ.. ಆದರೆ ಇದೀಗ ಒಂದೂವರೆ ತಿಂಗಳ ಬಳಿಕ ಶರ್ಮಿಳಾ ಮಾಂಡ್ರೆ ಪ್ರತ್ಯಕ್ಷ ವಾಗಿದ್ದಾರೆ.. ಹೌದು.. ಇಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ..

ಆದರೆ ಮುಖ್ಯವಾಗಿ ಅಪಘಾತ ಹೇಗಾಯಿತು ಎಂಬ ವಿಚಾರವೊಂದನ್ನು ಬಿಟ್ಟು ಮಿಕ್ಕೆಲ್ಲವನ್ನೂ ತಿಳಿಸಿದ್ದಾರೆ.. “ಅಪಘಾತದ ಸಮಯದಲ್ಲಿ ನನ್ನ ಬಗ್ಗೆ ಸಾಕಷ್ಟು ಕತೆಗಳು ಸುದ್ದಿಯಾಗಿತ್ತು.. ಆದರೆ ಆ ಸಮಯದಲ್ಲಿ ನಾನು ಚೇತರಿಸಿಕೊಳ್ಳುವುದಷ್ಟೇ ನನಗೆ ಮುಖ್ಯವಾಗಿತ್ತು.. ಆಗ ಆದ ಗಾಯಗಳಿಂದ ನಾನು ಗುಣಮುಖಳಾಗಬೇಕಿದ್ದದ್ದು ಮುಖ್ಯವಾಗಿತ್ತು.. ನಾನು ಚೇತರಿಸಿಕೊಳ್ಳಲು ಸಹಾಯ ಮಾಡಿದ ನನ್ನ ಸ್ನೇಹಿತರಿಗೆ, ಕುಟುಂಬದವರಿಗೆ ಹಿತೈಷಿಗಳಿಗೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರಿಗೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಆದರೆ ಅಪಘಾತ ಯಾಕಾಯಿತು? ಅವರೇಕೆ ಮಧ್ಯ ರಾತ್ರಿಯಲ್ಲಿ ಹೊರ ಹೋಗಿದ್ದರು? ಎಂಬ ಕಾರಣ ಮಾತ್ರ ತಿಳಿಸಿಲ್ಲ..