ನೋವು ಹಂಚಿಕೊಂಡ ಶರಣ್.. ನಿನ್ನೆ ನಿಜಕ್ಕೂ ಶರಣ್ ಅವರಿಗೆ ಏನಾಗಿತ್ತು ಗೊತ್ತಾ?

ನಿನ್ನೆಯಷ್ಟೇ ಸ್ಯಾಂಡಲ್ವುಡ್ ನ‌ ಖ್ಯಾತ ನಟ ಶರಣ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.. ಇದೀಗ ಸದ್ಯ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು.. ನಿನ್ನೆ ನಡೆದ ಘಟನೆ ಬಗ್ಗೆ ಮಾದ್ಯಮದ ಜೊತೆ ಮಾತನಾಡಿದ್ದಾರೆ.. ಹೌದು ನಿನ್ನೆ ಅವತಾರ ಪುರುಷ ಸಿನಿಮಾ ಚಿತ್ರೀಕರಣದ ವೇಳೆ ಸಾ’ಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತಿತ್ತು.. ಅದೇ ಸಮಯದಲ್ಲಿ ಶರಣ್ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ತಕ್ಷಣ ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿಮಾಪಕರು ಶರಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.. ವಿಚಾರ ತಿಳಿದು ತಕ್ಷಣ ಶೃತಿ ಅವರು ಆಸ್ಪತ್ರೆಗೆ ಆಗಮಿಸಿದ್ದರು.. ಅಷ್ಟರಲ್ಲಿ ಶರಣ್ ಅವರಿಗೆ ಚಿತ್ರೀಕರಣದ ವೇಳೆ ಪೆಟ್ಟಾಗಿದೆ ಎಂಬ ಸುದ್ದಿ ಹಬ್ಬಿ ಹೋಗಿತ್ತು..

ಆದರೆ ಈ ಬಗ್ಗೆ ಮಾತನಾಡಿದ ಶೃತಿ ಅವರು “ಅಣ್ಣನಿಗೆ ಎರಡು ದಿನಗಳಿಂದಲೇ ಹೊಟ್ಟೆ ನೋವು ಇತ್ತು.. ತನ್ನಿಂದ ಚಿತ್ರೀಕರಣಕ್ಕೆ ತೊಂದರೆ ಆಗಬಾರದೆಂದು ಅವನು‌ ನೋವನ್ನು ಹೇಳಿಕೊಂಡಿರಲಿಲ್ಲ.. ಆದರೆ ನಿನ್ನೆ ಚಿತ್ರೀಕರಣದ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿ ಚಿತ್ರತಂಡದವರೇ ಆಸ್ಪತ್ರೆಗೆ ದಾಖಲಿಸಿದ್ದರು.. ಅಣ್ಣನಿಗೆ ಕಿ’ಡ್ನಿ ಸ್ಟೋನ್ ಆಗಿದೆ.. ಚಿಕಿತ್ಸೆ ನಂತರ ವೈದ್ಯರು ಏನು ನಿರ್ಧಾರ ತೆಗೆದುಕೊಳ್ಳುವರೋ ನೋಡಬೇಕಿದೆ.. ಆದರೆ ಗಾಬರಿಯಾಗುವಂತದ್ದು ಏನೂ ಇಲ್ಲ.. ಎಂದಿದ್ದರು..

ಇದೀಗ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು ಶರಣ್ ಅವರು ಮಾದ್ಯಮದ ಜೊತೆ ಮಾತನಾಡಿದ್ದಾರೆ.. “ನಿನ್ನೆ ನನಗೆ ತಡೆಯೋಕೆ ಆಗದಷ್ಟು ನೋವು ಕಾಣಿಸಿಕೊಂಡಿತ್ತು.. ನನ್ನ ಜೀವನದಲ್ಲಿ ಇಂತಹ ನೋವನು ನಾನು ಯಾವತ್ತೂ ಅನುಭವಿಸಿರಲಿಲ್ಲ.. ಅಷ್ಟು ನೋವಾಗುತಿತ್ತು.. ಮಸಲ್ ಕ್ಯಾಚ್ ಆಗಿರಬೇಕು ಅಂದುಕೊಂಡು ನೋವನ್ನು ತಡೆದುಕೊಳ್ಳಲು ಪ್ರಯತ್ನ ಪಟ್ಟೆ.. ಆದರೆ ಅನಂತರ ಸಿನಿಮಾ ತಂಡದವರೇ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದರು.. ವೈದ್ಯರು ಪರೀಕ್ಷೆ ನಡೆಸಿ ಕಿ’ಡ್ನಿ ಸ್ಟೋನ್ ಆಗಿದೆ ಅಂತ ತಿಳಿಸಿದ್ದಾರೆ.. ಸಣ್ಣ ಪ್ರಮಾಣದಲ್ಲಿ ಸ್ಟೋನ್ ಆಗಿದೆ. ಸದ್ಯಕ್ಕೆ ಏನು ತೊಂದರೆ ಇಲ್ಲ. ಎರಡು ದಿನ ರೆಸ್ಟ್ ಮಾಡೋಕೆ ಹೇಳಿದ್ದಾರೆ.. ಮೂರು ದಿನಗಳ ಬಳಿಕ ನೋವು ಕಡಿಮೆ ಆಗದೇ ಇದ್ದರೆ ಸ’ರ್ಜ ರಿ ಮಾಡೋದಾಗಿ ಡಾಕ್ಟರ್ ತಿಳಿಸಿದ್ದಾರೆ.. ಚಿತ್ರೀಕರಣದ ಸಮಯದಲ್ಲಿ ಈ ರೀತಿಯಾಗಿ ಬಹಳ ನಡೆಯುತ್ತಿರುತ್ತೆ. ಡ್ಯಾನ್ಸ್, ಸಾಹಸ ದೃಶ್ಯ​ ಅಂತ ಬಂದಾಗ ಮಸಲ್​ ಕ್ಯಾಚ್​ ಆಗೋದು ಸಾಮಾನ್ಯ. ಆದರೆ.. ಈ ನೋವು ಸ್ವಲ್ಪ ಜಾಸ್ತಿಯಾಗಿತ್ತು… ಮನೆಯಲ್ಲೇ ನೋವು ಕಾಣಿಸಿಕೊಂಡಾಗ ಡಾಕ್ಟರ್​ಗೆ ತೋರಿಸಲು ಹೇಳಿದ್ರು..

ಇದನ್ನೆಲ್ಲಾ ಏನು ತೋರಿಸೋದು ಅಂತ ನಾನೇ ಸುಮ್ಮನಾದೆ.. ದೇವರ ದಯೆಯಿಂದ ಅದಾಗೇ ಕಡಿಮೆನೂ ಆಯ್ತು. ಒಂದು ಎರಡು ಗಂಟೆ ಅಷ್ಟೇ ಇತ್ತು ನೋವು.. ನಾನು ಯಾಮಾರಿದ್ದು ಅಲ್ಲೇ.. ಮತ್ತೆ ನೋವು ಬರಲ್ಲ ಅಂದುಕೊಂಡೆ.. ಸದ್ಯ ಈ ನೋವು ಯಾಕೆ ಅನ್ನೋದು ಗೊತ್ತಾಯ್ತು ಅನ್ನೋ ಸಮಾಧಾನ ಇದೆ.. ಇನ್ನು ನೀರು ಚೆನ್ನಾಗಿ ಕುಡೀಬೇಕು.. ಈ ಮುಖಾಂತರ ಎಲ್ಲರಿಗೂ ಹೇಳಬೇಕಾಗಿರೋದು, ಯಾರಾದ್ರು ಬಂದು ನಿಮಗೆ ನೀರು ಕುಡೀರಿ ಅಂದಾಗ ಕಡೆಗಣಿಸಬೇಡಿ.. ದಯವಿಟ್ಟು ಹಾಗೇ ಮಾಡ್ಬೇಡಿ. ಅತಿ ಹೆಚ್ಚು ನಮ್ಮನ್ನ ನಾವು ಹೈಡ್ರೇಟ್​ ಮಾಡ್ಕೊಂಡು ಇಟ್ಟುಕೊಳ್ಳೋಣ. ನನಗೆ ನೀರು ಕುಡಿಯುವ ಅಭ್ಯಾಸನೇ ಇಲ್ಲ.. ಇದೇ ಮೊದಲ ಸಲ ನನಗೆ ಈ ಥರ ತೊಂದರೆ ಕಾಣಿಸಿಕೊಂಡಿದ್ದು.. ನೀರಿನ ಮಹತ್ವದ ಬಗ್ಗೆ ಈಗ ಗೊತ್ತಾಗಿದೆ.. ಎಲ್ಲರಿಗೂ ಗೊತ್ತಾಗಬೇಕು. ನನಗೆ ನಿನ್ನೆಯಿಂದ ಬಹಳಷ್ಟು ಜನರು ಮೆಸೆಜ್ ಮಾಡಿದ್ದಾರೆ.. ಅದರಲ್ಲಿ ಬಹುತೇಕ ಎಲ್ಲರೂ ಹೆಚ್ಚಾಗಿ ನೀರು ಕುಡಿಯಿರಿ ಎಂದೇ ತಿಳಿಸಿದ್ದಾರೆ.. ಎಲ್ಲರಿಗೂ ಧನ್ಯವಾದಗಳು ಎಂದರು..