ಶಂಕ್ರಣ್ಣನ ಸಾವಿಗೆ ತಿರುವು.. ಮೇಘನಾ ಈಗ ನಾಲ್ಕು ತಿಂಗಳ ಗರ್ಭಿಣಿ.. ಹೊರಬಿತ್ತು ಶಂಕ್ರಣ್ಣ ಸಾವಿನ ಅಸಲಿ ಕತೆ.. ಸಿಕ್ಕಿತು ಡೆತ್ ನೋಟ್..

ಶಂಕ್ರಣ್ಣ ಮೇಘನಾ ನಿಜ ಜೀವನ ಜೊತೆ ಜೊತೆಜೊತೆಯಲಿ ಸ್ಟೋರಿಯಂತೆಯೇ ಕಳೆದ ಆರು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶಂಕ್ರಣ್ಣ ಹಾಗೂ ಮೇಘನಾ ಹೊಸ ಜೀವನ ಶುರು ಮಾಡಿದ್ದರು.. ಆದರೆ ಹೊಸ ಜೀವನ ಶುರುವಾದ ಆರೇ ತಿಂಗಳಿಗೇ ಒಂದು ಜೀವವೇ ಇಲ್ಲವಾಗಿ ಹೋಗಿದ್ದು ನಿಜಕ್ಕೂ ದುರಾದೃಷ್ಟವೋ ದುರ್ಧೈವವೋ ತಿಳಿಯದು.. ಹೌದು ಇಪ್ಪತ್ತೈದು ವರ್ಷದ ಮೇಘನಾ ನಲವತ್ತೈದು ವರ್ಷದ ಶಂಕರಣ್ಣನನ್ನು ಒತ್ತಾಯ ಮಾಡಿ ಮದುವೆ ಮಾಡಿಕೊಂಡಿದ್ದಳು‌.. ಆದರೆ ಅವರ ಸಂಸಾರ ಆರೇ ತಿಂಗಳಿಗೆ ಈ ರೀತಿ ಅಂತ್ಯ ಕಾಣುವುದೆಂದೂ ಬಹುಶಃ ಇಬ್ಬರೂ ಊಹಿಸಿರಲಿಲ್ಲವೇನೋ‌.

ಹೌದು ತುಮಕೂರಿನ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯ ಶಂಕ್ರಣ್ಣ ಹೆಣ್ಣು ಸಿಗದೇ ಮದುವೆಯಾಗದೇ ಹಾಗೆಯೇ ಉಳಿದು ಬಿಟ್ಟರು.. ಇತ್ತ ಅವರ ಮನೆಯಲ್ಲಿ ಅಮ್ಮ ಹಾಗೂ ಸಹೋದರಿಯೂ ಸಹ ಇದ್ದರು.. ಇತ್ತ ಮೇಘನಾಗೆ ಮದುವೆಯಾಗಿ ಗಂಡ ಮೇಘನಾಳನ್ನು ಬಿಟ್ಟು ಹೋಗಿದ್ದು ಮೂರು ವರ್ಷವಾದರೂ ಮರಳಿ ಬಾರಲಿಲ್ಲ.. ಕೊನೆಗೆ ಮೇಘನಾಳೇ ಶಂಕ್ರಣ್ಣನಿಗೆ ಮದುವೆ ಮಾಡಿಕೊಳ್ಳುವಂತೆ ಕೇಳಿ ಸರಳವಾಗಿ ದೇವಸ್ಥಾನದಲ್ಲಿ ಮದುವೆಯೂ ಆದರು.. ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯೂ ಆಯಿತು.. ನಂತರ ರೀಲ್ಸ್ ಅದು ಇದು ಅಂತ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೇಮಸ ಕೂಡ ಆಗಿತ್ತು.. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷವಾಗಿದ್ದ ಈ ಜೋಡಿಯ ಮನೆಯಲ್ಲಿ ನಿತ್ಯವೂ ಜಗಳ ನಡೆಯುತಿತ್ತು..

ಹೌದು ಇಂದು ಇದ್ದಕಿದ್ದ ಹಾಗೆ ಶಂಕ್ರಣ್ಣ ತಮ್ಮದೇ ಜಮೀನಿನಲ್ಲಿ‌ಹಲಸಿನ ಮರದಲ್ಲಿ ಜೀವ ಕಳೆದುಕೊಂಡಿದ್ದು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.. ಹೌದು ಕಳೆದ ಆರು ತಿಂಗಳ ಹಿಂದಷ್ಟೇ ಹೊಸ ಜೀವನ ಆರಂಭಿಸಿದ್ದ ಶಂಕ್ರಣ್ಣ ಇದೀಗ ತಮ್ಮ ಜೀವನವನ್ನೇ ಮುಕ್ತಾಯ ಮಾಡಿಕೊಂಡು ಬಾರದ ಲೋಕಕ್ಕೆ ಹೊರಟಿದ್ದಾರೆ.. ಇದ್ದಕಿದ್ದ ಹಾಗೆ ಶಂಕ್ರಣ್ಣ ಹೀಗೆ ಮಾಡಿಕೊಳ್ಳಲು ಕಾರಣವೇನು ಎಂಬ ಅನುಮಾನ ಮೂಡಿದ್ದು..

ಒಂದು ಕಡೆ ಮೇಘನಾ ಬಂದ ಮೇಲೆ ನನ್ನ ಮಗನ ಜೀವನವೇ ಹಾಳಾಯ್ತು.. ಅವಳು ಬಂದ ಮೇಲೆ ಮನೆಯಲ್ಲಿ ಪ್ರತಿದಿನ ಜಗಳ ಮಾಡುತ್ತಿದ್ದಳು.. ಆಸ್ತಿಯೆಲ್ಲವನ್ನು ಮಾರಿಕೊಂಡು ಬೆಂಗಳೂರಿಗೆ ಹೋಗಬೇಕು ಎನ್ನುತ್ತಿದ್ದಳು.. ಆಸ್ತಿಗಾಗಿ ಮದುವೆ ಮಾಡಿಕೊಂಡು ಈಗ ಈ ರೀತಿ ಮಾಡಿದ್ಳು.. ತಮ್ಮನನ್ನು ಕರೆಸಿ ಗಲಾಟೆಯನ್ನೂ ಸಹ ಮಾಡಿದ್ದಳು ಎಂದು ಶಂಕ್ರಣ್ಣನ ತಾಯಿ ಗೋಳಾಡುತ್ತಿದ್ದರೆ.. ಇತ್ತ ಮೇಘನಾ ಕೂಡ ನನ್ನ ಗಂಡನ ಈ ನಿರ್ಧಾರಕ್ಕೆ ನಮ್ಮ ಅತ್ತೆಯೇ ಕಾರಣ.. ದಿನ ಪೂರ್ತಿ ನನ್ನ ಜೊತೆ ಜಗಳ ಮಾಡುತ್ತುದ್ದರು.. ನಮ್ಮ ಮನೆಯವರ ಮಾತನ್ನು ಅವರು ಕೇಳುತ್ತಿರಲಿಲ್ಲ..

ನಾನು ಈಗ ನಾಲ್ಕು ತಿಂಗಳ ಗರ್ಭಿಣಿ.. ನನಗೆ ಯಾರು ದಿಕ್ಕು.. ಮೊದಲನೇ ಗಂಡನೂ ನನ್ನ ಬಿಟ್ಟು ಹೋದ.. ಈಗ ಇವರೂ ಕೂಡ ಈ ರೀತಿ ಮಾಡಿಕೊಂಡರು.. ನನ್ನ ಹೊಟ್ಟೆಯಲ್ಲಿ‌ ಮಗು ಇದೆ.. ಇದಕ್ಕೆ ಯಾರು ದಿಕ್ಕು ಎಂದು ಗೋಳಾಡುತ್ತಿದ್ದಾಳೆ.. ಅತ್ತ ಶಂಕ್ರಣ್ಣ ಅವರ ತಾಯಿ ತನ್ನ ಸೊಸೆ ಮೇಲೆ ದೂರು ನೀಡಲು ಸಹ ಮುಂದಾಗಿದ್ದು ಒಟ್ಟಿನಲ್ಲಿ ನೆಮ್ಮದಿಯಿಂದ ಇದ್ದ ಕುಟುಂಬ ಮದುವೆಯೆಂಬ ಒಂದು ನಿರ್ಧಾರದಿಂದ ಏನೇನೆಲ್ಲಾ ಆಗಿ ಹೋಯ್ತು.. ಕೊನೆಗೆ ಶಂಕ್ರಣ್ಣನೇ ಇಲ್ಲವಾಗಿ ಹೋದರು..

ಆದರೆ ಅತ್ತೆ ಸೊಸೆ ಜಗಳ ದಿಂದ ಬೇಸತ್ತಿದ್ದ ಶಂಕ್ರಣ್ಣ ಮನೆಯಲ್ಲಿ ನೆಮ್ಮದಿ ಇಲ್ಲ ಎಂಬ ಕಾರಣಕ್ಕೆ ನಿನ್ನೆ ರಾತ್ರಿಯೇ ಮನೆಯಿಂದ ಹೊರ ಹೋಗಿದ್ದರು.. ಹೌದು ಅತ್ತ ಅಮ್ಮನೂ ತನ್ನ ಮಾತು ಕೇಳಲ್ಲ..‌ಇತ್ತ ಹೆಂಡತಿಯೂ ತನ್ನ ಮಾತು ಕೇಳಲ್ಲ.. ಅದಕ್ಕಾಗಿ ಬೇಸತ್ತ ಶಂಕ್ರಣ್ಣ ದುಡುಕಿ ಈ ನಿರ್ಧಾರ ಮಾಡಿದ್ದರು.. ದಿನವೂ ಮನೆಯಲ್ಲಿ ಜಗಳ ನೋಡಿ ನೋಡಿ ಸಾಕಾಗಿ ಕೊನೆಗೆ ನಿನ್ನೆ ರಾತ್ರಿಯೇ ತಾವೇ ನೆಟ್ಟು ಬೆಳೆಸಿದ್ದ ಹಲಸಿನ ಮರದಲ್ಲಿ ಜೀವ ಕಳೆದುಕೊಂಡಿದ್ದಾರೆ..