ಲಾಕ್ ಡೌನ್ ನಂತರ ಎಲ್ಲವೂ ಬದಲು.. ನಂಬರ್ ಒನ್ ಧಾರಾವಾಹಿ ಯಾವುದು ಗೊತ್ತಾ?

ಲಾಕ್ ಡೌನ್ ಸಡಿಲಿಕೆಯಾಯ್ತು.. ಕಿರುತೆರೆ ಧಾರಾವಾಹಿಗಳಿಗೆ ಶೂಟಿಂಗ್ ಮಾಡಲು ಅವಕಾಶವೂ ಸಿಕ್ಕಿತು.. ಸದ್ಯ ರಿಯಾಲಿಟಿ ಶೋಗಳು ಇಲ್ಲವಾದರೂ ಕೆಲವು ನಿಯಮಗಳ ಜೊತೆಗೆ ಧಾರಾವಾಹಿಗಳ ಚಿತ್ರೀಕರಣ ನಡೆಯುತ್ತಿದೆ.. ಎಂದಿನಂತೆ ಧಾರಾವಾಹಿಗಳು ಪ್ರಸಾರವಾಗುತ್ತಿದೆ..

ಆದರೆ ರೇಟಿಂಗ್ ವಿಚಾರದಲ್ಲಿ ಎಲ್ಲವೂ ಅದಲು ಬದಲಾಗಿದೆ.. ಹೌದು ಮೂಲೆ ಗುಂಪಾಗಿದ್ದ ವಾಹಿನಿ ಮತ್ತೆ ಟಾಪ್ ಸ್ಥಾನದಲ್ಲಿದೆ.. ನಂಬರ್ ಒನ್ ಇದ್ದ ಧಾರಾವಾಹಿಗಳು ಒಂದೆಜ್ಜೆ ಹಿಂದೆ ಇಟ್ಟಿದೆ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಕಳೆದ ವಾರದ ರೇಟಿಂಗ್ ಪ್ರಕಾರ ನ್ಯೂಸ್ ಚಾನಲ್ ವಿಚಾರಕ್ಕೆ ಬಂದರೆ ಟಿ ವಿ 9 ಎಂದಿನಂತೆ ಈಗಲೂ ನಂಬರ್ ಒನ್ ಸ್ಥಾನದಲ್ಲಿಯೇ ಇದೆ.. ಪಬ್ಲಿಕ್ ಟಿವಿ ಎರಡನೇ ಸ್ಥಾನದಲ್ಲಿದೆ.. ಮೂರನೇ ಸ್ಥಾನದಲ್ಲಿ ಸುವರ್ಣ ನ್ಯೂಸ್.. ನಾಲ್ಕನೇ ಸ್ಥಾನದಲ್ಲಿ ನ್ಯೂಸ್ 18 ಇದ್ದರೆ, 5ನೇ ಸ್ಥಾನದಲ್ಲಿ ದಿಗ್ವಿಜಯ ನ್ಯೂಸ್ ವಾಹಿನಿ ಸ್ಥಾನ ಪಡೆದುಕೊಂಡಿದೆ..

ಇನ್ನು‌ ಮನರಂಜನೆಯ ವಿಚಾರಕ್ಕೆ ಬಂದರೆ ಎಂದಿನಂತೆ ಇಲ್ಲಿಯೂ ಸಹ ಜೀ ಕನ್ನಡ ಮೊದಲ ಸ್ಥಾನದಲ್ಲಿಯೇ ಇದೆ.. ಆದರೆ ಎರಡನೇ ಸ್ಥಾನದಲ್ಲಿದ್ದ ಕಲರ್ಸ್ ವಾಹಿನಿ ಹಿಂದೆ ಸರಿದಿದೆ.. ಹೌದು ಎರಡನೇ ಸ್ಥಾನದಲ್ಲಿ ಉದಯ ಟಿವಿ ಬಂದಿದೆ.. ಮೂರನೇ ಸ್ಥಾನದಲ್ಲಿ ಸ್ಟಾರ್ ಸುವರ್ಣ ವಾಹಿನಿ.. ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ.. ಐದನೇ ಸ್ಥಾನದಲ್ಲಿ ಉದಯ ಮೂವಿಸ್ ವಾಹಿನಿ ಸ್ಥಾನ ಪಡೆದುಕೊಂಡಿದೆ..

ಇನ್ನು ಧಾರಾವಾಹಿಗಳ ವಿಚಾರಕ್ಕೆ ಬಂದರೆ.. ಗಟ್ಟಿಮೇಳ ಧಾರಾವಾಹಿ ಮೊದಲ ಸ್ಥಾನ.. ಎರಡನೇ ಸ್ಥಾನದಲ್ಲಿ ಜೊತೆಜೊತೆಯಲಿ.. ಮೂರರಲ್ಲಿ ನಾಗಿಣಿ.. ನಾಲ್ಕರಲ್ಲಿ ಪಾರು.. ಐದರಲ್ಲಿ ಯಾರೆ ನೀ ಮೋಹಿನಿ.. 6 ರಲ್ಲಿ ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ ಮದುವೆ.. ಏಳರಲ್ಲಿ‌ ಗೀತಾ.. ಎಂಟರಲ್ಲಿ ಮಹಾಭಾರತ, ಒಂಬತ್ತರಲ್ಲಿ ಕನ್ನಡತಿ ಹಾಗೂ ರಾಧಾ ಕೃಷ್ಣ.. ಹತ್ತರಲ್ಲಿ ಮನಸಾರೆ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ..

ಒಂದು ಕಾಲದಲ್ಲಿ.. ಅಂದರೆ ನಮ್ಮ ಬಾಲ್ಯದಲ್ಲಿ ಇದ್ದ ಏಕೈಕ ವಾಹಿನಿ ಉದಯ ಟಿವಿ ಇದೀಗ ಮತ್ತೆ ಟಾಒ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ವಿಚಾರ.. ಲಾಕ್ ಡೌನ್ ಸಮಯದಲ್ಲಿ ಹೊಸ ಹೊಸ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕ ಉದಯ ಟಿವಿ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ ಎಂದರೂ ತಪ್ಪಾಗಲಾರದು..