ಎಲ್ಲಾ ಧಾರಾವಾಹಿ ಪ್ರಿಯರಿಗೆ ಗುಡ್ ನ್ಯೂಸ್..

ಲಾಕ್ ಡೌನ್ ಆದಾಗಿನಿಂದ ಮಹಿಳೆಯರಿಗೆ ಮನೆಯಲ್ಲಿ ಡಬಲ್ ಕೆಲಸದ ಜೊತೆಗೆ ಅತ್ತ ಸಂಜೆಯಾದರೆ ಎಲ್ಲಾ ಆಯಾಸ ಮರೆಯಲು ನೋಡುತ್ತಿದ್ದ ಧಾರಾವಾಹಿಗಳು ಕೂಡ ನಿಂತು ಹೋಗಿದ್ದವು.. ನೋಡಿದ್ದೇ ಸಂಚಿಕೆಯನ್ನು ಎಷ್ಟು ಬಾರಿ ನೋಡೋದು ಅಂತ ಮರು ಪ್ರಸಾರ ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿತ್ತು..

ಅದ್ಯಾವಾಗ ಮತ್ತೆ ಹೊಸ ಸಂಚಿಕೆಗಳು ಬರುತ್ತದೆಯೋ ಎಂದು ಕಾಯುತ್ತಿದ್ದ ಧಾರಾವಾಹಿ ಪ್ರಿಯರಿಗೆ ಇದೀಗ ಸಿಹಿ ಸುದ್ದಿ.. ಹೌದು ಲಾಕ್ ಡೌನ್ ಸಡಿಲಿಕೆಯಾದರೂ ಧಾರಾವಾಹಿ ಶೂಟಿಂಗ್ ಗೆ ಯಾವುದೇ ಅನುಮತಿ ನೀಡಿರಲಿಲ್ಲ.. ಆ ಬಳಿಕ ಕಿರುತೆರೆ ಅಸೋಸಿಯೇಷನ್ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಳಿ‌ ಮನವಿ ಸಲ್ಲಿಸಿದ ನಂತರ ಧಾರಾವಾಹಿ ಶೂಟಿಂಗ್ ಗೆ ಅನುಮತಿ ನೀಡಲಾಯಿತು. ಆದರೆ ರಿಯಾಲಿಟಿ ಶೋಗಳಾಗಲಿ ಸಿನಿಮಾಗಳಾಗಲಿ ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ..

ಇನ್ನು ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ಸಿಕ್ಕರೂ ಕೂಡ ಒಂದೆರೆಡು ಪ್ರೊಡಕ್ಷನ್ ಹೌಸ್ ಹೊರತುಪಡಿಸಿ ಬೇರೆ ಯಾವುದೇ ಧಾರಾವಾಹಿಗಳ ಚಿತ್ರೀಕರಣ ಆರಂಭವಾಗಿರಲಿಲ್ಲ.. ಕಲಾವಿದರು ತಂತ್ರಜ್ಞರ ಆರೋಗ್ಯ ದೃಷ್ಟಿಯಿಂದ ಹಾಗೂ ಬೇರೆ ಬೇರೆ ಊರುಗಳಿಗೆ ತೆರಳಿದ್ದ ಕಾರ್ಮಿಕರನ್ನು ಮತ್ತೆ ಕರೆತರುವುದು ಕಷ್ಟದ ಕೆಲಸವಾದ್ದರಿಂದ ಯಾವುದೇ ಶೂಟಿಂಗ್ ಆರಂಭಿಸಿರಲಿಲ್ಲ.. ಆದರೀಗ ಬಸ್ ಸಂಚಾರ ಆರಂಭವಾಗಿದ್ದು ಇನ್ನೂ ಕಾದರೆ ಉಪಯೋಗವಿಲ್ಲ ಎಂದು ಶೂಟಿಂಗ್ ನಡೆಸಲು ತೀರ್ಮಾನಿಸಲಾಗಿದೆ..

ಹೌದು ಇದೇ 25 ರಿಂದ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗಲು ಸಕಲ ತಯಾರಿ ನಡೆದಿದೆ.. ಬಹುತೇಕ ಎಲ್ಲಾ ಧಾರಾವಾಹಿ ತಂಡದವರೂ ಸಹ ಮೇ 25 ರಿಂದ ಧಾರಾವಾಹಿ ಚಿತ್ರೀಕರಣ ಪ್ರಾರಂಭ ಮಾಡುತ್ತಿದ್ದು ಇನ್ನೇನು ಕೆಲವೇ ದಿನಗಳು ಅಂದರೆ ಜೂನ್ 1 ರಿಂದ ಹೊಸ ಸಂಚಿಕೆಗಳನ್ನು ಪ್ರೇಕ್ಷಕರು ನೋಡಬಹುದಾಗಿದೆ..