ಮಗಳು ಜಾನಕಿ‌ ಧಾರಾವಾಹಿ ನಿಲ್ಲಿಸಿದಕ್ಕೆ ಮನನೊಂದ ಸೀತಾರಾಮ್ ಅವರು ಕೊನೆಯದಾಗಿ ಹೇಳಿದ್ದೇನು ಗೊತ್ತಾ?

ಕೊರೊನಾ ಕಾರಣದಿಂದಾಗಿ ಕಾರ್ಯಕ್ರಮಗಳನ್ನು ಒದಗಿಸೋದು ಕಷ್ಟ ಎನ್ನುವ ಕಾರಣಕ್ಕೆ ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿಲ್ಲಿಸಲಾಗುತ್ತಿದೆ.. ಜೊತೆಗೆ ಕಲರ್ಸ್ ಸೂಪರ್ ವಾಹಿನಿಯನ್ನೇ ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ.. ಇನ್ನು ಕಲರ್ಸ್ ಸೂಪರ್ ವಾಹಿನಿಯಲ್ಲಿ ಬರುತ್ತಿದ್ದ ಸೀತಾರಾಮ್ ಅವರ ಮಗಳು ಜಾನಕಿ ಧಾರಾವಾಹಿಗೆ ಲೆಕ್ಕವಿಲದಷ್ಟು ಅಭಿಮಾನಿಗಳಿದ್ದರು.. ಯಾವ ಧಾರಾವಾಹಿ‌ ನಿಂತರೂ ಆಗದ ನೋವು ಈಗ ನಿಜಕ್ಕೂ ಮಗಳು ಜಾನಕಿ ಧಾರಾವಾಹಿ‌ ನಿಂತದ್ದಕ್ಕೆ ಆಗಿದೆ.. ಯಾವುದೇ ಗಿಮಿಕ್ ಇಲ್ಲದೇ ಅದ್ಭುತ ಕತೆಯ ಮೂಲಕ ಸಾಗುತ್ತಿದ್ದ ಮಗಳು ಜಾನಕಿ ಧಾರಾವಾಹಿ ನಿಲ್ಲಿಸಿದ್ದು ಅಭಿಮಾನಿಗಳಿಗೆ ಮಾತ್ರವಲ್ಲದೇ ಧಾರಾವಾಹಿ ತಂಡದವರಿಗೂ ನೋವು ತಂದಿದೆ..

ಈ ಬಗ್ಗೆ ಸೀತಾರಾಮ್ ಅವರು ಮನಸ್ಸು ನೋವು ಮಾಡಿಕೊಂಡು ಹೇಳಿರುವ ಮಾತುಗಳು ಇಲ್ಲಿವೆ ನೋಡಿ.. “ಮಗಳು ಜಾನಕಿ ಯ
ಆತ್ಮೀಯ ಬಂಧುಗಳಿಗೆ ನಮಸ್ಕಾರ.. ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ.

ಅದಕ್ಕೆ ಮುಂಚೆ ಜೂನ್ ಒಂದರಿಂದ ರಾತ್ರಿ 9.30 ಕ್ಕೆ ನಾವು ಹಿಂದೆ ಶೂಟಿಂಗ್ ಮುಗಿಸಿದ್ದ ಮಗಳು ಜಾನಕಿಯ ಹೊಸ ಎಪಿಸೋಡು ಗಳನ್ನು ಸುಮಾರು ಎರಡು ವಾರಗಳ ಕಾಲ ಪ್ರಸಾರ ಮಾಡುತ್ತಿದ್ದಾರೆ. ನೋಡಬೇಕಾಗಿ ಪ್ರಾರ್ಥನೆ.. ನಿಮ್ಮ ಪ್ರೀತಿ ಕಂಡು ನನ್ನ ಹೃದಯ ಆರ್ದ್ರ ಗೊಂಡಿದೆ. ನನ್ನಲ್ಲಿ ನೋವು ಮಡುಗಟ್ಟಿ ನಿಂತಿದೆ.

ಮತ್ತೊಮ್ಮೆ ನಿಮ್ಮ ಜತೆ ಮಾತನಾಡುತ್ತೇನೆ. ಪ್ರೀತಿ ತುಂಬಿದ ನಮನಗಳು.. ದಯವಿಟ್ಟು ಬೇರೆ ಚಾನಲ್ ಗಳಲ್ಲಿ ಪ್ರಸಾರ ಮಾಡಿಸಿ ಎಂಬ ಸಲಹೆಗಳನ್ನು ನೀಡುವುದು ಬೇಡ. ನನಗೆ ನೋವು ಜಾಸ್ತಿ ಯಾಗುತ್ತದೆ. ಅದು ಸಾಧ್ಯವಿಲ್ಲ..”

ಇವಿಷ್ಟು ಸೀತಾರಾಮ್ ಅವರ ಮಾತುಗಳು.. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು‌ ಕಮೆಂಟ್ ನಲ್ಲಿ ತಿಳಿಸಿ..