ಪ್ರತಿ ತಿಂಗಳು ನಟ ಸತ್ಯಜಿತ್ ಗೆ ಒಂದು ಲಕ್ಷ ಹಣ ಕೊಡುತ್ತಿದ್ದ ಮಗಳು.. ನಿಜವಾದ ಕಾರಣವೇನು ಗೊತ್ತಾ? ಅಪ್ಪ ಮಗಳ ನಡುವೆ ನಡೆದ ಅಸಲಿ ವಿಚಾರ ಇಲ್ಲಿದೆ ನೋಡಿ..

ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ನಟ ಸತ್ಯಜಿತ್ ಹಾಗೂ ಅವರ ಮಗಳ ವಿಚಾರ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದೆ..‌ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದಿರೋದೇನು.. ಮಗಳು ಅಪ್ಪನಿಗೆ ಪ್ರತಿ ತಿಂಗಳು ಒಂದು ಲಕ್ಷ ಹಣ ನೀಡುತ್ತಿರುವುದೇಕೆ? ಎಲ್ಲಾ ಸತ್ಯ ಇಲ್ಲಿದೆ ನೋಡಿ..

ನಟ ಸತ್ಯಜಿತ್ ಎಲ್ಲರಿಗೂ ಪರಿಚಿತರೇ.. ನೂರಾರು ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ.. ಆದರೆ ಕೆಲ ತಿಂಗಳ ಹಿಂದೆ ಗ್ಯಾಂಗ್ರಿನ್ ನಿಂದಾಗಿ ಸತ್ಯಜಿತ್ ಅವರು ಕಾಲು ಕಳೆದುಕೊಂಡಿದ್ದಾರೆಂಬ ಸುದ್ದಿಯಾಗಿತ್ತು.. ಆ ಸಮಯದಲ್ಲಿ ಬಹಳಷ್ಟು ಜನರು ಅವರಿಗೆ ಸಹಾಯವನ್ನೂ ಸಹ ಮಾಡಿದ್ದರು. ಆದರೆ ಅವರ ಕುಟುಂಬದಲ್ಲಿ ಅಷ್ಟು ಬಡತನವಿತ್ತಾ? ಅಸಲಿ ವಿಚಾರ ಇಲ್ಲಿದೆ ನೋಡಿ..

ಸತ್ಯಜಿತ್ ಅವರಿಗೆ ಮೂವರು ಮಕ್ಕಳು.. ಒಂದು ಹೆಣ್ಣು.. ಎರಡು ಗಂಡು.. ಸದ್ಯ ಮೂವರೂ ಕೆಲಸದಲ್ಲಿದ್ದಾರೆ.. ಕೆಲ ವರ್ಷಗಳ ಹಿಂದೆ ಮಗಳನ್ನು ಪೈಲಟ್ ಮಾಡುವ ಉದ್ದೇಶದಿಂದ ಹೊರದೇಶದಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಓದಿಸಿದ್ದರು.. ಅದೇ ಸಮಯದಲ್ಲಿ ಕಾರಣಾಂತರಗಳಿಂದ ತಾವಿದ್ದ ಮನೆಯನ್ನೂ ಸಹ ಮಾರಿದ್ದರು.. ಆ ಬಳಿಕ ಮೂರು ವರೆ ವರ್ಷಗಳ ಹಿಂದೆ ಮಗಳು ಪೈಲಟ್ ಆಗಿ ಏರ್ ಲೈನ್ಸ್ ಒಂದಕ್ಕೆ ಕೆಲಸಕ್ಕೆ ಸೇರಿಕೊಂಡರು..

ಸಂಬಳ ಲಕ್ಷಗಳಲ್ಲಿಯೇ ಇತ್ತು.. ಮಗಳು ಅಪ್ಪ ಅಮ್ಮನಿಗೆ ದುಡಿದು ಹಣ ನೀಡುವುದು ಕರ್ತವ್ಯ ಎಂದು ಆಕೆಯೂ ಪ್ರತಿ ತಿಂಗಳು ಒಂದು ಲಕ್ಷ ಹಣ ನೀಡುತ್ತಾ ಬಂದಳು.. ಮೂರು ವರೆ ವರ್ಷದಿಂದ ಯಾವ ತೊಂದರೆಯೂ ಇರಲಿಲ್ಲ.. ಅತ್ತ ಇಬ್ಬರು ಗಂಡು ಮಕ್ಕಳು ಸಹ ಕೆಲಸ ಮಾಡುತ್ತಿದ್ದರು.. ಮಗಳು ಸಹ ತಿಂಗಳಿಗೆ ಒಂದು ಲಕ್ಷ ರೂಪಾಯಿ ಹಣ ನೀಡುತ್ತಿದ್ದಳು.‌..

ಹೀಗೆ ಜೀವನ ನಡೆಯುತಿತ್ತು.. ಮಗಳ ಮದುವೆಯೂ ಆಯಿತು.. ನಂತರ ಕಳೆದ ಎಂಟು ತಿಂಗಳ ಹಿಂದೆ ಮಗಳು ಗರ್ಭಿಣಿಯಾದ ಕಾರಣ ರಜೆ ತೆಗೆದುಕೊಂಡಳು.. ಮಗುವಿನ ಜನನದ ನಂತರ ಕೆಲಸಕ್ಕೆ ಬರುವುದಾಗಿ ತಿಳಿಸಿದಳು.. ಅವಳಿಗೆ ಬರುತ್ತಿದ್ದ ಸಂಬಳ ನಿಂತಿತು.. ಅತ್ತ ಅಮ್ಮನಿಗೆ ಫೋನ್ ಮಾಡಿ ವಿಚಾರ ತಿಳಿಸೊದಳು.. ಇನ್ನು ಮುಂದೆ ಸಂಬಳ ಬರೋದಿಲ್ಲ.. ಅಣ್ಣ ಹಾಗೂ ತಮ್ಮ ದುಡಿಯುತ್ತಾರಲ್ಲಾ ಅದರಲ್ಲಿ ಮ್ಯಾನೇಜ್ ಮಾಡಿಕೊಳ್ಳಿ ಎಂದಳು.. ವಿಚಾರ ಸತ್ಯಜಿತ್ ಗೆ ತಿಳಿದು ಅದೆಲ್ಲಾ ಆಗಲ್ಲ.. ಮನೆಗೆ ಬಾ ಮಾತನಾಡಬೇಕು ಎಂದರಂತೆ.. ಸರಿ ಆಯ್ತು ಬರುವೆ ಎಂದು ಮಗಳು ಹಾಗೂ ಅಳಿಯ ತಂದೆ ಮನೆಗೆ ಹೋದರು.. ಗರ್ಭಿಣಿ ಆದರೂ ಅರ್ಧ ಸಂಬಳ ಬರುತ್ತದೆಯಲ್ಲಾ ಆ ಹಣವನ್ನು‌ ಕೊಡು ಎಂದು ಸತ್ಯಜಿತ್ ಹೇಳಿದರಂತೆ.. ಆದರೆ ಮಗಳು ತನ್ನ ಪೇ ಸ್ಲಿಪ್ ತೋರಿಸಿ ಮಗುವಾದ ಬಳಿಕವಷ್ಟೇ ಸಂಬಳ ಬರೋದು.. ಈಗ ಬರೋದಿಲ್ಲ ಎಂದರಂತೆ..

ಆದರೆ ಅದನ್ನು ನಂಬದ ತಂದೆ ಬೇರೆಯವರ ಬಳಿ ಎಲ್ಲಾ ಫೋನ್ ಮಾಡಿಸಿ ಹಣ ನೀಡಿವಂತೆ ಒತ್ತಾಯಿಸುತ್ತಿದ್ದರಂತೆ.. ಇದು ಹೀಗೆ ನಡೆದಿತ್ತು.. ಈ ಬಗ್ಗೆ ಕೆಲ ದಿನಗಳ ಹಿಂದೆ ಮಗಳು ಪೊಲೀಸರ ಬಳಿ‌ ದೂರು ದಾಖಲಿಸಿದ್ದು.. ಸತ್ಯಜಿತ್ ಗೆ ವಿಚಾರ ತಿಳಿದಾಗ.. ನಾನು ಏನು ಕೇಳಿಲ್ಲ.. ಎನ್ನುತ್ತಿದ್ದಾರೆ.. ನಾನು ಏನೂ ಪಡೆದೂ ಇಲ್ಲ ಎನ್ನುತ್ತಿದ್ದಾರೆ.. ಅತ್ತ ನ್ಯಾಯಾಲಯದಲ್ಲಿ ಪ್ರಕರಣವಿದ್ದು ಅಲ್ಲಿಗೆ ತಾನು ಅಪ್ಪನಿಗೆ ಕಳುಹಿಸಿರುವ ಹಣ ವರ್ಗಾವಣೆಯ ಸ್ಟೇಟ್ಮೆಂಟ್.. ಹಾಗೂ ತನಗೆ ಈಗ ಸಂಬಳ ಬಾರದಿರುವ ಪೇ ಸ್ಲಿಪ್ ಎಲ್ಲವನ್ನ ನೀಡಿದ್ದಾರೆ..

ಆದರೆ ಇತ್ತ ಮಾದ್ಯಮದ ಜೊತೆ ಮಾತನಾಡುವ ಸಮಯದಲ್ಲಿ ಕಷ್ಟ ಪಟ್ಟು ಓದಿಸಿ ಸಾಕಿ ಸಲುಹಿದ ಮಗಳು ಹೀಗೆ ಮಾಡಿದಳೆಂದು ಸತ್ಯಜಿತ್ ಕಣ್ಣೀರಿಟ್ಟಿದ್ದಾರೆ.. ಅತ್ತ ಮಗಳು ಸಹ ಮಾದ್ಯಮದ ಜೊತೆ ಮಾತನಾಡಿ ಕಳೆದ ಎಂಟು ತಿಂಗಳಿಂದ ಹಣ ನೀಡು ನೀಡು ಎನ್ನುತ್ತಿದ್ದಾರೆ.. ನಾನು ಎಲ್ಲಿಂದ ತರಲಿ.. ನಾನು ಕೊಡದಿದ್ದರೆ ನನ್ನ ಗಂಡನನ್ನು‌ ಕೊಡು ಎನ್ನುತ್ತಿದ್ದಾರೆ.. ಅವರಿಗೂ ಕುಟುಂಬ ಇದೆ.. ಅವರು ಇವರಿಗೇಕೆ ಪ್ರತಿ ತಿಂಗಳು ಹಣ ಕೊಡಬೇಕು ಎನ್ನುತ್ತಿದ್ದಾರೆ.. ಒಟ್ಟಿನಲ್ಲಿ ಅಪ್ಪ ಮಗಳ ನಡುವಿನ ಹಣದ ವಿಚಾರ ಕೋರ್ಟ್ ಮೆಟ್ಟಿಲೇರಿದೆಯಷ್ಟೇ..