ರಾತ್ರೋ ರಾತ್ರಿ ಕನ್ನಡದ ಖ್ಯಾತ ಯುವ ನಟನನ್ನು ಇಲ್ಲವಾಗಿಸಿದ ಬಾಮೈದ.. ಕಾರಣವೇನು ಗೊತ್ತಾ.. ಹೆಣ್ಣು.. ಬೆಚ್ಚಿಬೀಳುವಂತಿದೆ..

ಜೀವನ ಯಾವಾಗ ಯಾವ ರೀತಿಯಲ್ಲಿ ತಿರುವು ಪಡೆಯುವುದೋ ಹೇಳಲಾಗದು.. ಒಮ್ಮೊಮ್ಮೆ ಜೀವನದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾದರೆ ಮತ್ತೆ ಕೆಲವೊಮ್ಮೆ ಸಾವೇ ಎದುರಾಗಿ ಬಿಡುತ್ತದೆ.. ಕಂಡ ಕನಸು ಭವಿಷ್ಯದ ಆಸೆಗಳು ಎಲ್ಲವನ್ನು ಬಿಟ್ಟು ಹೋಗುತ್ತಿರಬೇಕಷ್ಟೇ.. ಆದರೆ ಜವರಾಯ ಯಾರ ರೂಪದಲ್ಲಿ ಯಾವಾಗ ಬರುವನೋ ಹೇಳಲಾಗದಷ್ಟೇ.. ಇದೀಗ ರಾತ್ರೋ ರಾತ್ರಿ ಸ್ಯಾಂಡಲ್ವುಡ್ ನಟನಿಗೆ ತನ್ನ ಸ್ವಂತ ಬಾಮೈದನ ರೂಪದಲ್ಲಿ ಎದುರಾಗಿದ್ದು ಜೀವ ಕಳೆದುಕೊಂಡಿದ್ದಾನೆ..

ಹೌದು ಸ್ಯಾಂಡಲ್‌ವುಡ್ ನ ಯುವ ನಟ ಸತೀಶ್ ವಜ್ರ ಅವರನ್ನು ಚಾಕುವಿನಿಂದ ಇಲ್ಲವಾಗಿಸಿರುವ ಘಟನೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ ನಡೆದಿದೆ.. ಇದೀಗ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿಚಾರ ತಿಳಿದು ಬೆಂಗಳೂರಿಗರು ಬೆಚ್ಚಿ ಬಿದ್ದಿದ್ದಾರೆ..

ಹೌದು ಒಂದಿಷ್ಟು ಕಿರುಚಿತ್ರಗಳನ್ನು ಮಾಡಿರುವ ಸತೀಶ್ ವಜ್ರ ಜೊತೆಗೆ ಲಗೋರಿ ಎಂಬ ಚಿತ್ರದಲ್ಲಿ ನಟನಾಗಿ ಬಣ್ಣಹಚ್ಚಿದನು.. ಆದರೆ ನಿನ್ನೆ ರಾತ್ರಿ ಅವರ ಮನೆಯಲ್ಲಿಯೇ ಚಾಕುವಿನಿಂದ ಈತನನ್ನು ಇಲ್ಲವಾಗಿಸಿದ್ದಾರೆ‌‌.. ನಿನ್ನೆ ರಾತ್ರಿ ಮನೆಯಲ್ಲಿರುವಾಗ ಈ ರೀತಿ ಮಾಡಿ ಹೋಗಿದ್ದಾರೆ ಎನ್ನಲಾಗಿದೆ.. ಆರ್.ಆರ್ ನಗರದ ನಿವಾಸದಲ್ಲಿ ನಟನ ಜೀವನ ಮುಕ್ತಾಯ ಮಾಡಲಾಗಿದೆ. ಇದೀಗ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸತೀಶ್ ಪಾರ್ಥೀವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ..

ಆದರೆ ಈ ಘಟನೆಗೆ ಬಲವಾದ ಕಾರಣವೂ ಇದೆ.. ಕೆಲ ತಿಂಗಳ ಹಿಂದಷ್ಟೇ ಸತೀಶ್ ವಜ್ರ ಓರ್ವ ಯುವತಿಯನ್ನು ಪ್ರೀತಿಸಿ ಸತೀಶ್ ಮದುವೆಯಾಗಿದ್ದರು, ಆದರೆ ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಜೀವ ಕಳೆದುಕೊಂಡಿದ್ದಳು.. ತನ್ನ ಅಕ್ಕನಿಗೆ ಸಾವಿಗೆ ಸತೀಶ್‌ ಕಾರಣ ಎಂದು ಶಂಕಿಸಿ ಬಾಮೈದನೇ ಇದೀಗ ಸತೀಶ್ ನನ್ನು ಇಲ್ಲವಾಗಿಸಿದ್ದಾನೆ ಎನ್ನಲಾಗಿದ್ದು ತನಿಖೆಯಲ್ಲಿ ಸತ್ಯ ಬಯಲಾಗಬೇಕಿದೆ..

ಸಿನಿಮಾ ಕಿರುಚಿತ್ರ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟೀವ್ ಇದ್ದ ಸತೀಶ್ ವಜ್ರ.. ಇನ್ಸ್ಟಾಗ್ರಾಂ ನಲ್ಲಿ ಬಹಳ ಫೇಮಸ್ ಕೂಡ ಹೌದು‌. ದಿನಕ್ಕೆ ಎರಡು ಮೂರು ರೀಲ್ಸ್ ಹಾಕುತ್ತಾ ಖ್ಯಾತಿ ಪಡೆದಿದ್ದನು.. ಆದರೆ ಕಳೆದ ಮೂರು ತಿಂಗಳ ಹಿಂದಷ್ಟೇ ತನ್ನ ಪ್ರೀತಿಸಿದ ಹುಡುಗಿಯ ಅಗಲಿಕೆಗೆ ಕಾರಣನಾದವ ಇಂದು ಆತನೇ ಇಲ್ಲವಾಗಿ ಹೋದನು.. ಇಷ್ಟೇ ಜೀವನ..