ಕನ್ನಡದ ಮತ್ತೊಬ್ಬ ಖ್ಯಾತ ನಟ ಇನ್ನಿಲ್ಲ.. ನಿಜಕ್ಕೂ‌ ಏನಾಗಿತ್ತು ಗೊತ್ತಾ..

ಕನ್ನಡ ಚಿತ್ರರಂಗದ ವಿಕಟಕವಿ ಎಂದೇ ಖ್ಯಾತಿ ಪಡೆದಿರುವ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್. ನಿರ್ದೇಶನದ ಜೊತೆಗೆ ಕಥೆಗಾರ ಹಾಗೂ ಸಾಕಷ್ಟು ಸಿನಿಮಾಗಳ ನಿರ್ಮಾಣ ಕೂಡ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ ಅವರು ಮನೆಯಲ್ಲಿ ಒಬ್ಬರ ಸಾವಾಗಿದೆ. ಯೋಗರಾಜ್ ಭಟ್ ಅವರ ಪತ್ನಿಯ ತಂದೆ ಸತ್ಯ ಉಮ್ಮತ್ತಾಲ್ ಅವರ ನೆನ್ನೆ ವಿಧಿವಶರಾಗಿದ್ದಾರೆ. ಸತ್ಯ ಉಮ್ಮತ್ತಾಲ್ ಅವರು ಕೂಡ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾಗಿದ್ದರು. ಇದೀಗ ಇಂತಹ ನಟನನ್ನು ಕಳೆದುಕೊಂದು ಕನ್ನಡ ಚಿತ್ರರಂಗ ಬರದಾಗಿದೆ.

ಯೋಗರಾಜ್ ಭಟ್ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಹಾಗೂ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗದ ವಿಕಟಕವಿ ಎಂದೇ ಖ್ಯಾತಿ ಪಡೆದಿದ್ದಾರೆ. 2006 ರಲ್ಲಿ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ ಮುಂಗಾರು ಮಳೆ ಸಿನಿಮಾವನ್ನು ನಿರ್ದೇಶನ ಮಾಡಿ ಬಾರಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಮನಿ, ರಂಗ ಎಸ್ ಎಸ್ ಎಲ್ ಸಿ, ಗಾಳಿಪಟ, ಮುಂಗಾರು ಮಳೆ, ಪಂಚರಂಗಿ ನಂತಹ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಖ್ಯಾತಿ ಪಡೆದಿದ್ದಾರೆ.

ಯೋಗರಾಜ್ ಭಟ್ ಅವರ ಹೆಂಡತಿ ರೇಣುಕಾ ಭಟ್. ಇದೀಗ ಯೋಗರಾಜ್ ಭಟ್ ಅವರ ಮಾವ, ಅಂದರೆ ರೇಣುಕಾ ಭಟ್ ಅವರ ತಂದೆ ನೆನ್ನೆ ವಿಧಿವಶರಾಗಿದ್ದಾರೆ. ಅವರ ಹೆಸರು ಸತ್ಯ ಉಮ್ಮತ್ತಾಲ್, ಸತ್ಯ ಉಮ್ಮತ್ತಾಲ್ ಅವರಿಗೆ 70 ವರ್ಷ ವಯಸ್ಸಾಗಿತ್ತು. ಸತ್ಯ ಉಮ್ಮತ್ತಾಲ್ ಅವರು ಬೆಂಗಳೂರಿನ ಅವರ ಅಳಿಯ ಯೋಗರಾಜ್ ಭಟ್ ಅವರ ಮನೆಯಲ್ಲಿಯೇ ವಾಸವಾಗಿದ್ದರು. ನೆನ್ನೆ ಸತ್ಯ ಉಮ್ಮತ್ತಾಲ್ ಅವರು ತಮ್ಮ ಮನೆಯಲ್ಲೆ ಕೊನೆ ಉಸಿರೆಳೆದಿದ್ದಾರೆ. ಯೋಗರಾಜ್ ಭಟ್ ಅವರ ಮನೆಯಲ್ಲೇ ಸತ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಿದ್ಧತೆಗಳನ್ನು ಮಾಡಲಾಗಿತ್ತು.

ಸತ್ಯ ಉಮ್ಮತ್ತಾಲ್ ಅವರು ಕೂಡ ಕನ್ನಡದ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ನಿರ್ದೇಶಕ ಪವನ್ ಕುಮಾರ್ ಅವರ ಮೊದಲ ಮೊದಲ ಸಿನಿಮಾ ಲೈಫು ಇಷ್ಟೇನೆ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹಾಗೂ ಸಣ್ಣ ಪಾತ್ರಗಳಲ್ಲಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ ಕೆಂಡ ಸಂಪಿಗೆ, ದನ ಕಾಯೋನು, ಜಯಮ್ಮನ ಮಗ, ಇನ್ನು ಹಲವಾರು ಸಿನಿಮಾಗಳಲ್ಲಿ ಸತ್ಯ ಅವರು ನಟಿಸಿದ್ದಾರೆ. ಇದೀಗ ಸತ್ಯ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದು ನಿಜಕ್ಕೂ ಬೇಸರ ತಂದುಕೊಟ್ಟಿದೆ.

ಚಿತ್ರರಂಗದ ಅನೇಕ ನಟರು ಸತ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಿರ್ದೇಶಕ ಮಂಸೋರೆ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಸತ್ಯ ಅವರ ಅಗಲಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುವ ಮೂಲಕ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಸತ್ಯ ಅವರ ಪಾರ್ಥಿವ ಶರೀರದ ದರ್ಶನವನ್ನು ಯೋಗರಾಜ್ ಭಟ್ ಅವರ ಮನೆಯಲ್ಲೇ ಮಾಡಲಾಗಿತ್ತು. ಇನ್ನು ನೆನ್ನೆ ಸಂಜೆ ಬೆಂಗಳೂರಿನ ರುದ್ರಭೂಮಿಯಲ್ಲಿ ಅವರ ಶರೀರಕ್ಕೆ ಅಂತ್ಯ ಸಂಸ್ಕಾರ ಮಾಡಲಾಯಿತು.