ಚೆನ್ನಾಗಿ ಹೋಗುತ್ತಿದ್ದ ಸತ್ಯ ಧಾರಾವಾಹಿ.. ಇದ್ದಕಿದ್ದ ಹಾಗೆ ಏನಾಯ್ತು ನೋಡಿ..

ಕಿರುತೆರೆಯ ಧಾರಾವಾಹಿಗಳು ಶುರುವಿನಲ್ಲಿ ಕುತೂಹಲದ ಜೊತೆಗೆ ಕ್ರೇಜ ಅನ್ನೂ ಸಹ ಹುಟ್ಟುಆಕೋದು ಈಗಿನ ದಾರಾವಾಹಿಗಳ ಟ್ರೆಂಡ್‌ ಆಗಿದೆ.. ಕೆಲ ದಾರಾವಾಹಿಗಳು ಅದ್ಧೂರಿಯಾಗಿ ನಿರ್ಮಾಣಗೊಂಡು ರೋಚಕತೆಯಿಂದ ಶುರುವಾಗಿ ಕೊನೆಗೆ ಹಳ್ಳ ಹಿಡಿಯೋದು ಉಂಟು.. ಕೆಲ ತಿಂಗಲ ಬಳಿಕ ಕತೆಯಲ್ಲಿ ಗಟ್ಟಿತನವಿಲ್ಲದಾಗ ಈ ರೀತಿ ಜನರಿಗೆ ಬೋರ್‌ ಆಗಿ ಅದು ಧಾರಾವಾಹಿಯ ರೇಟಿಂಗ್‌ ಏಲೂ ಪರಿಣಾಮ ಬೀರೋದುಂಟು.. ಆದರೆ ಕೆಲ ಧಾರಾವಾಹಿಗಳು ಮಾತ್ರ ಎಷ್ಟೇ ಬೋರ್‌ ಆದರೂ ಅದನ್ನು ಪ್ರೇಕ್ಷ ಮಹಾಶಯ ಮಾತ್ರ ನೋಡೋದು ಬಿಡೋದಿಲ್ಲ.. ಅದಕ್ಕೆ ಉದಾಹರಣೆ ಮಂಗಳ ಗೌರಿ ಮದುವೆ ಧಾರಾವಾಹಿ.. ಎಷ್ಟೇ ವರ್ಷ ಆದರೂ ಸಹ ಮಂಗಳ ಗಢರಿಯ ಕಣ್ಣೀರ ಕತೆಯಿಂದಾಚೆ ಹೋಗದ ಪ್ರೇಕ್ಷಕರು ಆ ಧಾರಾವಾಹೊಯನ್ನು ಕನ್ನಡ ಕಿರುತೆರೆಯ ಟಾಪ್‌ ಹತ್ತು ಧಾರಾವಾಹಿಗಳ್ಲಲ್ಲಿ ಒಂದಾಗಿಸಿರೋದುಂಟು.. ಇನ್ನು ವರ್ಷಗಳ ಹಿಂದೆ ಶುರುವಾದ ಸತ್ಯ ಧಾರಾವಾಹಿಯ ಕತೆಗೆ ಬಂದರೆ ಬಹಳ ರೋಚಕತೆಯಿಂದ ಕೂಡಿದ್ದ ಧಾರಾವಾಹಿ ಇದೀಗ ಹಳ್ಳಕ್ಕೆ ಬಿದ್ದಿದೆ..

ಹೌದು ಸತ್ಯ ಧಾರಾವಾಹಿಯಲ್ಲಿ ಸತ್ಯನ ಮದುವೆಯಾದರೂ ಕೂಡ ಅದ್ಯಾಕೋ ಮುಗ್ಗರಿಸಿದೆ.. ಸತ್ಯ ಹಾಗೂ ಕಾರ್ತಿಕ್‌ ಮದುವೆಯಾದಾಗಿನಿಂದಲೂ ಕಥೆಯಲ್ಲಿ ಸ್ವಲ್ಪ ಅಸ್ಪಷ್ಟತೆ ಕಾಣುತ್ತಿದೆ. ನಿತ್ಯವೂ ಸತ್ಯ-ಕಾರ್ತಿಕ್‌ ಕಿತ್ತಾಟ, ಸೀತಾಳ ಸಿಡಿಮಿಡಿತನವೇ ಧಾರಾವಾಹಿಯನ್ನು ರಬ್ಬರ್‌ ಎಳೆದಂತೆ ಆಗುತ್ತಿದೆ. ಪ್ರೇಕ್ಷಕರು ಸತ್ಯ ಮನೆಯಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ. ಮನೆಯವರೆಲ್ಲಾ ಸತ್ಯಳನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? ಇತ್ತ ದಿವ್ಯಾಗೆ ಯಾವಾಗ ಬಾಲನ ಬಗ್ಗೆ ಗೊತ್ತಾಗುತ್ತದೆ ಎಂದು ತಿಳಿಯಲು ಕಾತುರರಾಗಿದ್ದಾರೆ. ಆದರೆ, ಧಾರಾವಾಹಿ ಮಾತ್ರ ಆಮೆ ಹೆಜ್ಜೆ ಇಡುತ್ತಿರುವುದು ಎಲ್ಲರಿಗೂ ಬೇಸರ ತಂದಿದೆ. ಯಾವ ವಿಚಾರವೇ ಇಲ್ಲದೇ, ಧಾರಾವಾಹಿಯನ್ನು ಸುಖಾ ಸುಮ್ಮನೆ ಅಗತ್ಯವಿಲ್ಲದ ಡೈಲಾಗ್‌ ಗಳಿಂದ ತುಂಬಲಾಗುತ್ತಿದೆ. ಇದು ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ಬೋರ್‌ ಹೊಡೆಸುತ್ತಿದೆ.

ದೊಡ್ಡಪ್ಪನ ಜೊತೆ ಸತ್ಯ ಕಿತ್ತಾಟ.. ಕಾರ್ತಿಕ್‌ನನ್ನು ರೂಮಿಗೆ ಕರೆದುಕೊಂಡು ಹೋಗುವಾಗ ಸತ್ಯಳ ದೊಡ್ಡಪ್ಪ, ಅದು ನಮ್ಮ ರೂಮ್‌ ಎಂದು ಹೇಳುತ್ತಾರೆ. ಈ ವಿಚಾರಕ್ಕೆ ಕಿತ್ತಾಡಿದಾಗ ಕಾರ್ತಿಕ್‌, ಒಂದು ರೂಮಿಗಾಗಿ ಇಷ್ಟೆಲ್ಲಾ ಕಿತ್ತಾಡಬೇಕಾ ಎಂದು ಮನಸಲ್ಲೇ ಅಂದುಕೊಳ್ಳುತ್ತಾನೆ. ನಂತರ ಸತ್ಯ ಹಾಗೂ ಕಾರ್ತಿಕ್‌ ಇಬ್ಬರೂ ರೂಮಿಗೆ ಹೋದಾಗ ರೂಮಿಗಾಗಿ ಕಿತ್ತಾಡಿದ ವಿಚಾರ ಕಾರ್ತಿಕ್‌ ಕೇಳಿದ್ದಕ್ಕೆ. ಸತ್ಯ, ಅಡ್ಜಸ್ಟ್ ಮಾಡಿಕೊಳ್ಳಬೇಕು ಎಂದು ಹೇಳುತ್ತಾಳೆ. ಇನ್ನು ಕಾರ್ತಿಕ್‌ ಬಟ್ಟೆಗಳನ್ನು ತಂದಿರುವುದಿಲ್ಲ. ಹೀಗಾಗಿ ಪಂಚೆ ತಂದುಕೊಡುತ್ತಾಳೆ. ಕಾರ್ತಿಕ್‌ ಪಂಚೆ ಉಟ್ಕೊಳ್ಬೇಕಾ ಎಂದು ಯೋಚಿಸುತ್ತಿರುತ್ತಾನೆ.

ಅಮ್ಮನಿಗೆ ಸತ್ಯ ಸಂಸಾರದ ಬಗ್ಗೆ ಚಿಂತೆ.. ಸತ್ಯ ಹಾಗೂ ಕಾರ್ತಿಕ್‌ ಗಂಡ-ಹೆಂಡತಿಯಂತೆ ಇಲ್ಲ. ಸುಮ್ಮನೆ ನಮ್ಮ ಎದುರಿಗೆ ನಾಟಕವಾಡುತ್ತಿದ್ದಾರೆ ಅಷ್ಟೇ ಎಂದು ಜಾನಕಿ ಗಿರಿಜಮ್ಮನಿಗೆ ಹೇಳುತ್ತಾಳೆ. ಈ ಬಗ್ಗೆ ಮೊದಲು ತಮಾಷೆ ಮಾಡುವ ಗಿರಿಜಮ್ಮ, ಜಾನಕಿ ಮಾತುಗಳನ್ನು ಕೇಳಿ ಶಾಕ್‌ ಆಗುತ್ತಾಳೆ. ಇದು ಹೀಗೆ ಮುಂದುವರೆದರೆ ಕಷ್ಟವಾಗುತ್ತೆ ಎಂದು ಜಾನಕಿ ತನ್ನ ಆತಂಕವನ್ನು ವ್ಯಕ್ತಪಡಿಸುತ್ತಾಳೆ. ಆಗ ಗಿರಿಜಮ್ಮ, ಸಮಸ್ಯೆ ಇದ್ದರೆ ಅದಕ್ಕೆ ಪರಿಹಾರವೂ ಇರುತ್ತದೆ ಎಂದು ಹೇಳಿ, ನಾನು ಎಲ್ಲವನ್ನೂ ಸರಿ ಮಾಡುತ್ತೀನಿ ಎಂದು ಹೇಳುತ್ತಾಳೆ.

ಸತ್ಯ ಕಾಲುಗುಣದ ಬಗ್ಗೆ ಮಾವನಿಗೆ ಹೆಮ್ಮೆ.. ಕಳೆದ 25 ವರ್ಷಗಳಿಂದ ಕೋರ್ಟ್‌ನಲ್ಲಿದ್ದ ಬಿಡದಿ ಪ್ರಾಪರ್ಟಿಯ ಕೇಸ್‌ ತೀರ್ಪು ಬಂದಿದ್ದು, ಅದು ರಾಮಚಂದ್ರ ರಾಯರ ಪರವಾಗಿಯೇ ಆಗಿರುತ್ತದೆ. ಅದಕ್ಕೆ ಸತ್ಯ ಕಾಲು ಗುಣವೇ ಕಾರಣ ಎಂದು ರಾಯರು ಹೇಳುತ್ತಾರೆ. ಆಗ ಕೀರ್ತನಾ ಸತ್ಯಳನ್ನು ಬೀದಿ ಬಿಕಾರಿ ಎಂದೆಲ್ಲಾ ಬೈದಾಗ, ಲಕ್ಷ್ಮಣ ವಿಷಯ ಗೊತ್ತಿಲ್ಲದೇ ಏನು ಮಾತನಾಡಬೇಡ ಎಂದು ಹೇಳುತ್ತಾರೆ. ಬೆಳಿಗ್ಗೆ ಯೋಚಿಸುತ್ತಾ ಕೂತಿರುವಾಗ ಸತ್ಯ ಬಂದು ಆ ಆಸ್ತಿ ನಿಮಗೆ ಸಿಗುತ್ತದೆ. ದೇವರ ಬಳಿ ಕೇಳಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈ ಮಾತುಗಳನ್ನು ಲಕ್ಷ್ಮಣ ಹೇಳಿ, ಕೀರ್ತನಾಳನ್ನು ಬೈದು ಕಳಿಸುತ್ತಾನೆ.

ಹೀಗೆ ಗಟ್ಟಿತನವಿಲ್ಲದ ಕತೆ ಹೀಗೆ ಆಗಿದರೆ ಬಹುಶಃ ಧಾರಾವಾಹಿ ಮುಗಿಸುವ ಹಂತಕ್ಕೆ ಬಂದು ನಿಲ್ಲಬಹುದಾಗಿದ್ದು ಆದಷ್ಟು ಬೇಗ ದಾರಾವಾಹಿಯ ಕತೆಯಲ್ಲಿ ಬದಲಾವಣೆ ತನ್ನಿ ಎನ್ನುತ್ತಿದ್ದಾರೆ ಸತ್ಯ ಧಾರಾವಾಹಿ ಪ್ರೇಕ್ಷಕರು.. ಅತ್ತ ಸತ್ಯ ಧಾರಾವಾಹಿ ಪ್ರಸಾರವಾಗುವ ಅದೇ ಸಮಯಕ್ಕೆ ರಾಮಾಚಾರಿ ಧಾರಾವಾಆಹಿ ಸಹ ಪ್ರಸಾರವಾಗುತ್ತಿದ್ದು ಆ ಧಾರಾವಾಹಿಯೂ ಸಹ ಶುರುವಿನಲ್ಲಿ ಅಬ್ಬರಿಸಿ ಸದ್ಯ ನಿಧಾನ ಗತಿಯಲ್ಲಿ ತನ್ನ ದಾರಿಯಲ್ಲಿ ಸಾಗುತ್ತಿದೆ ಎನ್ನಬಹುದು..

ಪ್ರಖ್ಯಾತ ಜ್ಯೋತಿಷಿ.. ದೈವಜ್ಞಾ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 98808 68514 ನೂರಕ್ಕೆ ನೂರು ಪರಿಹಾರ‌.. ವಿದ್ಯೆ ಉದ್ಯೋಗ ಕುಟುಂಬ ಸಮಸ್ಯೆ ಸಂತಾನ ದಾಂಪತ್ಯದಲ್ಲಿ ತೊಂದರೆ ಸಾಲದ ಬಾಧೆ ಕೋರ್ಟ್ ಕೇಸ್ ಜಾಗದ ವಿಚಾರ.. ಅರೋಗ್ಯ ಬಿಸಿನೆಸ್.. ಹಾಗೂ ಇನ್ನಿತರ ಎಲ್ಲಾ ಸಮಸ್ಯೆಗಳಿಗೆ ಫೋನ್ ಅಥವಾ ವಾಟ್ಸಪ್ ಮೂಲಕ ಶಾಶ್ವತ ಪರಿಹಾರ.. ನಿಮ್ಮ ಒಂದು ಕರೆ ನಿಮ್ಮ ಭವಿಷ್ಯ ಬದಲಿಸಬಹುದು.. ಕರೆ ಮಾಡಿ.. 98808 68514