ಸತ್ಯ ಧಾರಾವಾಹಿಯ ನಟಿ ಸತ್ಯ ನಿಜಕ್ಕೂ ಯಾರು.. ಆಕೆಯ ಗಂಡ ಯಾರು ಗೊತ್ತಾ

ಮನೆಯಲ್ಲಿ ಕೂತು ಪ್ರತಿದಿನ ಟಿವಿ ನೋಡುವ ವೀಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗುವುದು ಅವರ ಸಮಯ ಕಳೆಯುವುದು ಧಾರಾವಾಹಿಗಳ ಮೂಲಕ. ಕನ್ನಡ ಎಲ್ಲಾ ಚಾನೆಲ್ ಗಳಲ್ಲೂ ಅನೇಕ ಧಾರಾವಾಹಿಗಳು ಪ್ರಸಾರವಾಗುತ್ತಿದೆ. ಆದರೆ ಎಲ್ಲಾ ಧಾರಾವಾಹಿಗಳು, ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆಯುವುದಿಲ್ಲ. ಕಥೆ ಚೆನ್ನಾಗಿದ್ದು, ಕಲಾವಿದರ ಅಭಿನಯ ಚೆನ್ನಾಗಿದ್ದು, ಕಥೆಯಲ್ಲಿ ಭಿನ್ನತೆ ಇದ್ದರೆ ಮಾತ್ರ ವೀಕ್ಷಕರು ಧಾರಾವಾಹಿಯನ್ನು ಇಷ್ಟಪಡುತ್ತಾರೆ. ಕಥೆಯಲ್ಲಿ ಪ್ರತಿ ಎಪಿಸೋಡ್ ನಲ್ಲೂ ಒಂದು ಟ್ವಿಸ್ಟ್ ಇರಬೇಕು ಎಂದು ವೀಕ್ಷಕರು ಬಯಸುತ್ತಾರೆ. ಹೀಗೆ ಪ್ರತಿ ಎಪಿಸೋಡ್ ನಲ್ಲೂ ಒಂದಲ್ಲ ಟ್ವಿಸ್ಟ್ ಗಳನ್ನು ವೀಕ್ಷಕರಿಗೆ ಕೊಡುತ್ತಿರುವ ಧಾರಾವಾಹಿ ಸತ್ಯ. ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿ ವೀಕ್ಷಕರಿಗೆಲ್ಲ ಬಹಳ ಇಷ್ಟವಾಗಿದೆ. ಸತ್ಯ ಸೀರಿಯಲ್ ನಲ್ಲಿ ಸತ್ಯ ಪಾತ್ರದಲ್ಲಿ ನಟಿಸುವ ಸತ್ಯ ನಿಜಕ್ಕೂ ಯಾರು? ನಿಜ ಜೀವನದಲ್ಲಿ ಹೇಗಿರ್ತಾರೆ ಗೊತ್ತಾ?

ಸತ್ಯ ಧಾರಾವಾಹಿಯನ್ನು ತಪ್ಪದೆ ನೋಡುವವರಿಗೆ ಸತ್ಯ ಪಾತ್ರದ ಬಗ್ಗೆ ಗೊತ್ತಿರುತ್ತದೆ. ಸತ್ಯ ಹುಡುಗಿಯೇ ಆದರೂ, ಆಕೆಯ ವರ್ತನೆ ಎಲ್ಲವೂ ಹುಡುಗನ ಹಾಗೆ. ಸದಾ ಜೀನ್ಸ್ ಟೀ ಶರ್ಟ್ ಧರಿಸಿ, ಹುಡುಗರ ಹಾಗೆ ಹೇರ್ ಕಟ್ ನಲ್ಲಿ ಓಡಾಡುವ ಹುಡುಗಿ ಸತ್ಯ. ಮನೆಗೆ ಗಂಡುಮಗನ ಹಾಗಿರುವವಳು ಸತ್ಯ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು, ತಾಯಿಗೆ ಮತ್ತು ಕುಟುಂಬಕ್ಕೆ ನೆರವಾಗಿದ್ದಾಳೆ ಸತ್ಯ. ಸತ್ಯಳ ಜೀವನ ಈಗ ಹೇಗಾಗಿದೆ ಅಂದ್ರೆ, ಆಕೆ ಏನು ಮಾಡಲು ಹೋದರು ಅಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಆ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ ಸತ್ಯ.

ಎಲ್ಲಾ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ, ಸಮಸ್ಯೆಗಳಿಂದ ಹೊರಬಂದು, ಎಲ್ಲರನ್ನು ಕಾಪಾಡುತ್ತಾಳೆ ಸತ್ಯ. ಒಬ್ಬ ಹೀರೋಗೆ ತಾನೇನು ಕಡಿಮೆ ಇಲ್ಲ ಎನ್ನುವ ಹಾಗಿದ್ದಾಳೆ. ಹೀಗೆ ಸತ್ಯ ಧಾರಾವಾಹಿಯ ಪ್ರತಿ ಎಪಿಸೋಡ್ ನಲ್ಲೂ ಸತ್ಯ ಜೀವನಕ್ಕೆ ಒಂದಲ್ಲ ಒಂದು ಟ್ವಿಸ್ಟ್ ಮೂಡಿ ಬರುತ್ತಲೇ ಇದೆ. ಸತ್ಯ ಅದೆಲ್ಲದರಿಂದ ಪಾರಾಗುತ್ತಾ ಇದ್ದಾಳೆ. ಪ್ರತಿ ಎಪಿಸೋಡ್ ನ ಕೊನೆಯಲ್ಲಿ ವೀಕ್ಷಕರಿಗೆಲ್ಲ ನಾಳಿನ ಎಪಿಸೋಡ್ ನಲ್ಲಿ ಏನಾಗುತ್ತದೆ ಎನ್ನುವ ಕುತೂಹಲವಿರುತ್ತದೆ.

ಈ ರೀತಿ ಸತ್ಯ ಸೀರಿಯಲ್ ನ ಟೈಟಲ್ ರೋಲ್ ನಲ್ಲಿ ಅಭಿನಯಿಸುತ್ತಿರುವ ನಾಯಕಿಯ ಬಗ್ಗೆ ನಿಮಗೆ ಗೊತ್ತಾ? ಸತ್ಯ ಸೀರಿಯಲ್ ನ ಸತ್ಯ ಪಾತ್ರದಲ್ಲಿ ನಟನೆ ಮಾಡುತ್ತಿರುವ ಕಲಾವಿದೆಯ ಹೆಸರು ಗೌತಮಿ ಜಾಧವ್. ಇವರನ್ನು ಸೀರಿಯಲ್ ನಲ್ಲಿ ನೋಡಿ ನಿಜ ಜೀವನದಲ್ಲೂ ಹೀಗೆಯೇ ಇರುತ್ತಾರಾ ಎನ್ನುವ ಕುತೂಹಲ ಜನರಿಗೆ. ಆದರೆ ಗೌತಮಿ ಜಾಧವ್ ಅವರು ನಿಜ ಜೀವನದಲ್ಲಿ ಹೀಗೆ ಇರುವುದಿಲ್ಲ. ಎಲ್ಲಾ ಹೆಣ್ಣುಮಕ್ಕಳ ಹಾಗೆ ನಟಿ ಗೌತಮಿ ಸಹ ಸೀರೆ ಧರಿಸಿ, ಸಾಂಪ್ರದಾಯಿಕ ಉಡುಪುಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ.

ಗೌತಮಿ ಅವರಿಗೆ ಚಿತ್ರರಂಗ ಏನು ಹೊಸದಲ್ಲ. ನಟಿ ಗೌತಮಿ ಜಾಧವ್ ಮೊದಲಿಗೆ ನಟಿಸಿದ್ದು ಸಿನಿಮಾದಲ್ಲೇ, ಕಿನಾರೆ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಗೌತಮಿ. ಅದಾದ ಬಳಿಕ ಅವರು ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಗೌತಮಿ ಅವರು ನಟನೆಗೆ ಕಂಬ್ಯಾಕ್ ಮಾಡಿದ್ದು ಸತ್ಯ ಸೀರಿಯಲ್ ಮೂಲಕ. ಸತ್ಯ ಧಾರಾವಾಹಿ ಎಷ್ಟರ ಮಟ್ಟಿಗೆ ಜನರಿಗೆ ರೀಚ್ ಆಗಿದೆ ಎನ್ನುವುದು ನಮಗೆಲ್ಲ ತಿಳಿದಿದೆ. ಈ ಧಾರಾವಾಹಿಯ ಮೂಲಕ ನಟಿ ಗೌತಮಿ ಜಾಧವ್ ಅವರ ಅಭಿಮಾನಿ ಬಳಗ ಕೂಡ ಹೆಚ್ಚಾಯಿತು. ಗಂಡು ಮಗನ ಹಾಗೆ ಮನೆಯ ಜವಾಬ್ದಾರಿ ತೆಗೆದುಕೊಳ್ಳುವ ಸತ್ಯ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ.

ಗೌತಮಿ ಅವರ ನಿಜ ಜೀವನ ಮತ್ತು ಅವರ ಕುಟುಂಬದ ಬಗ್ಗೆ ಹೇಳುವುದಾರೆ, ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಖ್ಯಾತ ಪತ್ರಕರ್ತ ಅಭಿಷೇಕ್ ಅವರು ಗೌತಮಿ ಜಾಧವ್ ಅವರ ಪತಿ. ಇಬ್ಬರು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ನಟಿ ಗೌತಮಿ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತಿಯ ಜೊತೆಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಗೌತಮಿ ಅವರು ಪಪೆಟ್ಸ್ ಎನ್ನುವ ಕಿರುಚಿತ್ರ ಒಂದರಲ್ಲಿ ಕೂಡ ನಟಿಸಿದ್ದು, ಇತ್ತೀಚೆಗೆ ಅದರ ಟೀಸರ್ ಬಿಡುಗಡೆಯಾಗಿ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ..