ಕನ್ನಡತಿ ಧಾರಾವಾಹಿಯಿಂದ ಹೊರ ನಡೆದರಾ ವರೂ ಪಾತ್ರಧಾರಿ ಸಾರಾ ಅಣ್ಣಯ್ಯ‌.. ಕಾರಣವೇನು ಗೊತ್ತಾ..

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರಾವಾಹಿ ಶುರುವಿನಿಂದಲೂ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿತ್ತು.. ಕತೆ, ನೈಜ್ಯ ಅಭಿನಯ.. ಕನ್ನಡ ಭಾಷೆಯನ್ನು ಬಳಸುವ ರೀತಿ ಹೀಗೆ ಸಾಕಷ್ಟು ವಿಚಾರಗಳಿಂದ ಗಮನ ಸೆಳೆದಿದ್ದ ಕನ್ನಡತಿ ದೊಡ್ಡ ಮಟ್ಟದಲ್ಲಿಯೇ ಯಶಸ್ಸು ಪಡೆದಿತ್ತು.. ಇದಕ್ಕೆ ಆ ಧಾರಾವಾಹಿಯ ಕಲಾವಿದರೂ ಸಹ ಮುಖ್ಯ ಕಾರಣರಾಗಿದ್ದರು.. ಎಲ್ಲಾ ಪಾತ್ರಧಾರಿಗಳಿಗೂ ಸಹ ಈ ಧಾರಾವಾಹಿ ಹೊಸ ಹೆಸರನ್ನೇ ತಂದುಕೊಟ್ಟಿತ್ತು.. ಜನರು ಕಲಾವಿದರಿಗಳನ್ನು ಧಾರಾವಾಹಿಯ ಪಾತ್ರದ ಹೆಸರಿನಿಂದಲೇ ಕರೆಯಲು ಆರಂಭಿಸಿದ್ದರು.. ಅಂತಹ ಪಾತ್ರಗಳಲ್ಲಿ ಹರ್ಷ ಭುವಿ ಅಮ್ಮಮ್ಮ ವರೂ ಸಾನಿಯಾ ಬಿಂದು ಸುಚಿ ಹೀಗೆ ಪ್ರತಿಯೊಂದು ಪಾತ್ರವನ್ನೂ ಸಹ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು..

ಅದರಲ್ಲಿ ಭುವಿ ಸ್ನೇಹಿತೆ ವರೂ ಪಾತ್ರವೂ ಒಂದು.. ನಟಿ ಸಾರಾ ಅಣ್ಣಯ್ಯ ವರೂ ಪಾತ್ರವನ್ನು ನಿಭಾಯಿಸುತ್ತಿದ್ದರು.. ಇತ್ತ ಧಾರಾವಾಹಿಯಲ್ಲಿ ಹರ್ಷ ಭುವಿಯ ಮದುವೆಯಾದ ನಂತರ ವರೂ ಪಾತ್ರ ಕಡಿಮೆಯಾಗಿರುವುದು ಎಲ್ಲರಿಗೂ ತಿಳಿದಿದೆ.. ಹರ್ಷ ಭುವಿ ಅಮ್ಮಮ್ಮ‌ ಸಾನಿಯಾ ಹೀಗೆ ಇಷ್ಟೇ ಪಾತ್ರದ ನಡುವೆ ಕತೆ ಸಾಗುತಿದ್ದು ವರೂ ಪಾತ್ರ ಆಗಲೋ‌ ಈಗಲೋ ಬಂದು ಹೋಗುತಿತ್ತು.. ಕೆಲ ದಿನಗಳಿಂದ ಅದೂ ಸಹ ನಿಂತಿದೆ.. ಇತ್ತ ನಟಿ ಸಾರಾ ಅಣ್ಣಯ್ಯ ಪಾತ್ರದಿಂದ ಹೊರ ನಡೆದರಾ ಎಂಬ ಅನುಮಾನ ಪ್ರೇಕ್ಷಕರಿಗೆ ಮೂಡಿತ್ತು.. ಹೌದು ಕಿರುತೆರೆ ನಟಿ ಸಾರಾ ಅಣ್ಣಯ್ಯ ಅವರು ವರುಧಿನಿ ಎಂದೇ ಫೇಮಸ್. ಕನ್ನಡತಿ ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರ ಸಾಕಷ್ಟು ಗಮನ ಸೆಳೆಯುತ್ತಿದೆ. ಈಗ ಅವರು ಧಾರಾವಾಹಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಸುತ್ತಾಟ ಆರಂಭಿಸಿದ್ದಾರೆ.

ಸಾರಾ ಅಣ್ಣಯ್ಯ ಅವರು ವರುಧಿನಿ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಮೂಲಕ ಅವರು ಸಾಕಷ್ಟು ಗಮನ ಸೆಳೆದಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ಏರಿಳಿತ ಇದೆ. ಅದನ್ನು ಅವರು ಸರಿಯಾಗಿ ನಿರ್ವಹಿಸುತ್ತಿದ್ದಾರೆ. ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಸಾರಾ ಈಗ ಲೇಹ್​ ಲಡಾಕ್​ ಟ್ರಿಪ್​ನಲ್ಲಿದ್ದಾರೆ. ಈ ಫೋಟೋಗಳನ್ನು ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅವರು ಸುತ್ತಾಟದಲ್ಲಿ ಇರುವ ಕಾರಣ ಸಾರಾ ಪಾತ್ರ ತೆರೆಮೇಲೆ ಅಷ್ಟಾಗಿ ಕಾಣಿಸುತ್ತಿಲ್ಲ. ಆದರೆ ಮತ್ತೆ ಪಾತ್ರದ ಅವಶ್ಯಕತೆ ಬಿದ್ದಾಗ ಸಾರಾ ಅಣ್ಣಯ್ಯ ಮರಳುವರು ಎಂದು ತಿಳಿದುಬಂದಿದೆ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622