ಸುದೀಪ್ ಮಗಳ ಹುಟ್ಟುಹಬ್ಬಕ್ಕೆ ಊಹಿಸಲಾಗದ ವಿಶೇಷ ಉಡುಗೊರೆ ಕೊಟ್ಟ ವಾಸುಕಿ ವೈಭವ್..

ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ದಂಪತಿಯ ಮುದ್ದಿನ ಮಗಳು ಸಾನ್ವಿ‌ ಸುದೀಪ್ ಅವರ 16 ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬಿಗ್ ಬಾಸ್ ನ ವಾಸುಕಿ ವೈಭವ್ ಸಾನ್ವಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ..

ಹೌದು ಇಂದು ಸಾನ್ವಿ ಅವರ 16ನೇ ವರ್ಷದ ಹುಟ್ಟುಹಬ್ಬ.. ಮಗಳ ಹುಟ್ಟುಹಬ್ಬಕ್ಕೆ ಸುದೀಪ್ ಅವರು ಬೆಳ್ಳಂಬೆಳಿಗ್ಗೆ ವಿಶೇಷ ಸಾಲುಗಳನ್ನು ಬರೆದು ಪೋಸ್ಟ್ ಮಾಡಿದ್ದರು‌‌.. “ನೆನ್ನೆ ಮೊನ್ನೆ ಇದ್ದ ಹಾಗಿದೆ, ಹೇಗಪ್ಪಾ ನಂಬೋದು,, ನನ್ನ ಮಗಳೀಗ ,, ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು,, ಕೂಡಿಟ್ಟಿರುವೆ ನಾ,, ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ.. ಕನಸು ನೀನು ನಿನ್ನಿಂದಲೇ ಕಲಿಯುವ.. ಕೂಸು ನಾನು ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು.. ” ಎಂದು ಬರೆದು ವಿಶೇಷವಾಗಿ ಹಾರೈಸಿದ್ದರು..

ಇದೀಗ ವಾಸುಕಿ ವೈಭವ್ ಅವರೂ ಕೂಡ ಮರೆಯಲಾಗದ ವಿಶೇಷ ಉಡುಗೊರೆ ನೀಡಿದ್ದಾರೆ..‌ ಹೌದು, ಸಾನ್ವಿ ಸುದೀಪ್ ಅವರಿಗೆ ವಾಸುಕಿ ಎಂದರೆ ಮೊದಲಿನಿಂದಲೂ ಬಹಳ ಇಷ್ಟ.. ವಾಸುಕಿ ವೈಭವ್ ಅವರನ್ನು‌ ನೋಡುವ ಸಲುವಾಗಿ ಸಾನ್ವಿ ಅವರು ಅಂದು ಬಿಗ್ ಬಾಸ್ ಫಿನಾಲೆಗೆ ಬಂದಿದ್ದರು‌‌.. ಅದೇ ದಿನ ವೇದಿಕೆ ಮೇಲೆ ಸ್ವತಃ ಸುದೀಒ ಅವರೇ ನನ್ನ ಮಗಳಿಗೆ ನೀವಂದ್ರೆ ಬಹಳ ಇಷ್ಟ.. ನಿಮಗಾಗಿಯೇ ಶೋ ನೋಡಲು ಬಂದಿದ್ದಾರೆ ಎಂದು ತಿಳಿಸಿದ್ದರು.. ಆನಂತರ ಇಬ್ಬರು ಬಹಳ ಒಳ್ಳೆಯ ಸ್ನೇಹಿತರಾಗಿದ್ದರು..

ಇದೀಗ ಸಾನ್ವಿ ಅವರ ಹುಟ್ಟುಹಬ್ಬಕ್ಕಾಗಿ ವಾಸುಕಿ ಅದ್ಭುತವಾದ ಹಾಡೊಂದನ್ನು ಬರೆದು ತಾವೇ ಕಂಪೋಸ್ ಮಾಡಿದ್ದಾರೆ.. ಅಷ್ಟೇ ಅಲ್ಲದೆ ಆ ಹಾಡನ್ನು ಕಿಚ್ಚ ಸುದೀಪ್ ಹಾಗೂ ಪ್ರಿಯಾ ಸುದೀಪ್ ಅವರೇ ಹಾಡಿದ್ದು ಸದ್ಯ ವೈರಲ್ ಆಗಿದೆ.. ಹುಟ್ಟುಹಬ್ಬಕ್ಕೆ ಈ ರೀತಿ ಸ್ಪೆಷಲ್ ಉಡುಗೊರೆ ನೀಡಿದ್ದಕ್ಕಾಗಿ ವಾಸುಕಿ ಅವರಿಗೆ ಸಾನ್ವಿ ಅವರು ಧನ್ಯವಾದ ತಿಳಿಸಿದ್ದಾರೆ..