ಶುರುವಾಯ್ತು ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ.. ಜೀವ ಇರುವವರೆಗೂ ಜೊತೆ ಇರ್ತೀನಿ..

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಪ್ರೀತಿಯಾಗೋದು ಹೊಸ ವಿಚಾರವೇನೂ ಅಲ್ಲ.. ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನಗಳ ಕಾಲ ಉಳಿಯುವ ಸಲುವಾಗಿ ಪ್ರೀತಿ ಮಾಡೋದು ಉಂಟು.. ಇದು ಇಂದು ನಿನ್ನೆಯದಲ್ಲ.. ಮೊದಲ ಸೀಸನ್ ನಿಂದಲೂ ನಡೆದುಕೊಂಡು ಬಂದಿದೆ.. ಪ್ರತಿ ಸೀಸನ್ ನಲ್ಲಿಯೂ ಒಂದೊಂದು ಪ್ರೇಮದ ಹಕ್ಕಿಗಳ ಜೋಡಿ ಬಿಗ್ ಬಾಸ್ ಮನೆಯಲ್ಲಿದೆ.. ಆದರೆ ಆ ಜೋಡಿ ಹೊರಗೆ ಬಂದ ನಂತರವೂ ಆ ಪ್ರೀತಿಯನ್ನು ಮುಂದುವರೆಸುತ್ತದೆ ಎಂಬುದು ಮಾತ್ರ ಸುಳ್ಳು.. ಕೆಲವರು ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾದರೆ ಮತ್ತಷ್ಟು ಮಂದಿ ಹೊರಗೆ ಬಂದ ನಂತರ ಸ್ನೇಹವನ್ನು ಮಾತ್ರ ಮುಂದುವರೆಸಿಕೊಂಡು ಹೋದದ್ದು ಇದೆ.. ಆದರೆ ಕಳೆದ ಸೀಸನ್ ನ ಅರವಿಂದ್ ಹಾಗೂ ದಿವ್ಯಾ ಉರುಡುಗ ಮಾತ್ರ ತಮ್ಮ ಪ್ರೀತಿಯಲ್ಲಿ ಬಹಳ ಗಂಭೀರವಾಗಿದ್ದು ಮದುವೆಯಾಗಲಿದ್ದಾರೆ ಎನ್ನುವ ಮಾತಿದೆ..

ಇನ್ನು ಈ ಸೀಸನ್ ನಲ್ಲಿಯೂ ಬಿಗ್ ಬಾಸ್ ಮನೆಯೊಳಗೆ ಪ್ರೇಮದ ಹಕ್ಕಿಗಳ ಕಲರವ ಹೆಚ್ಚಾಗಿಯೇ ಕೇಳುತ್ತಿದ್ದು ಅದಾಗಲೇ ಪ್ರೇಮ ನಿವೇದನೆಯನ್ನೂ ಸಹ ಮಾಡಿಕೊಂಡಿದೆ.. ಆ ಜೋಡಿ ಮತ್ಯಾವುದೂ ಅಲ್ಲ ಅವರೇ ಸಾನ್ಯ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ.. ಹೌದು ಇಷ್ಟು ದಿನಗಳ ಕಾಲ ನಾವಿಬ್ಬರೂ ಫ್ರೆಂಡ್ಸ್ ಬೇರೆ ಏನೂ ಇಲ್ಲ ಎಂದು ಬಿಗ್ ಬಾಸ್ ಕನ್ನಡ ಓಟಿಟಿ ಶೋನಿಂದಲೂ ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಅವರು ಹೇಳಿಕೊಂಡು ಬಂದಿದ್ದರು.. ಆದರೆ ಈಗ ನಡೆದದ್ದೇ ಬೇರೆ.. ಹೌದು ಪುಟ್ಟ ಗೌರಿ ಸಾನ್ಯಾ ಅಯ್ಯರ್ ರೂಪೇಶ್ ಶೆಟ್ಟಿ ಬಳಿ ನೇರವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.. ಇದಕ್ಕೆ ರೂಪೇಶ್ ಶೆಟ್ಟಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.. ಹೌದು ಸಾನ್ಯಾ ನೇರವಾಗಿ ರೂಪೇಶ್ ಅವರ ಬಳಿ ಹೋಗಿ ಯಾಕೋ ನಿನ್ನ ಮೇಲೆ ಇದ್ಯಾಗ್ತಿದಿಯಲ್ಲ ನಂಗೆ ಎಂದಿದ್ದಾರೆ..

ಹೌದು ರೂಪೇಶ್ ಶೆಟ್ಟಿ ಸಾನ್ಯಾ ಅಯ್ಯರ್ ಆಟದ ಬಗ್ಗೆ ಬಾತ್‌ರೂಮ್ ಹೊರಗಡೆ ಚರ್ಚೆ ಮಾಡುತ್ತಿದ್ದರು.. ಎರಡು ಆಟಗಳನ್ನು ಸೋತಿರುವುದಕ್ಕೆ ರೂಪೇಶ್ ಶೆಟ್ಟಿ ಬೇಸರ ಮಾಡಿಕೊಂಡಿದ್ದರು.. ಸಾನ್ಯಾ ಅವರು ಚೆನ್ನಾಗಿ ಆಡಿದ್ದೀಯಾ.. ಗೆಲ್ಲದಿರೋದೆಲ್ಲ ಲಕ್ ಎಂದು ಸಮಾಧಾನ ಮಾಡಿದ್ದಾರೆ.. ಆಗ ರೂಪೇಶ್ ಮುಂದಿನ ಬಾರಿ ನೀನು ಆಟ ಆಡ್ತೀಯಲ್ವಾ.. ಚೆನ್ನಾಗಿ ಆಟ ಆಡು ಎಂದಿದ್ದಾರೆ..

ಸಾನ್ಯಾ ಅಯ್ಯರ್ ಅವರು.. ಯಾಕೋ ನಿನ್ನ ಮೇಲೆ ಇದ್ಯಾಗ್ತಿದಿಯಲ್ಲ ನಂಗೆ ಎಂದು ರೂಪೇಶ್‌ಗೆ ಹೇಳಿದ್ದಾರೆ.. ಅದೇನು ಅಂತ ಅರ್ಥವಾಗದೆ ರೂಪೇಶ್ ಅವರು ಕೋಪ ಬರುತ್ತಿದೆಯಾ ಅಂತ ಪ್ರಶ್ನೆ ಮಾಡಿದ್ದಾರೆ.. ಆಗ ಸಾನ್ಯಾ ದೃಷ್ಟಿ ಆಗಿರಬೇಕು ಎಷ್ಟು ಜನರು ಕಣ್ಣು ಹಾಕಿರಬೇಕು ಎಂದು ರೂಪೇಶ್‌ಗೆ ದೃಷ್ಟಿ ತೆಗೆದಿದ್ದಾರೆ.. ನಿನ್ನ ಮುಖ ನೋಡೋಕೆ ಕಷ್ಟ ಆಗ್ತಿದೆ ಹೋಗ್ತೀನಿ ಎಂದು ಸಾನ್ಯಾ ಹೇಳಿದಾಗ ರೂಪೇಶ್ ಅವರು ಮುಖದ ಮೇಲೆ ಕಲೆ ಎಲ್ಲ ಬಂದಿದೆಯಲ್ಲಾ ಅದಕ್ಕೆನಾ ಎಂದಿದ್ದಾರೆ..

ಹೋಗ್ತೀನಿ ನಾನು ಎಂದು ಸಾನ್ಯಾ ಹೇಳಿದಾಗ ರೂಪೇಶ್ ಅವರು ಓವರ್ ಆಗಿ ಆಡಬೇಡ ಇವತ್ತು ಒಂದೇ ದಿನ ನೀನು ಹೀಗಿರೋದು ಎಂದಿದ್ದಾರೆ.. ಸಾನ್ಯಾ ಅವರು ನಂಗೆ ಒಂದೊಂದಿನ ಪ್ರೀತಿ ಹೆಚ್ಚಾಗತ್ತೆ ಎಂದಿದ್ದಾರೆ..

ಮತ್ತೊಮ್ಮೆ ಅಡುಗೆ ಮನೆಯಲ್ಲಿ ಸಾನ್ಯಾ ಅಯ್ಯರ್ ಹಾಗೂ ರೂಪೇಶ್ ಶೆಟ್ಟಿ ನಡುವೆ ಮಾತುಕತೆ ನಡೆದಿದೆ.. ಆ ವೇಳೆ ಸಾನ್ಯಾ ಅಯ್ಯರ್ ಅವರು ನನಗೆ ಕೋಪ ಜಾಸ್ತಿ.. ಆದರೆ ಕೋಪ ತೋರಿಸಿಕೊಂಡಿಲ್ಲ ಎಂದಿದ್ದಾರೆ.. ಆಗ‌ ರೂಪೇಶ್ ಅಡುಗೆ ಮನೆಯಲ್ಲಿ ಕ್ಲೀನ್ ಮಾಡುವಾಗ ಉಪಕರಣವೊಂದನ್ನು ಸಾನ್ಯಾ ಬೀಳಿಸಿದ್ದಾರೆ. ಆಗ ರೂಪೇಶ್ ಅವರು ಅನ್ಯಾಯ ಇದು ಎಂದಿದ್ದಾರೆ.. ಸಾನ್ಯಾ ಅವರು, ಬೈ ಮಿಸ್ಟೇಕ್ ಬಿತ್ತು ಎಂದಿದ್ದಾರೆ. ರೂಪೇಶ್ ಶೆಟ್ಟಿ.. ಟೆಸ್ಟ್ ಮಾಡಬೇಡ ಎನ್ನಲಾಗಿ ಸಾನ್ಯಾ ಅಯ್ಯರ್ ನಿನ್ನ ಹೃದಯದ ಟೆಸ್ಟ್ ಟ್ರೈ ಎಲ್ಲ ಮಾಡಿದೀನಿ ಎಂದಿದ್ದಾರೆ..

ರೂಪೇಶ್ ಶೆಟ್ಟಿ ಅವರು ಯಾವಾಗ ಮಾಡಿದೆ.. ನಾನು ಪಾಸ್ ಆಗಿದೀನಾ.. ಎಂದಿದ್ದಾರೆ.. ಸಾನ್ಯಾ ಅಯ್ಯರ್ ಫೇಟ್ ಕೊಟ್ಟಿರೋ ಟೆಸ್ಟ್ ಎಂದಿದ್ದಾರೆ.. ಅದಕ್ಕೆ ಅರ್ಥವಾಗದ ರೂಪೇಶ್ ಶೆಟ್ಟಿ ಹಾಗಂದರೆ ಏನು ಎಂದಿದ್ದು ಸಾನ್ಯಾ ಅಯ್ಯರ್ ಹೊಂದಿಕೊಂಡು ಅನ್ಯೋನ್ಯವಾಗಿ ಚೆನ್ನಾಗಿದ್ದೀವಿ ಎಂದಿದ್ದಾರೆ.. ಮತ್ತೆ ರೂಪೇಶ್ ಶೆಟ್ಟಿ ನಾನು ಹೋಗಿರಲಾ ಎಂದು ಕೇಳಿ ಹೊರಡಲು ಮುಂದಾದಾಗ ಸಾನ್ಯಾ ಅಯ್ಯರ್ ಹೋಗಿರಮ್ಮಾ.. ಎಂದಿದ್ದಾರೆ.. ರೂಪೇಶ್ ಶೆಟ್ಟಿ.. ಅಮ್ಮ ಅಂತ ಯಾಕೆ ಹೇಳ್ತಿದ್ದೀಯಾ? ಎಂದು ಕೇಳಿದ್ದಕ್ಕೆ ಸಾನ್ಯಾ ಅಯ್ಯರ್.. ಔಟ್ ಆಫ್ ಲವ್.. ಎಂದಿದ್ದಾರೆ.. ಅದಕ್ಕೆ ರೂಪೇಶ್ ಶೆಟ್ಟಿ ಕಿಡ್ನಿ ಹಾರ್ಟ್ ಹತ್ರ ಬಂದು ಬ್ರೋ ಕಂಗ್ರಾಜ್ಯುಲೇಶನ್ ಅಂತ ಹೇಳಿ ಹೋಯ್ತು.. ಎಂದಿದ್ದಾರೆ..

ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಪಕ್ಷಿಗಳ ಮಾತುಕತೆ ಜೋರಾಗಿಯೇ ನಡೆಯುತ್ತಿದ್ದು.. ಅದಾಗಲೇ ಇಬ್ಬರು ಹುಡುಗರಿಂದ ಮೋಸ ಹೋಗಿರುವ ಸಾನ್ಯಾ ಗೆ ರೂಪೇಶ್ ಶೆಟ್ಟಿ ನಿಜವಾಗಿ ಪ್ರೀತಿ ಕೊಟ್ಟು ಜೋಡಿಯಾಗುವರಾ ಅಥವಾ ಇದೆಲ್ಲಾ ಬಿಗ್ ಬಾಸ್ ಮನೆಗೆ ಮಾತ್ರ ಸೀಮಿತವಾ ಕಾದು ನೋಡಬೇಕಷ್ಟೇ..

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯಂ.. ಪಂಡಿತ್ ಶ್ರೀನಿವಾಸ್ ಭಟ್ ಗುರೂಜಿ.. 20 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಅಸಾಧ್ಯವಾದ ಸಮಸ್ಯೆಗಳಿಗೆ ಇಲ್ಲಿ ಸಾಧ್ಯ ಆಗುವ ರೂಪದಲ್ಲಿ ಖಚಿತ ಪರಿಹಾರ, ನೂರಕ್ಕೆ ನೂರರಷ್ಟು ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಅಥವಾ ವಾಟ್ಸಪ್ ಮಾಡಿ 9916889622. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. 9916889622