ಮದುವೆಯಾಗುತ್ತಿದ್ದೇನೆ.. ನೀವೆಲ್ಲರೂ ಬಂದು ಹಾರೈಸಿ.. -ನಟಿ ಸಂಜನಾ ಗಲ್ರಾನಿ.. ಹುಡುಗ ಯಾರು ಗೊತ್ತಾ?

ಕಳೆದ ಕೆಲ ತಿಂಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಪ್ರಕರಣದಲ್ಲಿ ಕೇಳಿ ಬಂದ ಹೆಸರು ಸಂಜನಾ ಗಲ್ರಾನಿ.. ಹೆಸರು ಕೇಳಿದ್ದು ಮಾತ್ರವಲ್ಲ.. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಮೂರು ತಿಂಗಳು ಪರಪ್ಪನ ಅಗ್ರಹಾರದಲ್ಲಿ ನಟಿ ರಾಗಿಣಿಯೊಟ್ಟಿಗೆ ಸಮಯ ಕಳೆದು ಸದ್ಯ ಅನಾರೋಗ್ಯದ ಕಾರಣ ಮುಖ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರ ಬಂದರು..

ಇನ್ನು ಇದೀಗ ತಾವು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದು ಮದುವೆ ವಿಚಾರದ ಬಗ್ಗೆ ಸ್ಟೇಟಸ್ ಹಾಕಿಕೊಂಡಿದ್ದಾರೆ.. ಹೌದು ನಟಿ ರಾಗಿಣಿ ಅವರನ್ನು ವಿಚಾರಕೆ ಸಂಬಂಧಪಟ್ಟಂತೆ ಪೊಲೀಸರು ವಶಕ್ಕೆ ಪಡೆದಾಗ ನಟಿ ಸಂಜನಾ ಕೂಡ ಮಾದ್ಯಮದ ಮುಂದೆ ಪ್ರತಿಕ್ರಿಯೆ ಕೊಟ್ಟು ನನಗೂ ಇದಕ್ಕೂ ಸಂಬಂಧವಿಲ್ಲ ಎಂದಿದ್ದರು.. ಅವರು ಹೇಳಿಕೆ ಕೊಟ್ಟ ಕೆಲ ದಿನಗಳಲ್ಲಿಯೇ ನಟಿ ಸಂಜನಾ ಕೂಡ ಪರಪ್ಪನ ಅಗ್ರಹಾರದ ಪಾಲಾಗಿದ್ದರು..

ಎಷ್ಟೇ ಪ್ರಯತ್ನ ಪಟ್ಟರೂ ಜಾಮೀನು ಮಾತ್ರ ಸಿಗದೆ ಮೂರು ತಿಂಗಳು ಅಲ್ಲಿಯೇ ಕಳೆಯುವಂತಾಯಿತು.. ಆದರೆ ವಿಚಿತ್ರ ಎಂದರೆ ಸಂಜನಾ ಒಳಗಿದ್ದ ಸಮಯದಲ್ಲಿ ಹೊರಗೆ ಅವರ ಬಗ್ಗೆ ಕೆಲ ವಿಚಾರಗಳು ಹೊರ ಬಂದವು.. ಹೌದು ಸಂಜನಾ ಗಲ್ರಾನಿ ಅದಾಗಲೇ ಇಸ್ಲಾಂ ಡಾಕ್ಟರ್ ಒಬ್ಬರನ್ನು ಮದುವೆಯಾಗಿರುವ ವಿಚಾರ ಹೊರ ಬಂದಿದ್ದು.. ಅಷ್ಟೂ ದಿನ ಸಂಜನಾ ಆ ವಿಚಾರವನ್ನು ಎಲ್ಲಿಯೂ ಬಹಿರಂಗಗೊಳಿಸಿರಲಿಲ್ಲ.. ಅಷ್ಟೇ ಅಲ್ಲದೇ ಸಂಜನಾ ಕೂಡ ಇಸ್ಲಾಂ ಅನ್ನು ಸ್ವೀಕರಿಸಿದ್ದು ಹೆಸರು ಕೂಡ ಬದಲಿಸಿಕೊಂಡಿದ್ದರು.. ಸಂಜನಾಗೆ ಜಾಮೀನು ಸಿಕ್ಕ ನಂತರ ಅವರ ಪತಿಯ ಕಡೆಯವರೇ ಕಾರಿನಲ್ಲಿ ಬಂದು ಆಕೆಯನ್ನು ಕರೆದುಕೊಂಡು ಬೆಂಗಳೂರಿನ ಖಾಸಗಿ ರೆಸಾರ್ಟ್ ಗೆ ವಿಶ್ರಾಂತಿಗಾಗಿ ಹೋಗಿದ್ದರು ಎಂದು ಸುದ್ದಿಯಾಗಿತ್ತು..

ಇನ್ನು ಅದಾಗಲೇ ಮದುವೆಯಾಗಿರುವ ಸಂಜನಾ ಇದೀಗ ಮತ್ತೊಮ್ಮೆ ಮದುವೆ ಬಗ್ಗೆ ಮಾತನಾಡಿದ್ದಾರೆ.. ಹೌದು ಸಂಜನಾ ಹೊರ ಬಂದ ಬಳಿಕ ಮಾದ್ಯಮದ ಮುಂದೆ ಕಾಣಿಸಿಕೊಂಡಿರಲಿಲ್ಲ.. ಆದರೆ ನಟಿ ರಾಗಿಣಿ ಮಾತ್ರ ಸಾಕಷ್ಟು ಬಾರಿ ಮಾದ್ಯಮದ ಮುಂದೆ ಮಾತನಾಡಿದರು.. ಇದೀಗ ಸಂಜನಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಪೋಸ್ಟ್ ಗಳನ್ನು ಅಪ್ಲೋಡ್ ಮಾಡುತ್ತಿದ್ದು ಮದುವೆ ಬಗ್ಗೆಯೂ ಪೋಸ್ಟ್ ಮಾಡಿದ್ದಾರೆ..

ಒಂದು ಕಡೆ ಕರ್ಮದ ಬಗ್ಗೆ ಮಾತನಾಡಿರುವ ಸಂಜನಾ ಅವರು “ಇಸ್ಲಾಂ ಧರ್ಮದಲ್ಲಿ ಕರ್ಮ ಎಂಬುದೇ ಇಲ್ಲ.. ಕಿಫ್ರಾ ಎಂಬುದು ಇದೆ.. ನೀನು ಸಮಾಜಕ್ಕೆ ಏನು ಕೊಡುತ್ತೀಯೋ ಸಮಾಜ ಕೂಡ ನಿನಗೆ ಏನು ಕೊಡಬೇಕೋ ಅದನ್ನು ನೀಡುತ್ತದೆ.. ನೀನು ಒಳ್ಳೆಯದನ್ನು ಮಾಡಿದರೆ ಒಳಿತು ನಿನ್ನನ್ನು ಹಿಂಬಾಲಿಸುತ್ತದೆ.. ಯಾರದರೂ ನಿನಗೆ ತೊಂದರೆ ಕೊಟ್ಟರೆ ಅದಕ್ಕೆ ತಕ್ಕ ಪ್ರತಿಫಲ ಅವರೇ ಸ್ವೀಕರಿಸುತ್ತಾರೆ.. ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕು ಅಷ್ಟೇ.. ಎಂದಿದ್ದಾರೆ..

ಇನ್ನು ಮದುವೆ ವಿಚಾರವಾಗಿ ಮಾತನಾಡಿರುವ ಸಂಜನಾ ನಾನು ಮತ್ತೆ ಮದುವೆಯಾಗುತ್ತಿದ್ದೇನೆ.. ಎಲ್ಲರನ್ನೂ ಅಹ್ವಾನಿಸುತ್ತಿದ್ದೇನೆ.. ನನ್ನ ಮದುವೆ ಇದೇ ಫೆಬ್ರವರಿ 30 ರಂದು.. ಎಂದು ಪೋಸ್ಟ್ ಮಾಡಿದ್ದಾರೆ.. ಇದನ್ನು ನೋಡಿದ ನೆಟ್ಟಿಗರು ಸಂಜನಾಳನ್ನು ಕಾಲೆಳೆದಿದ್ದಾರೆ.. ಫೆಬ್ರವರಿ 30 ಇಲ್ಲದಿದ್ದರೂ ಕಾಲೆಳೆಯಲು ಪೋಸ್ಟ್ ಮಾಡಿದ ಸಂಜನಾರನ್ನು ಟ್ರೋಲ್ ಮಾಡಲಾಗಿದೆ.. ಆದರೆ ಇನ್ನೂ ಕೆಲವರು ಇದನ್ನೂ ನಂಬಿ ಸಂಜನಾರಿಗೆ ಎರಡನೇ ಬಾರಿ ಮದುವೆ ಆಗುತ್ತಿರುವುದಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.. ಒಟ್ಟಿನಲ್ಲಿ ಸದ್ಯ ಪರಪ್ಪನ ಅಗ್ರಹಾರದಿಂದ ಹೊರ ಬಂದ ಬಳಿಕ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಫಿಲಾಸಫಿ ಜೊತೆಗೆ ಈ ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆನ್ನಬಹುದು..