ಆಸ್ಪತ್ರೆಗೆ ದಾಖಲಾದ ಕನ್ನಡದ ಖ್ಯಾತ ನಟಿ..

ಸ್ಯಾಂಡಲ್ವುಡ್ ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಸದ್ದು ಮಾಡಿದ್ದ ನಟಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.. ಹೌದು ನಟಿ ಸಂಜನಾ ಇದ್ದಕ್ಕಿದ್ದ ಹಾಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ..

ಕಳೆದ ಐದು ತಿಂಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ‌ ಸುದ್ದಿಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರ ವಶದಲ್ಲಿದ್ದ ನಟಿ ಸಂಜನಾ ಅವರು ನಾಲ್ಕು ತಿಂಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಇದ್ದು ಆರೋಗ್ಯ ಸಮಸ್ಯೆ ಕಾರಣದಿಂದಾಗಿ ಜಾಮೀನಿನ ಮೇಲೆ ಹೊರ ಬಂದಿದ್ದರು.. ಪರಪ್ಪನ ಅಗ್ರಹಾರದಿಂದ ಯಾವ ಸಮಯದಲ್ಲಿ ಹೊರ ಬಂದರೂ ಎಂಬುದೇ ತಿಳಿಯದಂತೆ ಮಾದ್ಯಮಗಳಿಗೆ ಕಾಣಿಸಿಕೊಳ್ಳದೇ ಅಲ್ಲಿಂದ ಹೊರ ಬಂದು ಯಾರ ಕಣ್ಣಿಗೂ ಬೀಳದೇ ಬೆಂಗಳೂರಿನ ಹೊರ ವಲಯದ ಖಾಸಗಿ ರೆಸಾರ್ಟ್ ಒಂದರಲ್ಲಿ ಸ್ನೇಹಿತರೊಟ್ಟಿಗೆ ವಿಶ್ರಾಂತಿ ಪಡೆಯುತ್ತಿದ್ದರು..

ಇನ್ನಿ ಕೆಲ ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರೀತಿಗೆ ಧನ್ಯವಾದ ಹೇಳಿದ್ದು ಆದಷ್ಟು ಬೇಗ ಮರಳುವೆನೆಂದಿದ್ದರು.. ಆದರೆ ನಟಿ ರಾಗಿಣಿ ಅವರು ಮಾತ್ರ ಮೊನ್ನೆ ಮೊನ್ನೆಯಷ್ಟೇ ಪರಪ್ಪನ ಅಗ್ರಹಾರ ದಿಂದ ಹೊರ ಬಂದ ಕ್ಷಣದಿಂದಲೂ ಮಾದ್ಯಮದ ಜೊತೆ ಮಾತನಾಡಿ ನ್ಯಾಯ ಗೆದ್ದಿತು ಎಂದಿದ್ದರು.. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಪೋಸ್ಟ್ ಹಾಕುತ್ತಲೇ ಇದ್ದು ಅಭಿಮಾನಿಗಳಿಗೆ ಕಣ್ಣೀರಿಟ್ಟು ಧನ್ಯವಾದಗಳನ್ನು ತಿಳಿಸಿದ್ದಾರೆ.. ಇನ್ನು ಅತ್ತ ರಾಗಿಣಿ ಅವರು ದೇವರು.. ದೇವಸ್ಥಾನ.. ಪೂಜೆ ಎಂದು ಬ್ಯುಸಿ ಆಗಿದ್ದರೆ ಇತ್ತ ನಟಿ ಸಂಜನಾ ಆಸ್ಪತ್ರೆ ಕಡೆಗೆ ಮುಖ ಮಾಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಟಿ ಸಂಜನಾ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.. ಜೊತೆಗೆ “ಈ ಹಿಂದೆಗಿಂತಲೂ ಬಲವಾಗಿ ಮರಳಲು ಚೇತರಿಸಿಕೊಳ್ಳುತ್ತಿದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಸದ್ಯ ಸಂಜನಾ ಅವರು ಆಸ್ಪತ್ರೆ ಬೆಡ್ ಮೇಲಿರುವ ಫೋಟೋ ನೋಡಿ ಅಭಿಮಾನಿಗಳು ಹಾಗೂ ಸ್ನೇಹಿತರು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದಾರೆ.. ಆದರೆ ಯಾವ ಆಸ್ಪತ್ರೆ ಖಚಿತವಾಗಿ ಯಾವ ವಿಚಾರಕ್ಕೆ ದಾಖಲಾಗಿದ್ದಾರೆ ಎಂಬುದನ್ನು ಮಾತ್ರ ಎಲ್ಲಿಯೂ ತಿಳಿಸಿಲ್ಲ..